ನವದೆಹಲಿ: ದೇಶಾದ್ಯಂತ ಲಸಿಕೆ ಕೊರತೆ ಎದುರಿಸುತ್ತಿರುವ ಸಂದರ್ಭದಲ್ಲಿ ಕಳೆದ ತಿಂಗಳು ಖಾಸಗಿ ಆಸ್ಪತ್ರೆಯಲ್ಲಿ ಕೇವಲ ಶೇ.17ರಷ್ಟು ಮಾತ್ರ ಲಸಿಕೆಯನ್ನು ಬಳಕೆ ಮಾಡಲಾಗಿದ್ದು, ಉಳಿದ ಅಪಾರ ಪ್ರಮಾಣದ ಲಸಿಕೆ ಉಪಯೋಗವಾಗದೆ ಉಳಿದಿರುವುದಾಗಿ ಸರ್ಕಾರದ ಅಂಕಿಅಂಶದ ಮೂಲಕ ತಿಳಿದು ಬಂದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಬ್ಯಾಟ್ ನಿಂದ ತಲೆಗೆ ಹೊಡೆದು ಸಹೋದರಿಯನ್ನು ಕೊಲೆಗೈದ ಸಹೋದರ: ಆರೋಪಿಯನ್ನು ಬಂಧಿಸಿದ ಪೋಲಿಸರು
ಆರೋಗ್ಯ ಸಚಿವಾಲಯ ಜೂನ್ 4ರಂದು ಬಿಡುಗಡೆ ಮಾಡಿರುವ ಮಾಧ್ಯಮ ಪ್ರಕಟಣೆ ಪ್ರಕಾರ, ಮೇ ತಿಂಗಳಿನಲ್ಲಿ ದೇಶಾದ್ಯಂತ ಒಟ್ಟು 7.4 ಕೋಟಿ ಡೋಸ್ ಗಳು ಲಭ್ಯವಾಗಿದ್ದು, 1.85 ಕೋಟಿ ಡೋಸ್ ಗಳಷ್ಟು ಲಸಿಕೆಯನ್ನು ಖಾಸಗಿ ಆಸ್ಪತ್ರೆಗಳಿಗೆ ಮೀಸಲಿಡಲಾಗಿತ್ತು ಎಂದು ಹೇಳಿದೆ.
ದೇಶಾದ್ಯಂತದ ಖಾಸಗಿ ಆಸ್ಪತ್ರೆಗಳು ಲಭ್ಯವಿರುವ 1.85 ಕೋಟಿ ಡೋಸ್ ಗಳಲ್ಲಿ 1.29 ಕೋಟಿ ಲಸಿಕೆಯನ್ನು ಪಡೆದಿದ್ದವು, ಆದರೂ ಸರ್ಕಾರದ ಅಂಕಿ-ಅಂಶದ ಪ್ರಕಾರ, ಖಾಸಗಿ ಆಸ್ಪತ್ರೆಗಳು ಉಪಯೋಗಿಸಿದ್ದು ಕೇವಲ 22 ಲಕ್ಷ ಡೋಸ್ ಗಳು ಮಾತ್ರ ಎಂದು ವಿವರಿಸಿದೆ.
ದೇಶಾದ್ಯಂತ ಕೋವಿಡ್ ಲಸಿಕೆ ಅಭಿಯಾನ ಆರಂಭಗೊಂಡ ನಂತರ ಹಲವೆಡೆ ಕೋವಿಡ್ ಲಸಿಕೆ ಪಡೆಯಲು ಜನರು ಹಿಂಜರಿದಿದ್ದರು. ಏತನ್ಮಧ್ಯೆ ಕೋವಿಡ್ ಲಸಿಕೆ ಬಗ್ಗೆ ಊಹಾಪೋಹದ ಸುದ್ದಿ ಹರಿದಾಡುವ ಮೂಲಕ ಜನರು ಮತ್ತಷ್ಟು ಭೀತಿಗೊಳಗಾಗುವಂತಾಗಿತ್ತು. ಬಳಿಕ ಕೋವಿಡ್ ಲಸಿಕೆ ಬಗೆಗಿನ ಅರಿವು ಹಾಗೂ ಜನರು ಅಧಿಕ ಪ್ರಮಾಣದಲ್ಲಿ ಲಸಿಕೆ ಪಡೆಯಲು ಆರಂಭಿಸಿರುವುದಾಗಿ ವರದಿ ತಿಳಿಸಿದೆ.