ಚಿತ್ತಾಪುರ: ಪಟ್ಟಣದಲ್ಲಿ ಶಾಸಕ ಪ್ರಿಯಾಂಕ್ ಖರ್ಗೆ ಕಾಣೆಯಾಗಿದ್ದಾರೆ ಎನ್ನುವ ಪೋಸ್ಟರ್ ಅಂಟಿಸಿರುವ ಬಿಜೆಪಿ ಮುಖಂಡ ಅರವಿಂದ ಚವ್ಹಾಣ ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಪಟ್ಟಣದ ಲಾಡ್ಜಿಂಗ್ ಕ್ರಾಸ್ ನಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಮಿಂಚಿನ ಪ್ರತಿಭಟನೆ ನಡೆಸಿದರು.
ಇದೇ ವೆಳೆ ಲಾಡ್ಜಿಂಗ್ ಕ್ರಾಸ್ ಸುತ್ತ ಬೈಕ್ ಗಳನ್ನು ನಿಲ್ಲಿಸಿ ರಸ್ತೆ ತಡೆ ನಡೆಸಿದರಿಂದ ವಾಹನ ಸವಾರರು ಹಾಗೂ ಪ್ರಯಾಣಿಕರು ಪರದಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ ಮಾತನಾಡಿ, ಅರವಿಂದ್ ಚವ್ಹಾಣ ಮೊದಲು ಬಿಜೆಪಿ ಟಿಕೆಟ್ ಪಡೆದುಕೊಂಡು ಚುನವಾಣೆಯಲ್ಲಿ ಬರಲಿ. ನಿಮ್ಮ ಬಿಜೆಪಿ ಸಂಸದ ಉಮೇಶ ಜಾಧವ ಅವರು ಇಲ್ಲಿಯವೆರೆಗೆ ಚಿತ್ತಾಪುರಕ್ಕೆ ಬಂದಿಲ್ಲ. ಅವರು ಕಾಣೆಯಾಗಿದ್ದರೆ. ಅದರ ಕುರಿತು ಧ್ವನಿ ಎತ್ತಲಿ ಎಂದು ಒತ್ತಾಯಿಸಿದರು.
ಇದನ್ನೂ ಓದಿ:ಸೆಮಿ ಫೈನಲ್ ಗೂ ಮೊದಲೇ ಆಘಾತ: ನೆಟ್ಸ್ ನಲ್ಲಿ ಗಾಯಗೊಂಡ ಕ್ಯಾಪ್ಟನ್ ರೋಹಿತ್
ನಂತರ ಸಿಪಿಐ ಪ್ರಕಾಶ ಯಾತನೂರ ಮಧ್ಯ ಪ್ರವೇಶಿಸಿ ಇದರಲ್ಲಿ ಯಾರೋ ಯಾರೋ ಇದ್ದರೆ ಅವರೇಲ್ಲರ ಮೇಲೆ ಕ್ರಮ ಜರುಗಿಸುತ್ತೇವೆ ಎಂದು ಭರವಸೆ ನೀಡಿದಾಗ ಪ್ರತಿಭಟನೆ ಕೈ ಬಿಡಲಾಯಿತು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಕಾಳಗಿ, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಮುಕ್ತಾರ ಪಟೇಲ್, ಚಂದ್ರಶೇಖರ ಕಾಶಿ, ಶೀಲಾ ಕಾಶಿ, ಎಂ.ಎ ರಶೀದ್, ಜಗದೀಶ ಚವ್ಹಾಣ, ಜಫರುಲ್ ಹಸನ್, ಸಂಜಯ ಬುಳಕರ್, ಶಿವಾಜಿ ಕಾಶಿ, ದೇವಿಂದ್ರ ಅಣಕಲ್, ನಾಗಯ್ಯ ಗುತ್ತೇದಾರ, ಬಾಬು ಕಾಶಿ, ರವಿಸಾಗರ್, ವಿನ್ನು ಜೆಡಿ, ಕಾಂಗ್ರೆಸ್ ಪಕ್ಷದ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.