Advertisement

RSS-ಬಿಜೆಪಿಗೆ ಸ್ವಂತ ಇತಿಹಾಸವಿಲ್ಲ; ಬಿಕೆ ಹರಿಪ್ರಸಾದ್ ಹೇಳಿಕೆ ಸಮರ್ಥಿಸಿದ ಪ್ರಿಯಾಂಕ ಖರ್ಗೆ

03:12 PM Dec 27, 2023 | Team Udayavani |

ಹುಬ್ಬಳ್ಳಿ : ಆರ್ ಎಸ್ ಎಸ್ ಹಾಗೂ ಬಿಜೆಪಿಗೆ ಸ್ವಂತ ಇತಿಹಾಸವಿಲ್ಲ. ಸ್ವಾತಂತ್ರ್ಯ ಹೋರಾಟಕ್ಕೆ ಅವರ ಕೊಡುಗೆ ಏನಿದೆ ಎಂದು ಪಂಚಾಯತ್ ರಾಜ್ ಹಾಗೂ ಐಟಿ- ಬಿಟಿ ಸಚಿವ ಪ್ರಿಯಾಂಕ ಖರ್ಗೆ ಪ್ರಶ್ನಿಸಿದರು.

Advertisement

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಸಂರ್ಭದಲ್ಲಿ 40ಸಾವಿರ ಕೋಟಿ ರೂ. ಹಗರಣ ನಡೆದಿದೆ ಎಂಬ ಆರೋಪ ಅವರದ್ದಾಗಿದೆ .ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಉತ್ತರಿಸಬೇಕಾಗಿದೆ ಎಂದರು.

ಬಿಜೆಪಿಯವರು ಹೆಣದ ಮೇಲೆ ಹಣ ಮಾಡುವ ಪಾಪ ಕೃತ್ಯ ಮಾಡಿದ್ದಾರೆ. ಇದು ನಮ್ಮ ಆರೋಪವಲ್ಲ. ಸ್ವತಃ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳರ ಹೇಳಿಕೆಯಾಗಿದೆ ಎಂದರು.

ಹೆಣಗಳ ಮೇಲೆ ಹಣ ಮಾಡಿಕೊಳ್ಳುವ ಮೂಲಕ ಬಿಜೆಪಿಯವರು ಪಾಪ ಕೃತ್ಯ ಎಸಗಿದ್ದು ಇದರಲ್ಲಿ ಕೇಂದ್ರಕ್ಕೂ ಪಾಲು ಹೋಗಿರಬೇಕು ಎಂದು ಅವರು ಸಂಶಯ ವ್ಯಕ್ತಪಡಿಸಿದರು.

ವಿಎಸ್‌ಟಿ ಎಂದರೆ ವಿಜಯೇಂದ್ರ ಅವರಿಗೆ ಇದೀಗ ಅರ್ಥವಾಗಿರಬೇಕು ಎಂದೆನಿಸುತ್ತದೆ ಬಿಜೆಪಿಯವರು ಯತೀಂದ್ರ ಅವರ ವಿರುದ್ಧ ಶಾಡೋ ಸಿಎಂ ಎಂದು ಆರೋಪಿಸುತ್ತಿದ್ದಾರೆ. ಆದರೆ ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಆಡಳಿತದ ನಿಯಂತ್ರಣ ಯಾರದು ಇತ್ತು ಎಂಬುದನ್ನು ಬಿಜೆಪಿಯವರು ಮೊದಲು ಬಹಿರಂಗಪಡಿಸಲಿ ಎಂದರು.

Advertisement

ಶಾಸಕ ಬಸನಗೌಡ ಪಾಟೀಲರಿಗೆ ನಾನು ಮನವಿ ಮಾಡುತ್ತೇನೆ. ಜನರ ಹಿತದೃಷ್ಟಿಯಿಂದಲಾದರೂ ನಿಮ್ಮಲ್ಲಿರುವ 40,000 ಕೋಟಿ ಆಭರಣದ ದಾಖಲೆಗಳನ್ನು ಬಹಿರಂಗ ಮಾಡಿ ಇಲ್ಲವೇ ನ್ಯಾಯಮೂರ್ತಿ ಮೈಕಲ್ ಆಯೋಗಕ್ಕಾದರೂ ಸಲ್ಲಿಕೆ ಮಾಡಿ ಎಂದರು.

ವಿಧಾನಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್ ಅವರು ಇತ್ತೀಚಿಗೆ ನೀಡಿದ ವಿವಾದಾತ್ಮಕ ಹೇಳಿಕೆಯನ್ನು ಸಮರ್ಥಿಸಿಕೊಂಡ ಅವರು, ಆರ್ ಎಸ್ ಎಸ್ ಹಾಗೂ ಬಿಜೆಪಿಗೆ ಸ್ವಂತ ಇತಿಹಾಸವಿಲ್ಲ .ಸ್ವಾತಂತ್ರ್ಯ ಹೋರಾಟಕ್ಕೆ ಅವರ ಕೊಡುಗೆ ಏನಿದೆ ಎಂದು ಪ್ರಶ್ನಿಸಿದರು.

ಸಾವರ್ಕರ್ ಅವರಿಗೆ ವೀರ ಎಂಬ ಬಿರುದು ಯಾಕೆ ಬಂದಿದೆ ಎಂಬುದೇ ತಿಳಿಯುತ್ತಿಲ್ಲ. ಬ್ರಿಟಿಷರಿಗೆ ಕ್ಷಮಾಪತ್ರ ಬರೆದು ಕೊಟ್ಟಿದ್ದು ಯಾರು ಹಾಗೂ ಬ್ರಿಟಿಷರಿಂದ ಪೆನ್ಷನ್ ತೆಗೆದುಕೊಂಡಿದ್ದು ಯಾರು ಎಂಬುದು ಸ್ಪಷ್ಟವಾಗಲಿ ಎಂದರು.

ಬಿಜೆಪಿಯವರು ವಾಟ್ಸಾಪ್ ಯುನಿವರ್ಸಿಟಿಯಲ್ಲಿ ಅನೇಕ ಸುಳ್ಳುಗಳನ್ನು ಹಬ್ಬಿಸುವುದರಲ್ಲಿ ಬಿಜೆಪಿಯವರು ನಿಸ್ಸೀಮರು ಹೆಚ್ಚಿನ ಯುವಕರು ಈ ಸುಳ್ಳುಗಳನ್ನೇ ನಂಬುತ್ತಿದ್ದಾರೆ ಎಂದರು. ಸರ್ಕಾರ ಪತನಗೊಳ್ಳಲಿದೆ ಎಂಬ ಬಿಜೆಪಿ ರಾಜ್ಯ ಉಪಾಧ್ಯಕ್ಷ ಮುರುಗೇಶ್ ನಿರಾಣಿ ಅವರು ಹೇಳಿಕೆಗೆ, ಈಗ ಅವರು ಏನಿದ್ದಾರೆ, ಮಾಜಿ ಇರುವ ಅವರು ಹಾಲಿ ಆದಮೇಲೆ ನೋಡಿಕೊಳ್ಳೋಣ ಎಂದು ವ್ಯಂಗ್ಯವಾಡಿದರು

ಕಳೆದ ಬಾರಿ ರಾಜ್ಯದಲ್ಲಿ ಹಿಂದುತ್ವದ ಸರ್ಕಾರ ಇತ್ತು ಈಗ ಇರುವುದು ಸಂವಿಧಾನದ ಸರ್ಕಾರ ಎಂದು ಹೇಳಿದರು.

ಇದನ್ನೂ ಓದಿ: Sirsi: ಮುಂಬರುವ ಚುನಾವಣೆಗೆ ಸ್ಪರ್ಧಿಸುತ್ತಾರಾ ಅನಂತಕುಮಾರ ಹೆಗಡೆ? ಸಂಸದರು ಹೇಳಿದ್ದೇನು?

Advertisement

Udayavani is now on Telegram. Click here to join our channel and stay updated with the latest news.

Next