Advertisement

ಭ್ರಷ್ಟಾಚಾರವೇ ಬಿಜೆಪಿ ಸಾಧನೆ: ಬೃಹತ್‌ ಜನಜಾಗೃತಿ ಸಮಾವೇಶದಲ್ಲಿ ಪ್ರಿಯಾಂಕ್‌ ಖರ್ಗೆ

12:15 AM Jan 21, 2023 | Team Udayavani |

ಮಂಗಳೂರು: ಮೂರು ವರ್ಷಗಳಲ್ಲಿ ಎರಡೆರಡು ಭ್ರಷ್ಟ ಸಿಎಂ ಗಳನ್ನು ಕೊಟ್ಟಿರುವುದು ಮಾತ್ರ ರಾಜ್ಯ ಬಿಜೆಪಿ ಸರಕಾರದ ಸಾಧನೆ ಎಂದು ಶಾಸಕ ಮಾಜಿ ಸಚಿವ ಪ್ರಿಯಾಂಕ್‌ ಖರ್ಗೆ ಲೇವಡಿ ಮಾಡಿದರು.

Advertisement

ಸುರತ್ಕಲ್‌ನ ಕರ್ನಾಟಕ ಸೇವಾ ವೃಂದದ ವೇದಿಕೆಯಲ್ಲಿ ಶುಕ್ರವಾರ ಸಂಜೆ ಹಮ್ಮಿಕೊಳ್ಳಲಾಗಿದ್ದ ಬಿಜೆಪಿಯ ಸುಳ್ಳುಗಳ ವಿರುದ್ಧ ಸಮರ, ಬೃಹತ್‌ ಜನಜಾಗೃತಿ ಸಮಾವೇಶದಲ್ಲಿ ಅವರು ಮುಖ್ಯಭಾಷಣ ಮಾಡಿದರು.

40 ಪರ್ಸೆಂಟ್‌ ಸರಕಾರ ಎಂಬುದು ಕಾಂಗ್ರೆಸ್‌ ಆರೋಪವಲ್ಲ, ರಾಜ್ಯ ಗುತ್ತಿಗೆದಾರರ ಸಂಘದವರು ಮಾಡಿರುವ ಆರೋಪ ಎಂದರು.

ಸರಕಾರದ ಧೋರಣೆಯಿಂದ ಗುತ್ತಿಗೆದಾರರು ಆತ್ಮಹತ್ಯೆ ಮಾಡಿ ಕೊಳ್ಳುತ್ತಿದ್ದಾರೆ. ಬಿಜೆಪಿ ಶಾಸಕ ಯತ್ನಾಳ್‌ ಸರಕಾರದ ವಿರುದ್ಧ ಭ್ರಷ್ಟಾ ಚಾರದ ಆರೋಪ ಮಾಡುತ್ತಾರೆ. ಪ್ರತಾಪ್‌ಸಿಂಹ ಕೂಡ ಭ್ರಷ್ಟಾಚಾರದ ಬಗ್ಗೆ ಹೇಳಿದ್ದಾರೆ ಎಂದರು.

ನಳಿನ್‌ ಎಲ್ಲಿದ್ದಾರೆ?
2 ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಹೇಳಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಎಲ್ಲಿದ್ದಾರೆ? ಶಾಸಕರ ಭವನದಲ್ಲಿಯೇ ಲಂಚ ಪಡೆಯುವ ಮೂಲಕ ಅದನ್ನು ಲಂಚ ಭವನವನ್ನಾಗಿಸಿದ್ದಾರೆ. ಪಿಎಸ್‌ಐ ಹಗರಣದಲ್ಲಿ ಐಪಿಎಸ್‌ ಅಧಿಕಾರಿ ಸಹಿತ ಹಲವರು ಜೈಲುಪಾಲಾಗಿದ್ದಾರೆ. ಈ ಸರಕಾರ ಉದ್ಯೋಗ ನೀಡದೆ ಯುವಕರ ಭವಿಷ್ಯವನ್ನೇ ಮಾರಾಟ ಮಾಡಿದೆ ಎಂದು ಆರೋಪಿಸಿದರು.

Advertisement

ಕರಾವಳಿ ದ್ವೇಷದ ಪ್ರಯೋಗ ಶಾಲೆ
ಬಿಜೆಪಿ ಕರಾವಳಿಯನ್ನು ದ್ವೇಷದ ಪ್ರಯೋಗಾಲಯ ಮಾಡಿಕೊಂಡಿದೆ. ಜನರು ಪ್ರಬುದ್ಧರಾಗಿ ಯೋಚಿಸಿ ಮತ ಹಾಕಬೇಕಾಗಿದೆ. ಪ್ರಧಾನಿ ಮೋದಿ ಈಗ ಚಾಯ್‌ ಪೇ ಚರ್ಚಾ ಆಯೋಜಿಸಲಿ ಎಂದು ಸವಾಲೆಸೆದರು.

ಕಾಂಗ್ರೆಸ್‌ ರಾಜ್ಯ ಮುಖಂಡರಾದ ಭವ್ಯಾ ನರಸಿಂಹಮೂರ್ತಿ, ವಾಗ್ಮಿ ನಿಕೇತ್‌ರಾಜ್‌ ಮೌರ್ಯ ಮಾತನಾಡಿ ದರು. ಮಾಜಿ ಶಾಸಕ ಮೊದಿನ್‌ ಬಾವ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾಂಗ್ರೆಸ್‌ ಮುಖಂಡರಾದ ಐವನ್‌ ಡಿ’ಸೋಜಾ, ನವೀನ್‌ ಡಿ’ಸೋಜಾ, ಶಶಿಧರ್‌ ಹೆಗ್ಡೆ, ಗುಲ್ಜಾರ್‌ ಬಾನು, ಮಮತಾ ಗಟ್ಟಿ, ಗಿರೀಶ್‌ ಆಳ್ವ, ಪ್ರತಿಭಾ ಕುಳಾಯಿ, ಅನಿಲ್‌ ಕುಮಾರ್‌, ಉಮೇಶ್‌ ದಂಡೆಕೇರಿ, ಸುರೇಂದ್ರ ಕಂಬಳಿ, ಪುರುಷೋತ್ತಮ್‌ ಚಿತ್ರಾಪುರ, ಶಾಲೆಟ್‌ ಪಿಂಟೋ, ಮುಹಮ್ಮದ್‌ ಸಮೀರ್‌ ಕಾಟಿಪಳ್ಳ, ಶಶಿಕಲಾ ಪದ್ಮನಾಭ, ಬಿ.ಕೆ. ತಾರಾನಾಥ್‌, ಬಶೀರ್‌ ಬೈಕಂಪಾಡಿ, ಹ್ಯಾರಿಸ್‌ ಬೈಕಂಪಾಡಿ, ಶರೀಫ್‌ ಚೊಕ್ಕಬೆಟ್ಟು, ಜಲೀಲ್‌ ಬದ್ರಿಯ, ಮಲ್ಲಿಕಾರ್ಜುನ ಕೋಡಿಕಲ್‌, ಅಬೂಬಕರ್‌ ಪ್ಯಾರಡೈಸ್‌, ಪ್ರಹ್ಲಾದ್‌ ಉಪಸ್ಥಿತರಿದ್ದರು. ಉಮೇಶ್‌ ದಂಡಕೇರಿ ಸ್ವಾಗತಿಸಿದರು.

ಬೈಕ್‌ ರ್ಯಾಲಿ ನಡೆಯಿತು. ಪ್ರಿಯಾಂಕ್‌ ಖರ್ಗೆ ಅವರನ್ನು ಮೊದಿನ್‌ ಬಾವಾ ಬೈಕ್‌ನಲ್ಲಿ ಕೂರಿಸಿ ರೈಡ್‌ ಮಾಡಿದರು. ಪಾದಯಾತ್ರೆ ಯಲ್ಲಿ ನಾಯಕರು, ಸಾವಿರಾರು ಕಾರ್ಯಕರ್ತರು ಸಾಗಿ ಬಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next