Advertisement

FDA ಪರೀಕ್ಷೆ ಹಗರಣ… ಯಾರನ್ನೂ ಬಿಡೋ ಪ್ರಶ್ನೆ ಇಲ್ಲ: ಖರ್ಗೆ

02:12 PM Nov 01, 2023 | Team Udayavani |

ಕಲಬುರಗಿ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ವಿವಿಧ ಹುದ್ದೆಗಳ ನೇಮಕಾತಿ ಪರೀಕ್ಷೆಯ ಅಕ್ರಮದಲ್ಲಿ ಭಾಗಿಯಾದ ಯಾರೊಬ್ಬರನ್ನು ಬಿಡೋದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಮತ್ತು ಜಿಲ್ಲಾ ಉಸ್ತುವಾರಿ‌ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

Advertisement

ಕನ್ನಡ ರಾಜ್ಯೋತ್ಸವದ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ರಮ ನಡೆಯುವ ಸಾಧ್ಯತೆಗಳ‌ ಮನಗಂಡೇ 200 ಮೀಟರ್ ಒಳಗೆ ಯಾರನ್ನು ಬಿಟ್ಟಿಲ್ಲ. ಎರಡು ಹಂತದ ಡಿಟೆಕ್ಟರ್ ಅಳವಡಿಸಲಾಗಿದ್ದರ ಪರಿಣಾಮ ಪರೀಕ್ಷೆ ಬರೆಯುವ ಸಂದರ್ಭದಲ್ಲೇ ಹಲವರನ್ನು ವಶಕ್ಕೆ ಪಡೆದು ಬಂಧಿಸಲಾಗಿದೆ. ಈಗ ಎಲ್ಲ ಆಯಾಮಗಳಿಂದ ತನಿಖೆ ನಡೆಯುತ್ತಿದೆ.‌ ಪ್ರಕರಣದಲ್ಲಿ ಅಧಿಕಾರಿಗಳೇ ಇರಲಿ, ಇನ್ನಾರೇ ದೊಡ್ಡ ಕುಳಗಳಿರಲಿ, ಅವರನ್ನು ರಕ್ಷಿಸುವುದಿಲ್ಲ.‌ ಬಂಧಿಸಿ ಕಠಿಣ ಕ್ರಮ‌ಕೈಗೊಳ್ಳುತ್ತೇವೆ ಎಂದರು.

ಮುಂಜಾಗ್ರತಾ ಕ್ರಮ ಕೈಗೊಂಡ ಪರಿಣಾಮವೇ ಹಲವರು ಗೈರು ಹಾಜರಾಗಿದ್ದಾರೆ. ಕೆಲವು ಅಕ್ರಮವಾಗಿರಬಹುದು.‌ ಆದರೆ ಈಗಿನದ್ದು ಅವಲೋಕಿಸಿದರೆ ಪ್ರಶ್ನೆ ಪತ್ರಿಕೆ ಬಹಿರಂಗಗೊಂಡಿಲ್ಲ. ಆದರೂ ಎಲ್ಲಿ, ಲೋಪವಾಗಿದೆ.ಇದರಲ್ಲಿ ಅಧಿಕಾರಿಗಳ ಪಾತ್ರವೇನು? ಎಂಬುದರ ಕುರಿತಾಗಿ ತನಿಖೆ ನಡೆದಿದ್ದು, ವೈಜ್ಞಾನಿಕ ನಿಟ್ಟಿನಲ್ಲಿ ತನಿಖೆ ನಡೆದಿರುವುದರಿಂದ ಆರೋಪಿಗಳ್ಯಾರು ಪ್ರಕರಣದಿಂದ ಪಾರಾಗುವಂತಿಲ್ಲ ಎಂದು ಪುನರುಚ್ಚರಿಸಿದರು.

ತನಿಖೆ: ಅಕ್ರಮದ ತನಿಖೆಯು ಪ್ರಗತಿ ಯಲ್ಲಿದೆ. ತನಿಖಾ ಆಳ ಹಾಗೂ ವಿಸ್ತಾರ ಅವಲೋಕಿಸಿ ಯಾವ ಮಟ್ಟದ ತನಿಖೆ ಎಂಬುದನ್ನು ಮುಂದಿನ ದಿನಗಳಲ್ಲಿ ನಿರ್ಧರಿಸಲಾಗುವುದು.‌ ಆದರೆ ಪ್ರಕರಣದ ತನಿಖೆ ಸಿಬಿಐಗೆ ವಹಿಸುವುದಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಠಪಡಿಸಿದರು.‌

ಪಿಎಸ್ಐ ಹಗರಣ ಕ್ಕೂ ಈ ಎಫ್ ಡಿಎ ಅಕ್ರಮಕ್ಕೂ ವ್ಯತ್ಯಾಸಗಳಿವೆ. ಪಿಎಸ್ಐ ಹಗರಣ ನಡೆದಿದ್ದರೂ ಆಗಿನ ಬಿಜೆಪಿ ಸರ್ಕಾರದ ಗೃಹ ಸಚಿವರೇ ಏನು ಆಗಿಲ್ಲ‌ಎಂದು ವಿಧಾನಸಭೆಯಲ್ಲಿ ಹೇಳಿದ್ದರು. ಸಚಿವರೇ ಅಕ್ರಮದಲ್ಲಿ ಭಾಗಿಯಾದ ಅಭ್ಯರ್ಥಿ ಯನ್ನು ಹಿಡಿಯಬೇಡಿ ಎಂಬ ಆಡಿಯೋ ಹೊರಗೆ ಬಂತು. ಅದಲ್ಲದೇ ಇನ್ನೂ ಹಲವರ ಹೆಸರು ಕೇಳಿ ಬಂದಿದ್ದರಿಂದ ನ್ಯಾಯಾಂಗ ತನಿಖೆ ಕೇಳಲಾಗಿತ್ತು. ‌ಆದರೆ ಕೊಡಲಿಲ್ಲ. ಈಗ ಸಿಬಿಐ ತನಿಖೆ ಎನ್ನುತ್ತಿದ್ದಾರೆ. ತಮ್ಮದು ವಾದ ಯಾವಾಗಲೂ ಬದ್ದತೆಯಿಂದ ಕೂಡಿದೆ ಎಂದು ತಿಳಿಸಿದರು.

Advertisement

ಇದನ್ನೂ ಓದಿ: Vijayapura: ಅಧಿಕಾರದ ಸಂಘರ್ಷದಿಂದ ಕಾಂಗ್ರೆಸ್ ಸರ್ಕಾರ ಪತನ : ಯತ್ನಾಳ

Advertisement

Udayavani is now on Telegram. Click here to join our channel and stay updated with the latest news.

Next