Advertisement

ಬಾಯ್‌ಕಟ್‌ ಮಾಡಿಸ್ತಾರಂತೆ ಪ್ರಿಯಾಂಕ

10:27 AM Sep 26, 2017 | |

ಪ್ರಿಯಾಂಕ ಉಪೇಂದ್ರ ಅವರು “ಸೆಕೆಂಡ್‌ ಹಾಫ್’ ಸಿನಿಮಾ ಮಾಡುತ್ತಿರೋದು ಗೊತ್ತೇ ಇದೆ. ಅದಾದ ಬಳಿಕ ಅವರು “ಹೌರ ಬ್ರಿಡ್ಜ್’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ಹೊಸ ಸುದ್ದಿಯೇನಲ್ಲ. ಆದರೆ, ಪ್ರಿಯಾಂಕ ಉಪೇಂದ್ರ ಅವರು “ಹೌರ ಬ್ರಿಡ್ಜ್’ ಚಿತ್ರದಲ್ಲಿ ವಿಶೇಷ ಗೆಟಪ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೌದು, “ಮಮ್ಮಿ’ ಸಿನಿಮಾ ನಿರ್ದೇಶಿಸಿದ್ದ ಲೋಹಿತ್‌, “ಹೌರ ಬ್ರಿಡ್ಜ್’ ನಿರ್ದೇಶಿಸುತ್ತಿದ್ದಾರೆ.

Advertisement

ಈ ಚಿತ್ರದಲ್ಲಿ ಲೋಹಿತ್‌ ಅವರು ಪ್ರಿಯಾಂಕ ಉಪೇಂದ್ರ ಅವರನ್ನು ವಿಶೇಷ ಗೆಟಪ್‌ನಲ್ಲಿ ತೋರಿಸಬೇಕೆಂದು ನಿರ್ಧರಿಸಿದ್ದಾರೆ. ಅಂದಹಾಗೆ, ಆ ವಿಶೇಷ ಗೆಟಪ್‌ ಏನು ಗೊತ್ತಾ? ಪ್ರಿಯಾಂಕ ಉಪೇಂದ್ರ ಅವರು “ಹೌರ ಬ್ರಿಡ್ಜ್’ನಲ್ಲಿ ಬಾಪ್‌ ಕಟ್‌ ಮಾಡಿಸಿ, ಸ್ಪೆಷಲ್‌ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಇದೇ ಮೊದಲ ಬಾರಿಗೆ ಅವರು ಆ ಚಿತ್ರಕ್ಕಾಗಿಯೇ ಬಾಪ್‌ಕಟ್‌ನಲ್ಲಿ ಮಿಂಚುತ್ತಿದ್ದು, ಇಷ್ಟರಲ್ಲೇ ಆ ಲುಕ್‌ ಕೂಡ ಹೊರಗೆ ಬರಲಿದೆಯಂತೆ.

ಈ ಕುರಿತು ಸ್ವತಃ ಪ್ರಿಯಾಂಕ ಉಪೇಂದ್ರ ಅವರೇ ಸ್ಪಷ್ಟಪಡಿಸಿದ್ದಾರೆ. ಕೊಲ್ಕತ್ತಾದಲ್ಲಿ ಆ ಚಿತ್ರದ ಫೋಟೋಶೂಟ್‌ ನಡೆಯಲಿದ್ದು, ಬಹುತೇಕ ಚಿತ್ರೀಕರಣ ಕೂಡ ಕೊಲ್ಕತ್ತಾದಲ್ಲೇ ನಡೆಯಲಿದೆಯಂತೆ. ಬೆಂಗಾಲಿ ಹಾಗೂ ತಮಿಳು ಭಾಷೆಗೆ ಚಿತ್ರ ಡಬ್‌ ಆಗಲಿದ್ದು, ಕೊಲ್ಕತ್ತಾದ ನುರಿತ ಕೆಲ ಪ್ರಮುಖ ಕಲಾವಿದರು ಆ ಚಿತ್ರದಲ್ಲಿ ನಟಿಸಲಿದ್ದಾರಂತೆ. ಇನ್ನು, ಪ್ರಿಯಾಂಕ ಉಪೇಂದ್ರ ಅವರ “ಸೆಕೆಂಡ್‌ ಹಾಫ್’ ಚಿತ್ರ ಕೂಡ ಹೊಸ ಅನುಭವ ನೀಡಿದೆಯಂತೆ.

ಮೊದಲ ಸಲ ಉಪೇಂದ್ರ ಅವರ ಸಹೋದರನ ಮಗನ ಜತೆ ನಟಿಸಿದ್ದು ಅವರಿಗೆ ಖುಷಿ ಕೊಟ್ಟಿದೆಯಂತೆ. ಅಷ್ಟೇ ಅಲ್ಲ, ಪ್ರಿಯಾಂಕ ಅವರಿಲ್ಲಿ ಪೊಲೀಸ್‌ ಪೇದೆಯಾಗಿ ಕಾಣಿಸಿಕೊಂಡಿದ್ದಾರೆ. ಆ ಪಾತ್ರಕ್ಕೆ ಅವರು ಸಾಕಷ್ಟು ತಯಾರಿ ಮಾಡಿಕೊಂಡಿದ್ದೂ ಉಂಟಂತೆ. ಅವರು ಈ ಚಿತ್ರದಲ್ಲಿ ಟಿವಿಎಸ್‌ ಮೋಟಾರ್‌ಸೈಕಲ್‌ ಓಡಿಸುವುದನ್ನು ಕಲಿತಿದ್ದಾರೆ.

ಮೊದ ಮೊದಲು ಅವರಿಗೆ ಟಿವಿಎಸ್‌ ಓಡಿಸುವುದು ಕಷ್ಟ ಆಗಿದ್ದಕ್ಕೆ, ಜೀಪ್‌ ಬೇಕಾದರೆ ಕೊಡಿ ಓಡಿಸುತ್ತೇನೆ, ಆದರೆ, ಈ ಟಿವಿಎಸ್‌ ಓಡಿಸುವುದಕ್ಕೆ ಆಗಲ್ಲ ಅಂದಿದ್ದರಂತೆ. ಆದರೆ, ಚಿತ್ರತಂಡ ಪೊಲೀಸ್‌ ಕಾನ್ಸ್‌ಟೇಬಲ್‌ಗೆ ಜೀಪ್‌ ಕೊಡೋದಿಲ್ಲ. ಟಿವಿಎಸ್‌ನಲ್ಲೇ ಓಡಾಡುತ್ತಾರೆ. ಹಾಗಾಗಿ, ಟಿವಿಎಸ್‌ ಕಲಿಯಲೇಬೇಕು ಅಂದಾಗ, ಪ್ರಿಯಾಂಕ ಅವರು ಪಾತ್ರಕ್ಕಾಗಿಯೇ ಟಿವಿಎಸ್‌ ಕಲಿತು, ಓಡಿಸಿದ್ದಾರಂತೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next