Advertisement
ಬೆಲೆ ಏರಿಕೆ, ಕೋವಿಡ್ 19 ನಿರ್ವಹಣೆ ಹಾಗೂ ಇತ್ತೀಚೆಗೆ ನಡೆದ ಪಂಚಾಯತ್ ಚುನಾವಣೆಗಳು ಸಭೆಯ ಮುಖ್ಯ ವಿಷಯವಾಗಿದ್ದವು ಎಂದು ವರದಿಗಳು ತಿಳಿಸಿವೆ.
Related Articles
Advertisement
ಸಭೆಯಲ್ಲಿದ್ದ ಪಕ್ಷದ ಪ್ರಮುಖ ನಾಯಕರು ಆಡಳಿತ ಪಕ್ಷವನ್ನು ಖಂಡಿಸಿದರು, ಸರ್ಕಾರ ಎಲ್ಲಾಆಯಾಮಗಳಲ್ಲಿ ವಿಫಲವಾಗಿದೆ. ಹೆಚ್ಚುತ್ತಿರುವ ಅಗತ್ಯ ವಸ್ತುಗಳ ಬೆಲೆಗಳು, ನಿರುದ್ಯೋಗ ಸಮಸ್ಯೆ ಮತ್ತು ರಾಜ್ಯದಲ್ಲಿನ “ಜಂಗಲ್ ರಾಜ್” ಮುಂತಾದ ವಿಷಯಗಳ ಬಗ್ಗೆ ಬಿಜೆಪಿ ಸರ್ಕಾರದ ವಿರುದ್ಧ ಹೋರಾಡಲು ಅವರು ನಿರ್ಧರಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿರುವುದಾಗಿ ರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ವಿಧಾನಸಭಾ ಚುನಾವಣೆ ಮೇಲೆ ‘ಮಿಷನ್ ಯುಪಿ’
ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಈ ವಾರ, 2022 ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಮೇಲೆ ಕಣ್ಣಿಟ್ಟು ‘ಮಿಷನ್ ಯುಪಿ’ ಆರಂಭಿಸಲಿದ್ದು. ನಾಲ್ಕು ದಿನಗಳ ರಾಜ್ಯ ಪ್ರವಾಸದಲ್ಲಿ ತೊಡಗಿಕೊಳ್ಳುತ್ತಿರುವ ಅವರು, ಜುಲೈ 14 ರಂದು ರಾಜ್ಯ ರಾಜಧಾನಿ ಲಕ್ನೋಗೆ ಭೇಟಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿರುವುದಾಗಿ ರಾಷ್ಟ್ರೀಯ ಸುದ್ದಿ ಸಂಸ್ಥೆ ಇಂಡಿಯಾ ಟುಡೆ ವರದಿ ಮಾಡಿದೆ.
ನಾಲ್ಕು ದಿನದ ರಾಜ್ಯ ಪ್ರವಾಸದಲ್ಲಿ ಪ್ರಿಯಾಂಕ ಗಾಂಧಿ, ಪಕ್ಷದ ಕಾರ್ಯ ಕರ್ತರನ್ನು ಭೇಟಿಯಾಗಲಿದ್ದು, ಬರುವ ವರ್ಷದ ಚುನಾವಣಾ ಪೂರ್ವ ಸಭೆಗಳನ್ನು ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗೂ ಪಂಚಾಯತ್ ಚುನಾವಣೆಯ ಸಂದರ್ಭದಲ್ಲಿ ನಡೆದ ಹಿಂಸಾಚಾರ ಹಾಗೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರದ ಕೋವಿಡ್ 19 ಸೋಂಕಿನ ನಿರ್ವಹಣೆಯ ಬಗ್ಗೆ ಸುದ್ದಿಗೊಷ್ಟಿಗಳನ್ನು ಮಾಡಲಿದ್ದಾರೆ ಎಂದು ಪಕ್ಷದ ಆಂತರಿಕ ಮೂಲಗಳು ತಿಳಿಸಿವೆ.
ಇನ್ನು, ಲಕ್ನೋದಲ್ಲಿ ತಂಗಿದ್ದಾಗ ರೈತ ಸಂಘಟನೆಗಳನ್ನು ಕೂಡ ಭೇಟಿ ಮಾಡಿ ಚರ್ಚೆ ನಡೆಸಲಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ : ಉತ್ತರ ಕರ್ನಾಟಕದವರು ಸಿಎಂ ಆಗುತ್ತಾರೆ ಎಂಬ ಕತ್ತಿ ಹೇಳಿಕೆಯನ್ನು ಸಮರ್ಥಿಸಿದ ಸಚಿವ ಜೋಶಿ