Advertisement

ನೀರವ್‌ ಮೋದಿ ಜತೆಗಿನ ಗುತ್ತಿಗೆ ರದ್ದಿಗೆ ಪ್ರಿಯಾಂಕಾ ನಿರ್ಧಾರ ?

03:14 PM Feb 16, 2018 | Team Udayavani |

ಮುಂಬಯಿ : ಪಿಎನ್‌ಬಿ ಬಹುಕೋಟಿ ಹಗರಣ ಕಳಂಕಿತ ನೀರವ್‌ ಮೋದಿ ಅವರು ಕಳೆದ ವರ್ಷ ತನ್ನ ವಜ್ರಾಭರಣ ಉದ್ಯಮಕ್ಕೆ ಬ್ರ್ಯಾಂಡ್‌ ಅಂಬಾಸಿಡರ್‌ ಆಗಿ ಬಾಲಿವುಡ್‌ ತಾರೆ ಪ್ರಿಯಾಂಕಾ ಚೋಪ್ರಾ ಅವರನ್ನು ನೇಮಿಸಿಕೊಂಡಿದ್ದರು.

Advertisement

ಪಿಎನ್‌ಬಿ ಹಗರಣ ಬೆಳಕಿಗೆ ಬರುತ್ತಲೇ ಪ್ರಿಯಾಂಕಾ ಚೋಪ್ರಾ ಅವರು ನೀರವ್‌ ಮೋದಿ ವಿರುದ್ಧ ದಾವೆ ದಾಖಲಿಸಿದ್ದಾರೆ ಎಂಬ ಸುದ್ದಿ ವ್ಯಾಪಕವಾಗಿ ಹರಡಿತ್ತು. ಆದರೆ ಪ್ರಿಯಾಂಕಾ ಚೋಪ್ರಾ ದಾವೆ ದಾಖಲಸಿಲ್ಲ ಬದಲಾಗಿ ಮೋದಿ ಜತೆಗಿನ ತನ್ನ ಗುತ್ತಿಗೆ ವ್ಯವಹಾರವನ್ನು ರದ್ದು ಪಡಿಸುವ ಬಗ್ಗೆ ಕಾನೂನು ಅಭಿಪ್ರಾಯ ಕೇಳಿದ್ದಾರೆ ಎಂಬುದೀಗ ದೃಢಪಟ್ಟಿದೆ. 

ಪ್ರಿಯಾಂಕಾ ಚೋಪ್ರಾ ಅವರ ವಕ್ತಾರ ಮಾಧ್ಯಮಕ್ಕೆ ಬಿಡುಗಡೆ ಗೊಳಿಸಿರುವ ಹೇಳಿಕೆಯಲ್ಲಿ “ನೀರವ್‌ ಮೋದಿ ವಿರುದ್ಧ ಪ್ರಿಯಾಂಕಾ ಚೋಪ್ರಾ ದಾವೆ ಹೂಡಿದ್ದಾರೆ ಎಂಬ ವದಂತಿಗಳು ಹರಡಿಕೊಂಡಿವೆ. ಆದರೆ ಅದು ಸರಿಯಲ್ಲ; ನೀರವ್‌ ಮೋದಿ ಅವರೀಗ ಪಿಎನ್‌ಬಿ ವಂಚನೆ ಹಗರಣದಲ್ಲಿ ಶಾಮೀಲಾಗಿರುವ ಆರೋಪಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಅವರೊಂದಿಗೆ ತನ್ನ ಗುತ್ತಿಗೆ ಒಪ್ಪಂದವನ್ನು ಈ ಸಂದರ್ಭದಲ್ಲಿ ರದ್ದುಗೊಳಿಸಬಹುದೇ ಎಂಬ ಬಗ್ಗೆ ಆಕೆ ಕಾನೂನು ಅಭಿಪ್ರಾಯ ಕೇಳಿದ್ದಾರೆ’ ಎಂದು ಹೇಳಿದ್ದಾರೆ. 

ಪ್ರಿಯಾಂಕಾ ಚೋಪ್ರಾ ಅವರು ತಮ್ಮ ಕ್ವಾಂಟಿಕೋ ಹಿಟ್‌ ಸೀರೀಸ್‌ ನಿಂದಾಗಿ ಹಾಲಿವುಡ್‌ನ‌ಲ್ಲಿ ಜನಪ್ರಿಯರಾಗಿದ್ದಾರೆ. 2017ರ ಜನವರಿಯಲ್ಲಿ  ನೀರವ್‌ ಮೋದಿ ಅವರು ಪ್ರಿಯಾಂಕಾ ಅವರನ್ನು ತನ್ನ ವೈಭವೋಪೇತ ವಜ್ರಾಭರಣಗಳ ಬ್ರಾಂಡ್‌ ಅಂಬಾಸಿಡರ್‌ ಆಗಿ ನೇಮಿಸಿಕೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next