ವಾರಾಣಸಿ : ಪ್ರಧಾನಿ ನರೇಂದ್ರ ಮೋದಿ ಪ್ರತಿನಿಧಿಸುತ್ತಿರುವ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ದುರ್ಗಾ ಸ್ತೋತ್ರ ಪಠಿಸುವ ಮೂಲಕ ಪ್ರಚಾರದ ವೇಳೆ ಭಾವನಾತ್ಮಕವಾಗಿ ಭಾನುವಾರ ಗಮನಸೆಳೆದರು.
ವಾರಣಾಸಿಯ ಕಿಸಾನ್ ನ್ಯಾಯ ರ್ಯಾಲಿಯಲ್ಲಿ ,ನಾನು ಉಪವಾಸದಲಿದ್ದು, ದೇವಿಯ ಸ್ತುತಿಯೊಂದಿಗೆ ಮಾತು ಆರಂಭಿಸುತ್ತೇನೆ ಎಂದರು ಮಾತ್ರವಲ್ಲದೆ ‘ಜೈ ಮಾತಾ ದಿ’ ಎಂದು ನೆರೆದಿದ್ದ ಕಾರ್ಯಕರ್ತರಿಗೂ ‘ಜೈ ಮಾತಾ ದಿ’ ಎಂದು ಪಠಿಸುವಂತೆ ಕೇಳಿಕೊಂಡರು. ಎರಡು ಸಂಸ್ಕ್ರತ ಶ್ಲೋಕಗಳನ್ನು ಹೇಳಿ ನವರಾತ್ರಿಯ ಶುಭಾಶಯ ಕೋರಿದರು.
ವೇದಿಕೆಯಲ್ಲಿದ್ದ ಛತ್ತೀಸ್ ಗಢ ಮುಖ್ಯಮಂತ್ರಿ ಭೂಪೇಶ್ ಬಗೇಲ್ ಸೇರಿ ಕಾಂಗ್ರೆಸ್ ನಾಯಕರು ಹರ ಹರ ಮಹಾದೇವ್ ಮಂತ್ರ ಜಪಿಸಿದರು.
ಉತ್ತರ ಪ್ರದೇಶ ಹಿಂದೂಗಳು ಬಹುಸಂಖ್ಯಾತರಿರುವ ರಾಜ್ಯ, ನಮ್ಮ ಪಕ್ಷ ಹಿಂದೂ ಧರ್ಮದ ಪರ ಪ್ರಚಾರವನ್ನು ಮಾಡುತ್ತದೆ. ನಮ್ಮ ಹಿಂದುತ್ವ ಅಭಿಯಾನವೆಂದರೆ ಹಿಂದೂ ಧರ್ಮವು ಅಂತರ್ಗತವಾಗಿದೆ, ಜಾತ್ಯತೀತವಾಗಿದೆ, ಆದ್ದರಿಂದ ಹಿಂದೂ ಧರ್ಮವು ಇಸ್ಲಾಂ ಸೇರಿದಂತೆ ಇತರ ಧರ್ಮಗಳೊಂದಿಗೆ ಕೈಜೋಡಿಸಲು ಬಯಸುತ್ತದೆ ಎಂದು ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಸುದ್ದಿಗಾರಿಗೆ ಅಭಿಪ್ರಾಯ ತಿಳಿಸಿದ್ದಾರೆ.
ಬಿಜೆಪಿಯವರು ಹೇಳುವಂತೆ ಹಿಂದೂ ಧರ್ಮ ಒಂಟಿಯಾಗಿದೆ. ನಮ್ಮ ಪ್ರಕಾರ ಹಿಂದೂ ಧರ್ಮವು ಇತರ ಧರ್ಮಗಳ ಜೊತೆಗೂಡಿರುತ್ತದೆ. ರಾಜ್ಯವು ನಮ್ಮ ಪರವಾಗಿ ನಿರ್ಧರಿಸುತ್ತದೆ ಎಂದು ನನಗೆ ವಿಶ್ವಾಸವಿದೆ ಎಂದು ಖುರ್ಷಿದ್ ಹೇಳಿದರು.