Advertisement

ಬಿಲ್‌ ಪಾವತಿಸದಕ್ಕೆ ಮೃತದೇಹ ನೀಡದೆ ಸತಾಯಿಸಿದ ಆಸ್ಪತ್ರೆ

06:21 PM Jun 05, 2021 | Team Udayavani |

ಹುಬ್ಬಳ್ಳಿ: ಇಲ್ಲಿನ ಖಾಸಗಿ ಆಸ್ಪತ್ರೆಯೊಂದು ಕೋವಿಡ್‌ನಿಂದ ಮೃತಪಟ್ಟ ಮಹಿಳೆಯ ಮೃತ ದೇಹವನ್ನು ಬಾಕಿ ಬಿಲ್‌ ಪಾವತಿಸದ ಹೊರತು ನೀಡುವುದಿಲ್ಲ ಎಂದು ಹೇಳಿ ಶವ ನೀಡದಿರುವ ಘಟನೆ ಗುರುವಾರ ನಡೆದಿದೆ.

Advertisement

ಶಿರೂರ ಪಾರ್ಕ್‌ ರಸ್ತೆಯಲ್ಲಿರುವ ಆಸ್ಪತ್ರೆಗೆ ಮೇ 27ರಂದು ದಾಖಲಾಗಿದ್ದ ನಸೀಮಾಭಾನು ಜಮಿಲ್‌ ಅಹ್ಮದ ಶೇಖ್‌ ಎನ್ನುವವರು ಗುರುವಾರ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸಾ ವೆಚ್ಚ 2,27,250 ರೂ. ಆಗಿದ್ದು, ರೋಗಿ ಕಡೆಯವರು 80 ಸಾವಿರ ರೂ. ಪಾವತಿ ಮಾಡಿದ್ದಾರೆ.

ಇನ್ನುಳಿದ 1,47,250 ರೂ. ಪಾವತಿ ಮಾಡಿದರೆ ಮಾತ್ರ ಮೃತದೇಹ ನೀಡುವುದಾಗಿ ಆಸ್ಪತ್ರೆಯವರು ಹೇಳಿದ್ದಾರೆ. ಮೃತಳ ಕುಟುಂಬದವರು ವಿದ್ಯಾನಗರದ ಪೊಲೀಸರಿಗೆ ಮಾಹಿತಿ ನೀಡಿದ್ದು, ಕೂಡಲೇ ಮಧ್ಯಪ್ರವೇಶಸಿದ ಪೊಲೀಸರು ಆಸ್ಪತ್ರೆಯವರೊಂದಿಗೆ ಮಾತನಾಡಿ ಮೃತದೇಹ ಕೊಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next