Advertisement

ಎಸ್‌ಟಿಗೆ ಸೌಲಭ್ಯ ಒದಗಿಸಲು ಪ್ರಿಯಾಂಕ್‌ ಖರ್ಗೆಗೆ ಮನವಿ

10:24 AM Apr 04, 2022 | Team Udayavani |

ವಾಡಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಚಿತ್ತಾಪುರ ಮೀಸಲು ಮತಕ್ಷೇತ್ರ ವ್ಯಾಪ್ತಿಯ ಎಸ್‌ಟಿ ಸಮುದಾಯದ ಜನರು ಶಾಸಕ ಪ್ರಿಯಾಂಕ್‌ ಖರ್ಗೆಗೆ ಮನವಿ ಸಲ್ಲಿಸಿದ್ದಾರೆ.

Advertisement

ಮಹರ್ಷಿ ವಾಲ್ಮೀಕಿ ಸಮಾಜದ ತಾಲೂಕು ಅಧ್ಯಕ್ಷ ಭೀಮರಾವ್‌ ದೊರೆ ನೇತೃತ್ವದಲ್ಲಿ ಬೆಂಗಳೂರಿನ ನಿವಾಸದಲ್ಲಿ ಶಾಸಕ ಪ್ರಿಯಾಂಕ್‌ ಅವರನ್ನು ಭೇಟಿ ಮಾಡಿರುವ ಚಿತ್ತಾಪುರ, ವಾಡಿ, ಚಾಮನೂರ, ಲಾಡ್ಲಾಪುರ, ಅಣ್ಣಿಕೇರಿ, ಶಹಾಬಾದ ಸೇರಿದಂತೆ ವಿವಿಧ ಗ್ರಾಮಗಳ ವಾಲ್ಮೀಕಿ ಸಮಾಜದ ಮುಖಂಡರು, ಸಮುದಾಯಕ್ಕೆ ಸಿಗಬೇಕಾದ ಸರ್ಕಾರಿ ಸೌಲಭ್ಯಗಳು ವಿವಿಧ ಕಾರಣಗಳಿಂದ ನನೆಗುದಿಗೆ ಬಿದ್ದಿವೆ. ಅನೇಕ ಸೌಕರ್ಯಗಳು ಜನಂಗದ ಬಡಾವಣೆಗಳಿಗೆ ತಲುಪಲು ವಿಳಂಬವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನನೆಗುದಿಗೆ ಬಿದ್ದಿರುವ ಚಿತ್ತಾಪುರ ಪಟ್ಟಣದ ವಾಲ್ಮೀಕಿ ಭವನ ಕಾಮಗಾರಿ ಪೂರ್ಣಗೊಳಿಸಬೇಕು. ಹದಗೆಟ್ಟ ವಾಡಿ-ಚಾಮನೂರ ಡಾಂಬರೀಕರಣ ರಸ್ತೆ ಅಭಿವೃದ್ಧಿಪಡಿಸಬೇಕು. ಪಟ್ಟಣದಲ್ಲಿ ಬೇಡ ಜನಾಂಗದ ಸಾಂಸ್ಕೃತಿಕ ಸಾಮಾಜಿಕ ಚಟುವಟಿಕೆ ನಡೆಸಲು ವಾಲ್ಮೀಕಿ ಸಮುದಾಯ ಭವನ ಮಂಜೂರು ಮಾಡಿಸುವ ಮೂಲಕ ಕಟ್ಟಡ ನಿರ್ಮಿಸಲು ಒಂದು ಎಕರೆ ಭೂಮಿ ಒದಗಿಸಬೇಕು. ಲಾಡ್ಲಾಪುರ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಪ್ರತಿಮೆ ಸ್ಥಾಪನೆಗೆ ಅನುದಾನ ಬಿಡುಗಡೆ ಮಾಡಬೇಕು. ಪಟ್ಟಣದ ವಾಲ್ಮೀಕಿ ಸಮಾಜದ ರುದ್ರಭೂಮಿಗೆ ಬೋರ್‌ವೆಲ್‌ ಮಂಜೂರು ಮಾಡಿಸಬೇಕು. ಸ್ಮಶಾನದ ಪ್ರವೇಶ ದ್ವಾರಕ್ಕೆ ಕಬ್ಬಿಣದ ಗೇಟ್‌ ಮತ್ತು ಒಂದು ಕೋಣೆ ನಿರ್ಮಿಸಲು ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಪ್ರಿಯಾಂಕ್‌ ಅವರಲ್ಲಿ ಮನವಿ ಮಾಡಿದ್ದಾರೆ.

ಮಹರ್ಷಿ ವಾಲ್ಮೀಕಿ ಸಮಾಜದ ತಾಲೂಕು ಅಧ್ಯಕ್ಷ ಭೀಮರಾವ್‌ ದೊರೆ, ಕಾರ್ಯದರ್ಶಿ ಹುಸನಪ್ಪ ಮಗದಂಪುರ, ಉಪಾಧ್ಯಕ್ಷ ಸುಭಾಶ್ಚಂದ್ರ ರದ್ದೇವಾಡಗಿ, ಮುಖಂಡರಾದ ಭಾಗಪ್ಪ ಮೊಗಲಾ, ಚಂದ್ರಾಮ ಲಾಡ್ಲಾಪುರ, ಸಾಬಣ್ಣ ಅಲ್ಲೂರ, ಭೀಮರಾಯ ಮುಸ್ಲಾ, ಉಮೇಶ ಚಾಮನೂರ, ರಾಮಕೃಷ್ಣ ಮಾಲಗತ್ತಿ, ಸಾಬಣ್ಣ ರದ್ದೇವಾಡಗಿ, ಶರಣಬಸಪ್ಪ ದಂಡೋತಿ, ಸಾಬಣ್ಣ ಮುಸ್ಲಾ, ಮರಲಿಂಗ ಮಳಗ, ಸಾಬಣ್ಣ ಕುಂಬಾರಹಳ್ಳಿ, ಅಮರೇಶ ದೊರೆ, ಸುಬ್ಬಣ್ಣ ನಾಯ್ದೊಡಿ, ನಾಗಪ್ಪ ನಾಯ್ದೊಡಿ, ಸಾಬಣ್ಣ ಗಲಗಿನ್‌, ಶಿವಶಂಕರ ಮುಸ್ಲಾ, ನಾಗರಾಜ ದೊರೆ, ಹಣಮಂತ ದೊರೆ ಸೂಲಹಳ್ಳಿ ಹಾಗೂ ಮತ್ತಿತರರು ನಿಯೋಗದಲ್ಲಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next