Advertisement
ತಾಲೂಕಿನಾದ್ಯಂತ ಅನೇಕ ಗ್ರಾಮಗಳಲ್ಲಿ ಮಳೆಗಾಲದಲ್ಲಿಯೇ ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿದ್ದು , ಹನಿ ನೀರಿಗಾಗಿಯೂ ಗ್ರಾಮಸ್ಥರು ಪರದಾಡುವಂತಾಗಿದೆ. ಎಲ್ಲಿ ನೋಡಿದರೂ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಎಷ್ಟು ಕೊಳವೆ ಬಾವಿ ಕೊರೆದರೂ ಭೂಮಿಯಿಂದ ಹನಿ ನೀರು ಹೊರಗೆ ಬರುತ್ತಿಲ್ಲ.
Related Articles
Advertisement
ನದಿ ಪಾತ್ರದ ಗ್ರಾಮಗಳಲ್ಲೂ ನೀರಿಲ್ಲ: ಇನ್ನು ತಾಲೂಕಿನಲ್ಲಿ ಹರಿಯುವ ಭೀಮಾ ನದಿ ಮಳೆಗಾಲದಲ್ಲಿ ಮಾತ್ರ ತುಂಬಿ ಹರಿಯುತ್ತದೆ. ಆದರೆ ಈ ಬಾರಿಯ ಮಳೆಗಾಲ ಮುಗಿಯಲು ಬಂದರೂ ನದಿಗಳು ತುಂಬಿ ಹರಿದಿಲ್ಲ. ಹೀಗಾಗಿ ನದಿ ಪಾತ್ರದ ಗ್ರಾಮಗಳಲ್ಲೂ ನೀರಿನ ಕೊರತೆ ಕಾಡುತ್ತಿದೆ.
ಇಲಾಖೆ, ಜನಪ್ರತಿನಿಧಿಗಳ ಬೇಜವಬ್ದಾರಿ: ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳಲ್ಲಿ ಪರ್ಯಾಯ ವ್ಯವಸ್ಥೆ ಕೈಗೊಳ್ಳುವಲ್ಲಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ವಿಫಲವಾಗಿದ್ದು ಅವರ ಬೇಜವಾಬ್ದಾರಿ ತೋರಿಸುತ್ತಿದೆ. ಇವರ ನಡೆಗೆ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.
ತಾಲೂಕಿನ ಮಾತೋಳಿ ಗ್ರಾಮಸ್ಥರು ತಾಲೂಕಿಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಭೇಟಿ ಕೊಟ್ಟಾಗ ಖಾಲಿ ಕೊಡಗಳೊಂದಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದರು. ಆದರೂ ಯಾವುದೇ ಪ್ರಯೋಜವಾಗಿಲ್ಲ.
ಹೊಸೂರ ಊರಾಗ ಎಲ್ಲಿನೂ ಹನಿ ನೀರ್ ಸಿಗಲಾರ್ª ಪರಿಸ್ಥಿತಿ ಬಂದಾದ್ರಿ, ಮನ್ಯಾನ್ ಮಂದಿ, ಮಕ್ಕಳೆಲ್ಲ ಸೇರಿ ದೂರ್‌ದ ಗೌಡ್ರ, ಕುಲಕಾಣ್ಯಾರ್ ಹೊಲಕ್ ಹೋಗಿ ನೀರ್ ತರಬೇಕ್ರೀ, ನಮ್ ಗೋಳ್ ಕೇಳುವರು ಯಾರೂ ಇಲ್ರಿ.ಹೊಸೂರ್ ಗ್ರಾಮಸ್ಥರು ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳಲ್ಲಿ ಈಗಾಗಲೇ ಪರ್ಯಾಯ ವ್ಯವಸ್ಥೆ ಕೈಗೊಳ್ಳುವ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಖಾಸಗಿಯವರಿಂದ ನೀರು ಖರೀದಿಸಿ ಸರಬರಾಜು ಮಾಡಲಾಗುತ್ತದೆ. ಯಾವ ಗ್ರಾಮದಲ್ಲಾದರೂ ಸಮಸ್ಯೆ ಹೆಚ್ಚಿದ್ದರೆ ತುರ್ತಾಗಿ ಸ್ಪಂದಿಸಲಾಗುತ್ತದೆ.
ಗುರುನಾಥ ಶೆಟಗಾರ, ತಾಪಂ ಇಒ ಮಲ್ಲಿಕಾರ್ಜುನ ಹಿರೇಮಠ