ಇಸ್ತಾಂಬುಲ್: ಇಲ್ಲಿನ ಅಟಾತುರ್ಕ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಖಾಸಗಿ ವಿಮಾನವೊಂದು ಲ್ಯಾಂಡ್ ಆಗುತ್ತಿದ್ದ ವೇಳೆ ಹೊತ್ತಿ ಉರಿದು ಭಸ್ಮವಾದ ಘಟನೆ ಗುರುವಾರ ನಡೆದಿದ್ದು, ಅದೃಷ್ಟವಷಾತ್ ವಿಮಾನದಲ್ಲಿದ್ದ ಪೈಲಟ್‌ಗಳಿಬ್ಬರು ಸೇರಿ ನಾಲ್ವರು ಪಾರಾಗಿದ್ದಾರೆ.
ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನಲೆಯಲ್ಲಿ ತುರ್ತಾಗಿ ಲ್ಯಾಂಡ್ ಆಗಲು ಮುಂದಾಗಿದೆ. ಈ ವೇಳೆ ವಿಮಾನ ಸ್ಫೋಟಗೊಂಡಿರುವುದಾಗಿ ವರದಿಯಾಗಿದೆ.
ಬೆಂಕಿ ತಗುಲಿ ಪೈಲಟ್‌ಗಳಿಬ್ಬರು ಮತ್ತು ಇಬ್ಬರು ಸಿಬಂದಿಗಳು ಗಾಯಗೊಂಡಿದ್ದು ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ರನ್ ವೇಯಲ್ಲೇ ಘಟನೆ ನಡೆದ ಕಾರಣ ಗಂಟೆಗಳ ಕಾಲ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಸಂಚಾರ ಸ್ಥಗಿತಗೊಂಡಿತ್ತು.
Related Articles
Video Courtesy: Youtubia TV