Advertisement
ಲಾಕ್‌ಡೌನ್ ತೆರವುಗೊಂಡರೂ ಬಸ್ ಡಿಪೊದಿಂದ ಬಿಡುತ್ತಿದ್ದ ಆಲಮೇಲ-ಕುಮಸಗಿ, ಬಳಗಾನೂರ, ಹರನಾಳ, ಓತಿಹಾಳ, ಸೋಮಜಾಳ ಊರುಗಳಿಗೆ ಹೋಗುವ ಹೋಗುವ ಸಾರಿಗೆ ವ್ಯವಸ್ಥೆಯ 10 ಅನುಸೂಚಿಗಳು ಕಾರ್ಯಾಚರಣೆ ಮಾಡುತ್ತಿಲ್ಲ. ಈ ಭಾಗದ ಜನರು ಬೈಕ್, ಕಾರು, ಆಟೊ, ಲಗೇಜ್ ವಾಹನಗಳಲ್ಲಿ ತಮ್ಮ ಕೆಲಸಗಳಿಗೆ ತಾಲೂಕು ಕೇಂದ್ರಕ್ಕೆ ಬಂದು ಹೋಗುತ್ತಿದ್ದಾರೆ. ದೇಶದಲ್ಲಿ ಕೋವಿಡ್ ಸೋಂಕಿನ ವಿರುದ್ಧ ಹೋರಾಡಲು ದೇಶದಲ್ಲಿ ಲಾಕ್ ಡೌನ್ ಮಾಡಲಾಯಿತು. ಲಾಕ್ ಡೌನ್ ಮುಂಚೆ ಈಶಾನ್ಯ ಕರ್ನಾಟಕರಸ್ತೆ ಸಾರಿಗೆ ಸಂಸ್ಥೆಯ ಸಿಂದಗಿ ಘಟಕದಿಂದ 99 ಅನುಸೂಚಿಗಳು ಕಾರ್ಯಾಚರಣೆಯಲ್ಲಿದ್ದವು. ಆಗ ತಾಲೂಕಿನ ಜನತೆಗೆ ತಾಲೂಕಿನಲ್ಲಿ ಸಂಚಾರ ಮಾಡಲಿಕ್ಕೆ ಅನುಕೂಲವಾಗಿತ್ತು. ಆದರೆ ಲಾಕ್ ಡೌನ್ ನಂತರ 99 ಅನುಸೂಚಿಗಳಲ್ಲಿ 89 ಅನುಸೂಚಿಗಳ ಕಾರ್ಯಾಚರಣೆ ಶುರುವಾಗಿದೆ.
Related Articles
Advertisement
ಕೋವಿಡ್ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಸಾರಿಗೆ ಸಂಸ್ಥೆಯಲ್ಲಿ ಅಳವಡಿಸಿ ಕೊಳ್ಳಲಾಗಿದೆ. ಪ್ರತಿ ದಿನ ಬಸ್‌ಗಳಿಗೆ ಸ್ಯಾನಿಟೈಸ್ ಮಾಡಿ ವಾಶ್ ಮಾಡಲಾಗುತ್ತಿದೆ. ಆದರೂ ಪ್ರಯಾಣಿಕರ ಸಂಖ್ಯೆವಿರಳವಾಗಿದೆ. ಬಸ್ ಸಂಚಾರ ಬಂದ್ ಮಾಡಿದ ಹಳ್ಳಿಗಳಪ್ರಯಾಣಿಕರಿಗೆ ತೊಂದರೆಯಾಗಬಾರದು ಎಂದು ಪರ್ಯಾಯವಾಗಿ ಬೇರೆ ಮಾರ್ಗದ ಬಸ್‌ಗಳನ್ನು ಆಯಾ ಹಳ್ಳಿಗಳ ಮುಖಾಂತರ ಸಂಚರಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. –ಎಸ್.ಎಂ. ವಾಲೀಕಾರ, ಘಟಕ ವ್ಯವಸ್ಥಾಪಕರು, ಸಿಂದಗಿ
ವಿರಳವಾಗಿರುವುದರಿಂದ ಮತ್ತು ಕೋವಿಡ್ ಸೋಂಕಿನ ಹಾವಳಿ ಹೆಚ್ಚುತ್ತಿರುವುದರಿಂದ ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಿಗೆ ಸಾರಿಗೆ ಬಸ್ ಬದಲಾಗಿ ಖಾಸಗಿ ವಾಹನಗಳ ಮೊರೆ ಹೋಗಬೇಕಾದ ಪರಿಸ್ಥಿತಿ ಬಂದೊದಗಿದೆ. ತಾಲೂಕು ಕೇಂದ್ರದಿಂದ ಜಿಲ್ಲಾ ಕೇಂದ್ರಕ್ಕೆ ಹಾಗೂ ಹಳ್ಳಿಗಳಿಗೆ ಹೋಗಲು ಸಾರಿಗೆ ಇಲಾಖೆ ನಿಗದಿತ ಸಮಯದಲ್ಲಿ ನಿಶ್ಚಿತವಾಗಿ ಬಸ್ ಓಡಿಸಲು ಮುಂದಾದರೆ ಪ್ರಯಾಣಿಸಲು ಜನರ ಮನಪೋಲಿಯಬಹುದು. –ರಾಜೇಶ್ವರಿ ಪಾಟೀಲ, ಪಟ್ಟಣ ನಿವಾಸಿ, ಸಿಂದಗಿ
ಲಾಕ್‌ಡೌನ್ ನಂತರ ಸಾರಿಗೆ ಸಂಸ್ಥೆಯಿಂದ ಬಸ್ ಸಂಚಾರ ಕಡಿಮೆಯಾಗಿದೆ. ಸಾರಿಗೆ ಸಂಸ್ಥೆಯವರು ಬಸ್‌ನಲ್ಲಿ ಸಾಕಷ್ಟು ಸುರಕ್ಷತಾ ಕ್ರಮ ಕೈಗೊಂಡರೂ ಜನತೆ ಪ್ರಯಾಣಿಸಲು ಹಿಂದೆ ಮುಂದೆ ತುಳಿಯುತ್ತಿದ್ದಾರೆ. ಖಾಸಗಿ ವಾಹನ ಬಾಡಿಗೆ ಪಡೆದು ಪ್ರಯಾಣಿಸುತ್ತಿದ್ದಾರೆ. ನಾವು ನಮ್ಮ ಖಾಸಗಿ ವಾಹನಗಳಲ್ಲಿ ಸಾಕಷ್ಟು ಸುಕರಕ್ಷಿತ ಕ್ರಮ ಕೈಗೊಂಡಿದ್ದೇವೆ. ಬಾಡಿಗೆಗಳ ಸಂಖ್ಯೆ ಹೆಚ್ಚುತ್ತಿವೆ. –ಸಂಜೀವ ಹೂಗಾರ, ಖಾಸಗಿ ವಾಹನ ಚಾಲಕ, ಸಿಂದಗಿ
-ರಮೇಶ ಪೂಜಾರ