Advertisement

ಉತ್ತರಪ್ರದೇಶದಲ್ಲಿ ಹಿಂಸಾಚಾರಕ್ಕೆ ಪ್ರಿಯಾಂಕಾ ಗಾಂಧಿ ಹಣಕಾಸು ನೆರವು; ಸಿಂಗ್ ಆರೋಪ

09:37 AM Jan 08, 2020 | Nagendra Trasi |

ರಾಯ್ ಬರೇಲಿ: ಉತ್ತರಪ್ರದೇಶದಲ್ಲಿ ನಡೆದ ಹಿಂಸಾಚಾರಕ್ಕೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಹಣಕಾಸು ನೆರವು ನೀಡಿರುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಸ್ವತಂತ್ರ ದೇವ್ ಸಿಂಗ್ ಆರೋಪಿಸಿದ್ದಾರೆ.

Advertisement

ಪ್ರಿಯಾಂಕಾ ಗಾಂಧಿ ಬೇರೆ ರಾಜ್ಯಗಳಿಂದ ಗೂಂಡಾಗಳನ್ನು ಕರೆತಂದು ಉತ್ತರಪ್ರದೇಶದಲ್ಲಿ ಹಿಂಸಾಚಾರ ನಡೆಸಲು ಕುಮ್ಮಕ್ಕು ನೀಡಿರುವುದಾಗಿ ದೂರಿದ್ದಾರೆ ಎಂದು ವರದಿ ತಿಳಿಸಿದೆ.

ಕಳೆದ ಮೂರು ವರ್ಷಗಳ ಕಾಲ ಉತ್ತರಪ್ರದೇಶ ಶಾಂತವಾಗಿತ್ತು. ಆದರೆ ಉತ್ತರಪ್ರದೇಶದಲ್ಲಿ ಗಲಭೆ ನಡೆಯಲು ಕಾರಣ ಏನು ಎಂದು ನಾನು ಪ್ರಿಯಾಂಕಾ ಅವರನ್ನು ಪ್ರಶ್ನಿಸುತ್ತಿದ್ದೇನೆ. ಯಾಕೆ ಮಧ್ಯಪ್ರದೇಶ ಮತ್ತು ರಾಜಸ್ಥಾನಗಳಲ್ಲಿ ಗಲಾಟೆ ನಡೆಸಿಲ್ಲ? ಉತ್ತರಪ್ರದೇಶದಲ್ಲಿ ಹಿಂಸಾಚಾರ ನಡೆಸಲು ಹಣಕಾಸು ನೆರವು ನೀಡಿ, ಬೇರೆ ರಾಜ್ಯಗಳಿಂದ ಗೂಂಡಾಗಳನ್ನು ಕರೆತಂದು ಶಾಂತಿ ಸುವ್ಯವಸ್ಥೆಯನ್ನು ಹಾಳುಗೆಡವಿರುವುದಾಗಿ ಸಿಂಗ್ ರಾಯ್ ಬರೇಲಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next