Advertisement

ಶೃಂಗೇರಿ ಶ್ರೀಶಾರದಾ ಪೀಠಕ್ಕೆ ಭೇಟಿ ನೀಡಿದ ಪ್ರಿಯಾಂಕಾ ಗಾಂಧಿ

01:16 PM Apr 26, 2023 | Team Udayavani |

ಚಿಕ್ಕಮಗಳೂರು: ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಶ್ರೀಶಾರದಾ ಪೀಠಕ್ಕೆ ಭೇಟಿ ನೀಡಿ ದೇವಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

Advertisement

ನಂತರ ಗುರುಭವನಕ್ಕೆ ತೆರಳಿ ಕಿರಿಯ ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಈ ವೇಳೆ ಶ್ರೀಗಳು ಆಶೀರ್ವಾದಿಸಿ ಸ್ಮರಣಿಕೆ ನೀಡಿದರು.

ಅಲ್ಲಿಂದ ನೇರವಾಗಿ ಬಾಳೆಹೊನ್ನೂರು ಶ್ರೀರಂಭಾಪುರಿ ಮಠಕ್ಕೆ ತೆರಳಿ ಮಠಕ್ಕೆ ಭೇಟಿ ನೀಡಿದರು. ಈ ವೇಳೆ ಗಜರಾಜನ ಆಶೀರ್ವಾದ ಪಡೆದರು.

ಇದನ್ನೂ ಓದಿ: On Camera: ಆಕಾಶ ಮಾರ್ಗದಲ್ಲೇ ವಿಮಾನದೊಳಗೆ ಮಾರಾಮಾರಿ; ತುರ್ತು ಭೂಸ್ಪರ್ಶ

ಶ್ರೀ ಶೃಂಗೇರಿ ಶಾರದಾ ದೇವಿ ದೇವಾಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಗುರು ಭವನಕ್ಕೆ ತೆರಳುವ ಮಾರ್ಗದಲ್ಲಿ ಶ್ರೀಮಠದ ಗಜಗಳಾದ ಜಯಲಕ್ಷೀ, ಪ್ರಿಯಾಂಕಾ ಗಾಂಧಿ ಅವರನ್ನು ಆಶೀರ್ವದಿಸಿದವು. ಈ ವೇಳೆ ಗಜಗಳ (ಆನೆ) ಸೊಂಡಿಲು ಹಾಗೂ ಮೈಸವರಿ ಬಾಳೆ ಹಣ್ಣು ಸೇಬು ಹಣ್ಣು ನೀಡಿದರು.

Advertisement

ದೇವಸ್ಥಾನ ಆವರಣದ ಹೊರಭಾಗದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬರುವುದು ಖಚಿತ. ಜನ ಬಿಜೆಪಿ ಸರ್ಕಾರದ ದುರಾಡಳಿತದಿಂದ ಬೇಸತ್ತಿದ್ದಾರೆ. ಬಿಜೆಪಿ ಸರ್ಕಾರವನ್ನು ಬದಲಾಯಿಸಲು ಜನರೇ ತೀರ್ಮಾನ ಮಾಡಿದ್ದಾರೆ.

ಹಿಂದೆ ಕಾಂಗ್ರೆಸ್ ಸರ್ಕಾರ ಜಾರಿ ಮಾಡಿರುವ ಜನಪರ ಯೋಜನೆಗಳನ್ನು ಜಾರಿ ಮಾಡಿದೆ. ಈ ಬಾರಿ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ. ಹಿಂದೆ ನಾನು ತಂದೆಯೊಂದಿಗೆ ಮಠಕ್ಕೆ ಭೇಟಿ ಕೊಟ್ಟು, ದೇವಿಯ ದರ್ಶನ ಪಡೆದಿದ್ದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next