Advertisement

ದೇಶದ 50 ಮಾರ್ಗಗಳಲ್ಲಿ ಶೀಘ್ರ ಓಡಲಿದೆ ಖಾಸಗಿ ರೈಲು

10:04 AM Oct 04, 2019 | sudhir |

ಹೊಸದಿಲ್ಲಿ: ಶೀಘ್ರ ಭಾರತದಲ್ಲೂ ಅಂತಾರಾಷ್ಟ್ರೀಯ ದರ್ಜೆಯ ರೈಲುಗಳು ಓಡುವ ದಿನಗಳು ದೂರವಿಲ್ಲ. ಇದಕ್ಕೆ ಪೂರಕವಾಗಿ, ಕೇಂದ್ರ ರೈಲ್ವೇ ಸಚಿವಾಲಯ ಹಂತ ಹಂತವಾಗಿ ಖಾಸಗಿಯವರಿಗೆ ರೈಲುಗಳನ್ನು ಓಡಿಸಲು ಅವಕಾಶ ಮಾಡುತ್ತಿದೆ.

Advertisement

ಶೀಘ್ರ ದೇಶದ 50 ಪ್ರಮುಖ ಮಾರ್ಗಗಳಲ್ಲಿ ಖಾಸಗಿಯವರು ರೈಲುಗಳನ್ನು ಓಡಿಸಲು ರೈಲ್ವೇ ಸಚಿವಾಲಯ ಅನುವು ಮಾಡಿಕೊಡಲಿದೆ. ರೈಲ್ವೇ ಆಡಳಿತ ಮಂಡಳಿ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಸಭೆಯಲ್ಲಿ ಚರ್ಚೆಯಾದ ವಿಚಾರದ ಪ್ರಕಾರ, ರೈಲ್ವೇ ಮಾರ್ಗಗಳಲ್ಲಿ ಖಾಸಗಿಯವರು ಆಧುನಿಕ ಪ್ರಯಾಣಿಕರ ರೈಲುಗಳನ್ನು ಓಡಿಸಬಹುದು.

ಇದಕ್ಕೆ ಅವಕಾಶ ಮಾಡಿಕೊಡಲು ಪಾರದರ್ಶಕ ವ್ಯವಸ್ಥೆಯನು ಜಾರಿಗೆ ತರಲಾಗುತ್ತಿದೆ. ಮಾರ್ಗಗಳು ರೈಲ್ವೇ ಇಲಾಖೆಯ ಸುಪರ್ದಿಯಲ್ಲೇ ಇದ್ದು, ಇದರಲ್ಲಿ ಖಾಸಗಿಯವರು ರೈಲು ಓಡಿಸಬೇಕಾದರೆ, ನಿರ್ದಿಷ್ಟ ಮೊತ್ತವನ್ನು ಪಾವತಿಸಬೇಕಾಗುತ್ತದೆ.

ರೈಲ್ವೇ ಅಧಿಕಾರಿಗಳ ಪ್ರಕಾರ, ಸುಮಾರು 50 ಮಾರ್ಗಗಳನ್ನು ಖಾಸಗಿಯವರಿಗೆ ಅವಕಾಶ ಮಾಡಿಕೊಡಲು ಮಾತುಕತೆ ನಡೆಸಲಾಗಿದೆ. ಹೆಚ್ಚುವರಿ ರೈಲುಗಳುನ್ನು ಓಡಿಸಲು ಸಾಧ್ಯವಾಗುವಂತಹ ಮಾರ್ಗಗಳು, ಸದ್ಯ ಅಭಿವೃದ್ಧಿ ಕೆಲಸ ನಡೆಯುತ್ತಿರುವ ಮಾರ್ಗಗಳ ಸಾಮರ್ಥ್ಯಗಳನ್ನು ಗಮನಿಸಿಕೊಂಡು ಖಾಸಗಿಯವರಿಗೆ ಅವಕಾಶ ನೀಡಲಾಗುತ್ತದೆ. ಇದಕ್ಕೆ ಕೆಲವೊಂದು ಮೂಲಸೌಕರ್ಯ ಅಭಿವೃದ್ಧಿಯೂ ಆಗಬೇಕಿರುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Advertisement

ಅ.5ರಂದು ಮೊದಲ ಬಾರಿಗೆ ದಿಲ್ಲಿ ಲಕ್ನೋ ಮಧ್ಯೆ ತೇಜಸ್‌ ಎಕ್ಸ್‌ಪ್ರೆಸ್‌ ಖಾಸಗಿ ರೈಲು ಓಡಲಿದೆ. ಇದು ಖಾಸಗಿ ರೈಲು ನಿರ್ವಹಣೆಯ ಮೊದಲ ಯೋಜನೆಯಾಗಿದ್ದು, ಎರಡನೆಯದಾಗಿ ಮುಂಬಯಿ ಅಹಮದಾಬಾದ್‌ ಮಧ್ಯೆ ಇನ್ನೊಂದು ತೇಜಸ್‌ ಎಕ್ಸ್‌ಪ್ರೆಸ್‌ ಓಡಲಿದೆ. ಈ ರೈಲು ಆರಂಭದ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಎರಡು ನಗರಗಳ ಮಧ್ಯೆ, ಗ್ರಾಮಾಂತರ ಪ್ರದೇಶಗಳು, ದೀರ್ಘ‌ ಪ್ರಯಾಣದ ದಾರಿಗಳಲ್ಲಿ ಖಾಸಗಿಯವರು ರೈಲು ಓಡಿಸುವ ಬಗ್ಗೆ ಅವಕಾಶ ಮಾಡಿಕೊಡಲು ಈ ಹಿಂದೆ ರೈಲ್ವೇ ಆಡಳಿತ ಮಂಡಳಿ ತೀರ್ಮಾನಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next