Advertisement

ಖಾಸಗಿ ವೈದ್ಯರ ಮುಷ್ಕರ ಅಂತ್ಯ

06:31 PM Nov 16, 2017 | Karthik A |

ಬೆಂಗಳೂರು: ಕರ್ನಾಟಕ ರಾಜ್ಯ ಸರಕಾರ ಜಾರಿಗೆ ತರಲು ಉದ್ದೇಶಿಸಿರುವ ಖಾಸಗಿ ವೈದ್ಯಕೀಯ ಸಂಸ್ಥೆಗಳಿಗೆ ನಿಯಂತ್ರಣ ಹೇರುವ ವಿಧೇಯಕದಲ್ಲಿರುವ ಕೆಲವೊಂದು ಅಂಶಗಳನ್ನು ವಿರೋಧಿಸಿ ಕಳೆದ ನಾಲ್ಕು ದಿನಗಳಿಂದ ರಾಜ್ಯಾದ್ಯಂತ ಖಾಸಗಿ ಆಸ್ಪತ್ರೆಗಳಲ್ಲಿ ಒ.ಪಿ.ಡಿ. ಬಂದ್‌ ಮಾಡಿ ತೀವ್ರ ಸ್ವರೂಪದ ಮುಷ್ಕರಕ್ಕೆ ಇಳಿದಿದ್ದ ಖಾಸಗಿ ವೈದ್ಯರ ಒಕ್ಕೂಟ ಗುರುವಾರ ಸಾಯಂಕಾಲದ ವೇಳೆಗೆ ಸಭೇ ಸೇರಿ ಸಾರ್ವಜನಿಕರ ಹಿತದೃಷ್ಟಿಯಿಂದ ಮುಷ್ಕರವನ್ನು ವಾಪಾಸು ಪಡೆದುಕೊಳ್ಳುವ ತೀರ್ವಾನವನ್ನು ಕೈಗೊಂಡಿದೆ. ಇದರಿಂದಾಗಿ ಶುಕ್ರವಾರದಿಂದ ರಾಜ್ಯಾದ್ಯಂತ ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ಹೊರರೋಗಿ ವಿಭಾಗದ ಸೇವೆಗಳು ಪುನರಾರಂಭಗೊಳ್ಳುವ ನಿರೀಕ್ಷೆಯಿದೆ.

Advertisement

ಬೆಂಗಳೂರಿನಲ್ಲಿ ನಡೆದ ಸಭೆಯ ಬಳಿಕ ಮಾತನಾಡಿದ ಫ‌ನಾ ಅಧ್ಯಕ್ಷ ಜಯಣ್ಣ ಮಾತನಾಡಿ ಸರಕಾರದಿಂದ ನಮ್ಮ ಬೇಡಿಕೆಗಳಿಗೆ ಸಂಬಂಧಿಸಿದಂತೆ ಕೆಲವೊಂದು ಪೂರಕ ಪ್ರತಿಕ್ರಿಯೆಗಳು ಕಂಡುಬಂದ ಹಿನ್ನಲೆಯಲ್ಲಿ ಮತ್ತು ರಾಜ್ಯವ್ಯಾಪಿ ರೋಗಿಗಳಿಗೆ ಆಗುತ್ತಿರುವ ತೊಂದರೆಗಳನ್ನು ಪರಿಗಣಸಿ ಮುಷ್ಕರವನ್ನು ಹಿಂಪಡೆಯುವ ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿಸಿದರು.

ಹೈಕೋರ್ಟ್‌ ಗುರುವಾರದಂದು ಮುಷ್ಕರ ನಿರತ ಖಾಸಗಿ ವೈದ್ಯ ಸಮೂಹವನ್ನು ಹಾಗೂ ಸರಕಾರವನ್ನು ತರಾಟೆಗೆ ತೆಗದುಕೊಂಡಿತ್ತು ಮಾತ್ರವಲ್ಲದೇ ತಕ್ಷಣವೇ ವೈದ್ಯರು ಮುಷ್ಕರ ಕೈಬಿಟ್ಟು ರೋಗಿಗಳ ಸೇವೆಗೆ ಹಾಜರಾಗುವಂತೆ ಖಡಕ್‌ ಸೂಚನೆಯನ್ನು ನೀಡಿತ್ತು.
 

Advertisement

Udayavani is now on Telegram. Click here to join our channel and stay updated with the latest news.

Next