Advertisement

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

01:35 AM Sep 20, 2024 | Team Udayavani |

ಬೆಂಗಳೂರು: ರಾಜ್ಯದ ಖಾಸಗಿ ವಿಶ್ವವಿದ್ಯಾನಿಲಯಗಳು ಎಂಜಿನಿಯರಿಂಗ್‌ ಸಹಿತ ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ಇನ್ನು ಪ್ರತ್ಯೇಕ ಪ್ರವೇಶ ಪರೀಕ್ಷೆ ನಡೆಸು ವಂತಿಲ್ಲ. ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರಕಾರಗಳು ನಡೆಸುವ ಪ್ರವೇಶ ಪರೀಕ್ಷೆ ಗಳನ್ನೇ ಮಾನದಂಡವಾಗಿ ಪರಿಗಣಿಸಿ ಪ್ರವೇಶ ಕಲ್ಪಿಸುವಂತೆ ಸರಕಾರ ಸೂಚನೆ ನೀಡಿದೆ.

Advertisement

ಈ ಮೂಲಕ ವಿದ್ಯಾರ್ಥಿಗಳಿಗೆ ತಕ್ಕಮಟ್ಟಿಗೆ ಪರೀಕ್ಷೆ ಗಳ ಹೊರೆ ತಗ್ಗಿಸಲು ನಿರ್ಧರಿಸಲಾಗಿದೆ.ಖಾಸಗಿ ವಿ.ವಿ.ಗಳಲ್ಲಿ ಸಾಮಾನ್ಯವಾಗಿ ಒಟ್ಟಾರೆ ಶೇ. 100 ಸೀಟುಗಳಲ್ಲಿ 40ರಷ್ಟಕ್ಕೆ ಸರಕಾರಗಳು ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿನ (ಸಿಇಟಿ) ಮೆರಿಟ್‌ ಆಧಾರದ ಮೇಲೆ ಪ್ರವೇಶ ಕಲ್ಪಿಸಲಾಗುತ್ತದೆ. ಉಳಿದವುಗಳಿಗೆ ವಿವಿಧ ರೀತಿಯ ಪರೀಕ್ಷೆಗಳು ಅಥವಾ ತಮ್ಮದೇ ಆದ ಪ್ರತ್ಯೇಕ ಪರೀಕ್ಷೆ ನಡೆಸಿ ಸೀಟು ಹಂಚಿಕೆ ಮಾಡಲಾಗುತ್ತಿದೆ. ಇದರಲ್ಲಿ ಏಕರೂಪ ವ್ಯವಸ್ಥೆ ತರಲು ಈ ನಿರ್ಣಯ ಕೈಗೊಳ್ಳಲಾಗಿದೆ.

ಬರುವ ಶೈಕ್ಷಣಿಕ ವರ್ಷದಿಂದ ಅನ್ವಯ ಆಗಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ| ಎಂ.ಸಿ. ಸುಧಾಕರ್‌ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಪ್ರಸ್ತುತ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಜೆಇಇ, ಗೇಟ್‌, ಸಿಇಟಿ, ಕಾಮೆಡ್‌-ಕೆ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಇದರ ಹೊರತಾಗಿ ಶೇ. 40ರಷ್ಟು ಸೀಟುಗಳ ಪ್ರವೇಶಕ್ಕೆ ಹಲವು ಖಾಸಗಿ ವಿ.ವಿ.ಗಳು ಪ್ರತ್ಯೇಕ ಪರೀಕ್ಷೆ ನಡೆಸುತ್ತಿವೆ. ಬರುವ ಶೈಕ್ಷಣಿಕ ವರ್ಷದಿಂದ ಆ ಪರೀಕ್ಷೆಗಳನ್ನು ನಡೆಸುವಂತಿಲ್ಲ. ಸರಕಾರ ನಡೆಸುವ ಪ್ರವೇಶ ಪರೀಕ್ಷೆಗಳಲ್ಲಿನ ಯಾವುದಾದರೂ ಒಂದನ್ನು ಮಾನದಂಡವಾಗಿ ಪರಿಗಣಿಸಿ ಪ್ರವೇಶ ಕಲ್ಪಿಸುವಂತೆ ನಿರ್ದೇಶನ ನೀಡಲಾಗಿದೆ ಎಂದರು.

ರಾಜ್ಯದ 30 ಖಾಸಗಿ ವಿ.ವಿ.ಗಳ ಪೈಕಿ 17 ವಿ.ವಿ.ಗಳು ಗುರುವಾರ ನಡೆದ ಸಭೆಯಲ್ಲಿ ಸಹಮತ ಸೂಚಿಸಿವೆ. ಕೆಲವು ವಿ.ವಿ.ಗಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಯಾವ ಪರೀಕ್ಷೆಯನ್ನು ಮಾನದಂಡವಾಗಿ ಪರಿಗಣಿಸಲಿವೆ ಎಂಬುದನ್ನೂ ಸ್ಪಷ್ಟಪಡಿಸಿವೆ. ಹಲವು ವಿ.ವಿ.ಗಳು ಅನಂತರದಲ್ಲಿ ಅಭಿಪ್ರಾಯ ತಿಳಿಸುವುದಾಗಿ ಹೇಳಿದ್ದು, ಈ ಸಂಬಂಧ ಸಂಘಟನೆಗಳನ್ನು ಮಾಡಿಕೊಂಡು ಒಮ್ಮತ ನಿರ್ಧಾರ ಪ್ರಕಟಿಸಲಿವೆ.

Advertisement

ಶುಲ್ಕದಲ್ಲೂ ಏಕರೂಪತೆಗೆ ಸಮಿತಿ
ಇದಲ್ಲದೆ ಖಾಸಗಿ ವಿ.ವಿ.ಗಳಲ್ಲಿನ ವೃತ್ತಿಪರ ಕೋರ್ಸ್‌ಗಳ ಪ್ರವೇಶ ಶುಲ್ಕದಲ್ಲೂ ಏಕರೂಪತೆ ತರಲು ಉದ್ದೇಶಿಸಿದ್ದು, ಈ ಸಂಬಂಧ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿ ರಚಿಸಲು ನಿರ್ದೇಶನ ನೀಡಲಾಗಿದೆ ಎಂದು ಡಾ| ಸುಧಾಕರ್‌ ತಿಳಿಸಿದರು.

ಈಗಿರುವ ವ್ಯವಸ್ಥೆಯಲ್ಲಿ ಖಾಸಗಿ ವಿ.ವಿ.ಗಳು ಬೇಕಾಬಿಟ್ಟಿ ಶುಲ್ಕ ನಿಗದಿಪಡಿಸುತ್ತಿವೆ. ಅದನ್ನು ನಿಯಂತ್ರಿಸಿ ಏಕರೂಪ ವ್ಯವಸ್ಥೆ ಜಾರಿಗೊಳಿಸಲು ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿ ರಚಿಸುವ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು. ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ (ಕೆಇಎ) ಈಗಾಗಲೇ ಶುಲ್ಕ ನಿಯಂತ್ರಣಕ್ಕೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿ ಇದ್ದು, ದಾಖಲಾಗುವ ದೂರುಗಳ ಅನ್ವಯ ಅದು ಕ್ರಮ ಕೈಗೊಳ್ಳುತ್ತಿದೆ.

ಪ್ರವೇಶ, ಸಂಯೋಜನೆಗೂ ವೇಳಾಪಟ್ಟಿ
ಬರುವ ಶೈಕ್ಷಣಿಕ ವರ್ಷಕ್ಕೆ ರಾಜ್ಯದ ಎಲ್ಲ ವಿ.ವಿ.ಗಳು ಪ್ರವೇಶಾತಿ, ಪರೀûಾ ವೇಳಾಪಟ್ಟಿ, ಫಲಿತಾಂಶ ಪ್ರಕಟನೆ ಹಾಗೂ ಸಂಯೋಜನೆಗೂ ಸಚಿವ ಡಾ| ಸುಧಾಕರ್‌ ವೇಳಾಪಟ್ಟಿ ಪ್ರಕಟಿಸಿದರು. ಕಾಲೇಜುಗಳು ಹೊಸ ಕೋರ್ಸ್‌ಗಳ ಸಂಯೋಜನೆ ಹಾಗೂ ತಮ್ಮಲ್ಲಿ ಲಭ್ಯವಿರುವ ಸೀಟುಗಳ (ಇನ್‌ಟೇಕ್‌) ಮಾಹಿತಿ ಪ್ರಕಟಿಸಲು ವೇಳಾಪಟ್ಟಿ ಪ್ರಕಟಿಸಿದೆ. ಪ್ರತೀ ಮಾರ್ಚ್‌ ವೇಳೆಗೆ ಸರಕಾರಕ್ಕೆ ಮಾಹಿತಿ ನೀಡಬೇಕು ಎಂದರು.

ಏಕೆ ಈ ನಿರ್ಧಾರ?
– ವಿದ್ಯಾರ್ಥಿಗಳಿಗೆ ತಕ್ಕಮಟ್ಟಿಗೆ ಪರೀ ಕ್ಷೆಗಳ ಹೊರೆ ತಗ್ಗಿಸಲು ಈ ನಿರ್ಧಾರ
– ತಮ್ಮದೇ ಆದ ಪ್ರತ್ಯೇಕ ಪರೀಕ್ಷೆಗಳನ್ನು ನಡೆಸಿ ಸೀಟು ಹಂಚಿ ಕೆಗೆ ಕಡಿವಾಣ
– ಕೇಂದ್ರ-ರಾಜ್ಯ ಸರಕಾರಗಳು ನಡೆ ಸುವ ಪರೀ ಕ್ಷೆಯೇ ಮಾನ ದಂಡ
-ಶುಲ್ಕದಲ್ಲೂ ಏಕರೂಪತೆಗೆ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿ

Advertisement

Udayavani is now on Telegram. Click here to join our channel and stay updated with the latest news.

Next