Advertisement

ಹತ್ತು ದಿನಗಳಲ್ಲಿ ಕೃಷಿ ಸಾಲ ಮನ್ನಾ ಕೈ ಪ್ರಣಾಳಿಕೆ ಬಿಡುಗಡೆ ಮಾಡಿದ ಪ್ರಿಯಾಂಕಾ

01:32 AM Feb 10, 2022 | Team Udayavani |

ಲಕ್ನೋ: “ಅಧಿಕಾರಕ್ಕೆ ಬಂದ ಹತ್ತು ದಿನಗಳಲ್ಲಿ ರೈತರ ಸಾಲ ಮನ್ನಾ. ಇಪ್ಪತ್ತು ಲಕ್ಷ ಸರಕಾರಿ ಉದ್ಯೋಗಗಳನ್ನು ನೀಡಲು ವ್ಯವಸ್ಥೆ ಮಾಡು ತ್ತೇವೆ’ ಇದು ಫೆ.10ರಂದು ಶುರುವಾಗಲಿರುವ ಉತ್ತರ ಪ್ರದೇಶ ಚುನಾವಣೆಗಾಗಿ ಕಾಂಗ್ರೆಸ್‌ ಬುಧವಾರ ಬಿಡುಗಡೆ ಮಾಡಿರುವ ಪ್ರಣಾಳಿಕೆಯ ಪ್ರಧಾನ ಅಂಶ. ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಲಕ್ನೋದಲ್ಲಿ ಪ್ರಣಾಳಿಕೆ “ಉನ್ನತಿ ವಿಧಾನ್‌’ ಅನ್ನು ಬಿಡುಗಡೆ ಮಾಡಿದ್ದಾರೆ.

Advertisement

ಮನೆಮನೆ ಪ್ರಚಾರ ನಡೆಸಿದ ಅಮಿತ್‌ ಶಾ
ಗೋವಾದ ಬಿಜೆಪಿ ಸ್ಟಾರ್‌ ಪ್ರಚಾರಕ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಬುಧವಾರ ರಾಜ್ಯದಲ್ಲಿ ಮನೆ ಮನೆ ಪ್ರಚಾರ ನಡೆಸಿದ್ದಾರೆ. ಹಾಗೆಯೇ ರಾಜ್ಯದ ಇನ್ನೊಂದು ಭಾಗದಲ್ಲಿ ರಕ್ಷಣ ಸಚಿವ ರಾಜನಾಥ್‌ ಸಿಂಗ್‌ ಕೂಡ ಮನೆ ಮನೆ ಪ್ರಚಾರ ನಡೆಸಿದ್ದಾರೆ. ಬುಧವಾರ ಮಧ್ಯಾಹ್ನದಿಂದಲೇ ಮಯೇಮ್‌, ಬಿಚೋಲಿಮ್‌, ರಾಜೇಶ್‌ ಪಕ್ಲೃಕರ್‌ ಅವರ 2 ಕ್ಷೇತ್ರ ಸೇರಿ ಹಲವೆಡೆ ಮನೆ ಮನೆ ಪ್ರಚಾರ ನಡಸಿದ ಶಾ, ಸಾರ್ವಜನಿಕ ಸಭೆಯಲ್ಲೂ ಭಾಗವಹಿಸಿದ್ದರು.

ಗ್ರಾಮ ಪಂಚಾಯತ್‌ನಲ್ಲೂ ಎಟಿಎಂ
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಬುಧವಾರ ಉತ್ತರಾಖಂಡ ವಿಧಾನಸಭೆ ಚುನಾವಣೆಗೆ ಬಿಜೆಪಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು. ಈ ಬಗ್ಗೆ ವಿವರಣೆ ನೀಡಿದ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮೀ, ಬಡವರಿಗೆ ವರ್ಷಕ್ಕೆ 3 ಎಲ್‌ಪಿಜಿ ಸಿಲಿಂಡರ್‌ಗಳನ್ನು ಉಚಿತವಾಗಿ ನೀಡಲಾಗುವುದು, ಹಾಗೆಯೆ ಪ್ರತೀ ಗ್ರಾಮಪಂಚಾಯತ್‌ಗಳಲ್ಲಿ ಕನಿಷ್ಠ ಒಂದು ಎಟಿಎಂ ಅನ್ನು ಸ್ಥಾಪಿಸಲಾಗುವುದು ಎಂದಿದ್ದಾರೆ. ಯುವಕರಿಗೆ 50,000 ಸರಕಾರಿ ನೌಕರಿ ನೀಡುತ್ತೇವೆ. ರೈತರಿಗೆ ವರ್ಷಕ್ಕೆ 10,000 ರೂ. ಆರ್ಥಿಕ ನೆರವು ನೀಡುತ್ತೇವೆ ಎಂದಿರುವ ಧಾಮೀ, ಲವ್‌ ಜೆಹಾದ್‌ ಕಾಯ್ದೆಯನ್ನು ಇನ್ನಷ್ಟು ಬಿಗು ಮಾಡುತ್ತೇವೆ ಎಂದಿದ್ದಾರೆ.

ಭರವಸೆ ಏನು?
1. ಬೀಡಾಡಿ ದನಗಳಿಂದ ಬೆಳೆ ಹಾಳಾದರೆ ರೈತರಿಗೆ ಮೂರು ಸಾವಿರ ರೂ. ಪರಿಹಾರ
2. ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ
3. ಸೋಂಕಿನ ಅವಧಿಯಲ್ಲಿ ನಿಧನರಾದ ಕೊರೊನಾ ವಾರಿಯರ್ಸ್‌ ಕುಟುಂಬಸ್ಥರಿಗೆ 50 ಲಕ್ಷ ರೂ. ಪರಿಹಾರ
4. ಪೊಲೀಸ್‌, ಆರೋಗ್ಯ ಇಲಾಖೆ ಸೇರಿದಂತೆ 12 ಲಕ್ಷ ಸರಕಾರಿ ಹುದ್ದೆ ಭರ್ತಿಗೆ ಕ್ರಮ. 20 ಲಕ್ಷ ಸರಕಾರಿ ಉದ್ಯೋಗ
5. ಪ್ರತೀ ಕ್ವಿಂಟಾಲ್‌ ಭತ್ತಕ್ಕೆ 2,500 ರೂ., ಪ್ರತಿ ಕ್ವಿಂಟಾಲ್‌ ಕಬ್ಬಿಗೆ 400 ರೂ. ನೀಡಿ ಖರೀದಿ.
6. ಗೋಧನ್‌ ನ್ಯಾಯ ಯೋಜನೆ ಅಡಿಯಲ್ಲಿ ಪ್ರತೀ ಕೆಜಿ ಸೆಗಣಿಗೆ 2 ರೂ. ನೀಡಿ ಖರೀದಿ
7. ವಿಧಾನ ಪರಿಷತ್‌ನಲ್ಲಿ
ನಿವೃತ್ತ ಸೈನಿಕರಿಗೆ ಮೀಸಲು ಮತ್ತು ಪತ್ರಕರ್ತರ ವಿರುದ್ಧ ಕೇಸುಗಳು ವಾಪಸ್‌
8. ಕೆಲವು ಸಮುದಾಯಗಳಿಗೆ ಎಸ್‌ಟಿ ಮಾನ್ಯತೆ ನೀಡಲು ಕ್ರಮ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next