ಬೆಂಗಳೂರು: ಪ್ರಿಯಾಂಕ್ ಖರ್ಗೆ ಪ್ರಚಾರದ ಹಪಾಹಪಿಯಿದೆ. ಪ್ರಿಯಾಂಕ್ ಖರ್ಗೆ ಬಳಿ 50 ಸಾವಿರ ಕೋಟಿ ಮೌಲ್ಯದ ಆಸ್ತಿಯಿದೆಯಂತೆ. ಪ್ರಿಯಾಂಕ್ ಖರ್ಗೆ ಐಟಿ ಬಿಟಿ ಸಚಿವರಾಗಿದ್ದಾಗ ಬಿಟ್ ಕಾಯಿನ್ ಹಗರಣದಿಂದ ಕಪ್ಪು ಹಣ ಪಡಿದಿದ್ದಾರೆಂಬ ಮಾಹಿತಿ ಇದೆ ಎಂದು ಬಿಜೆಪಿ ವಕ್ತಾರ ಗಣೇಶ್ ಕಾರ್ಣಿಕ್ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆ ತಮ್ಮ ಕಪ್ಪು ಹಣವನ್ನು ಬಿಟ್ ಕಾಯಿನ್ ನಲ್ಲಿ ತೊಡಗಿಸಿದ್ದಾರೆಂಬ ಆರೋಪವಿದೆ. ಪ್ರಿಯಾಂಕ್ ಖರ್ಗೆ ಐಟಿಬಿಟಿ ಸಚಿವರಾಗಿದ್ದಾಗ ಶ್ರೀಕಿ ಭೇಟಿ ಮಾಡಿದ್ದರು, ಬಿಟ್ ಕಾಯಿನ್ ಬಗ್ಗೆ ಚರ್ಚೆ ಮಾಡಿದ್ದಾರೆ. ಶ್ರೀಕಿ ಭೇಟಿ ಮಾಡಿಲ್ಲವೆಂದು ಪ್ರಿಯಾಂಕ್ ಖರ್ಗೆ ಹೇಳಲಿ ನೋಡೋಣ ಎಂದು ಸವಾಲೆಸದರು.
ಇದನ್ನೂ ಓದಿ:ಬಿಜೆಪಿ ಜಾರಿಗೆ ತಂದಿರುವ ಬೃಹತ್ ಯೋಜನೆಗಳನ್ನು ಕಾಂಗ್ರೆಸ್ ರದ್ಧುಗೊಳಿಸಲಿದೆ: ಪಿ.ಚಿದಂಬರಂ
ಕಾಂಗ್ರೆಸ್ ನ ಉಸ್ತುವಾರಿ ಸುರ್ಜೇವಾಲ ಪ್ರಾಮಾಣಿಕ ಹೇಳಿಕೆ ಕೊಟ್ಟಿದಾರೆ. 2016ನೇ ಇಸವಿಯಿಂದ ಬಿಟ್ ಕಾಯಿನ್ ದಂಧೆ ಇತ್ತೆಂದು ಸುರ್ಜೇವಾಲಾ ಹೇಳಿದಾರೆ. ಆದರೆ ಆಗ ಕಾಂಗ್ರೆಸ್ ಸರ್ಕಾರವಿತ್ತು, ಯಾಕೆ ವಿಚಾರಣೆ ಮಾಡಲಿಲ್ಲ ಎಂದು ಗಣೇಶ್ ಕಾರ್ಣಿಕ್ ಪ್ರಶ್ನಿಸಿದರು.
ಡಿಕೆಶಿ ಮೇಲೆ ಅನುಕಂಪವಿದೆ: ಸಿದ್ದರಾಮಯ್ಯನವರು ಡಿಕೆ ಶಿವಕುಮಾರ್ ರನ್ನು ಮೂಲೆಗುಂಪು ಮಾಡುತ್ತಿದ್ದಾರೆ. ಇದಕ್ಕಾಗಿ ಬಿಟ್ ಕಾಯಿನ್ ಹಗರಣ ಕೈಗೆತ್ಕೊಂಡಿದ್ದಾರೆ. ಸಿದ್ದರಾಮಯ್ಯ ಯಾವುದೇ ರಾಜ್ಯ ವಿಚಾರ ಬಗ್ಗೆ ಮಾತನಾಡುತ್ತಿಲ್ಲ. ರೈತರ ಸಮಸ್ಯೆ, ಬರ, ಪ್ರವಾಹ ಬಗ್ಗೆ ರಾಜ್ಯ ಸಂಚಾರ ಮಾಡಿಲ್ಲ. ಡಿಕೆ ಶಿವಕುಮಾರ್ ಮೇಲೆ ನನಗೆ ಅನುಕಂಪ ಇದೆ. ಅವರು ಅಧ್ಯಕ್ಷ ಆದಾಗಿಂದ ಒಂದು ದಿನ ಕೂಡಾ ಸಿದ್ದರಾಮಯ್ಯ ಅವರಿಗೆ ನಿದ್ದೆ ಮಾಡಲು ಬಿಟ್ಟಿಲ್ಲ. ಇದು ಕಾಂಗ್ರೆಸ್ ನ ಆಂತರಿಕ ವಿಚಾರ ಎಂದು ಗಣೇಶ್ ಕಾರ್ಣಿಕ್ ಹೇಳಿದರು.
ಡಿಕೆಶಿ ಮೂಲೆಗುಂಪು ಮಾಡುವ ಸಲುವಾಗಿ ಸಿದ್ದರಾಮಯ್ಯರಿಂದ ಬಿಟ್ ಕಾಯಿನ್ ವಿಚಾರ ಪ್ರಸ್ತಾಪ ಮಾಡುತ್ತಿದ್ದಾರೆ. ಆ ಮೂಲಕ ಹೈಕಮಾಂಡ್ ನಾಯಕರ ಮುಂದೆ ತಾನು ಬಿಂಬಿಸಿಕೊಳ್ಳುವುದು ಸಿದ್ದರಾಮಯ್ಯ ಉದ್ದೇಶ. ಡಿಕೆಶಿಯನ್ನು ಸೈಡ್ ಲೈನ್ ಮಾಡುವ ಹುನ್ನಾರ ಇದು ಎಂದು ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದರು.