Advertisement

Kundapura ಪ್ರತ್ಯೇಕ ಪ್ರಕರಣ: ಮೂವರು ದಿಢೀರ್‌ ಸಾವು

12:34 AM Sep 07, 2024 | Team Udayavani |

ಕುಂದಾಪುರ: ಯಾವುದೋ ಅನಾರೋಗ್ಯ ಉಲ್ಬಣಗೊಂಡು ಮೂವರು ದಿಢೀರ್‌ ಸಾವಿಗೀಡಾದ ಘಟನೆ ಕುಂದಾಪುರ ಹಾಗೂ ಕೋಟೇಶ್ವರದಲ್ಲಿ ಸಂಭವಿಸಿದೆ.

Advertisement

ಕಾವ್ರಾಡಿ ಗ್ರಾಮದ ಪ್ರದೀಪ ಮೊಗವೀರ (44) ಅವರು ಕುಂದಾಪುರ ಬೋರ್ಡ್‌ ಹೈಸ್ಕೂಲ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ಅವರು ಕೋಟೇಶ್ವರ ಗ್ರಾಮದ ಪುರಾಣಿಕ ರಸ್ತೆಯಲ್ಲಿರುವ ಪ್ರಾಂಶುಪಾಲರ ಮನೆಯಲ್ಲಿ ಮೃತಪಟ್ಟಿದ್ದಾರೆ.

ಪ್ರಾಂಶುಪಾಲರು ಮನೆಯಲ್ಲಿ ಇಲ್ಲದಿದ್ದ ಸಂದರ್ಭದಲ್ಲಿ ಇವರು ಅಲ್ಲಿಗೆ ಮಲಗಲು ಹೋಗು ತ್ತಿದ್ದು, ಯಾವುದೋ ಕಾಯಿಲೆ ಉಲ್ಬಣ ಗೊಂಡು ಬಚ್ಚಲು ಮನೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಮೃತರ ಸಹೋದರ ರಾಜೇಶ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.ಯಕ್ಷಗಾನ ಕಲಾವಿದ ಹಾಗೂ ಉತ್ತಮ ನಿರೂಪಕರಾಗಿದ್ದ ಅವರು ತಂದೆ, ತಾಯಿ, ತಂಗಿಯನ್ನು ಅಗಲಿದ್ದಾರೆ. ಮೃತರ ನಿಧನಕ್ಕೆ ವಿಧಾನ ಪರಿ ಷತ್‌ ಮಾಜಿ ಸಭಾಪತಿ ಕೆ. ಪ್ರತಾಪ ಚಂದ್ರ ಶೆಟ್ಟಿ, ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಸಹಿತ ಪ್ರಮುಖರು ಸಂತಾಪ ಸೂಚಿಸಿದ್ದಾರೆ.

ಕೊರ್ಗಿ ಪ್ರಕರಣ
ಕೊರ್ಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಣ ಅ ಧಿಕಾರಿ ಪ್ರಶಾಂತ ಕುಮಾರ (42) ಅವರು ಲಾಡ್ಜ್ನಲ್ಲಿ ಮಲಗಿದಲ್ಲೇ ಸಾವಿ ಗೀಡಾಗಿದ್ದಾರೆ. ಅಧಿಕ ರಕ್ತದ ಒತ್ತಡ ಹಾಗೂ ಮಾನಸಿಕ ಕಾಯಿಲೆಗೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಅವರು ಮನೆಯಿಂದ ಕೆಲಸಕ್ಕೆಂದು ಹೊರಟಿದ್ದರು. ಕುಂದಾಪುರದ ಲಾಡ್ಜ್ ನಲ್ಲಿ ರೂಮ್‌ ಪಡೆದು ಉಳಿದು ಕೊಂಡಿದ್ದು, ಹೃದಯಾ ಘಾತ ಅಥವಾ ಬೇರೆ ಯಾವುದೋ ಕಾಯಿಲೆಯಿಂದ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.

Advertisement

ಮೃತರ ಪತ್ನಿಯ ತಂದೆ ಮೊಳಹಳ್ಳಿ ನಿತ್ಯಾನಂದ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

ಶೌಚಾಲಯದಲ್ಲಿ ಕುಸಿದು ಬಿದ್ದು ಸಾವು
ಕುಂದಾಪುರದ ಚರ್ಚ್‌ ರೋಡ್‌ ನಿವಾಸಿ ಉಮೇಶ್‌ (66) ಅವರು ಮನೆಯ ಶೌಚಾಲಯದಲ್ಲಿ ಬಿದ್ದು ಸಾವನ್ನಪ್ಪಿದ ಘಟನೆ ಸೆ. 6ರಂದು ಬೆಳಗ್ಗೆ 8.30ರಿಂದ 10.30ರ ನಡುವೆ ಸಂಭವಿಸಿದೆ.

ಹೃದಯ ಸಂಬಂಧಿ ಕಾಯಿಲೆಯಿಂದ ಬಳಲು ತ್ತಿದ್ದ ಇವರು ಕುಂದಾಪುರದ ಎಪಿಎಂಸಿ ರಸ್ತೆಯಲ್ಲಿರುವ ಬಾಡಿಗೆ ಮನೆಯಲ್ಲಿ ಒಬ್ಬರೇ ವಾಸ ವಿದ್ದರು.

ಪುತ್ರ ಸುನೀಲ್‌ ಕುಮಾರ್‌ ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.