Advertisement

ಕೋವಿಡ್ 19 ಹೋರಾಟಕ್ಕೆ ಖಾಸಗಿ ವೈದ್ಯರು ಸಹಕರಿಸಿ

05:09 PM Mar 27, 2020 | Suhan S |

ಬಳ್ಳಾರಿ: ಮಾರಕ ಕೋವಿಡ್ 19 ವೈರಸ್‌ ಭೀತಿಯಿಂದ ಕೇವಲ ತುರ್ತು ಚಿಕಿತ್ಸೆ ನೀಡುವುದಾಗಿ ನೆಪಹೇಳಿ ಖಾಸಗಿ ಆಸ್ಪತ್ರೆಗಳನ್ನು ಬಂದ್‌ ಮಾಡಿರುವ ಭಾರತೀಯ ವೈದ್ಯಕೀಯ ಸಂಘದ ನಿರ್ಣಯಕ್ಕೆ ಆರೋಗ್ಯ ಸಚಿವ ಬಿ. ಶ್ರೀರಾಮುಲು ಅಸಮ್ಮತಿ ವ್ಯಕ್ತಪಡಿಸಿದರು.

Advertisement

ನಗರದ ಜಿಲ್ಲಾಧಿ ಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಕೋವಿಡ್‌ -19ಗೆ ಸಂಬಂಧಿ ಸಿದಂತೆ ನಡೆದ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೋವಿಡ್ 19 ವೈರಸ್‌ ಭೀತಿ ದಿನೇದಿನೆ ಹೆಚ್ಚುತ್ತಿದೆ. ಇಂಥ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಗಳು ಕೇವಲ ತುರ್ತು ಚಿಕಿತ್ಸೆ ನೀಡುವ ನೆಪದಲ್ಲಿ ಖಾಸಗಿ ಆಸ್ಪತ್ರೆಗಳನ್ನು ಬಂದ್‌ ಮಾಡಿ ಐಎಂಎ ನಿರ್ಣಯ ಕೈಗೊಂಡಿದೆ.

ಇದು ಸರಿಯಲ್ಲ. ಇಂತಹ ಸಂದರ್ಭದಲ್ಲಿ ಎಲ್ಲ ಖಾಸಗಿ ಆಸ್ಪತ್ರೆಗಳು ಕಡ್ಡಾಯವಾಗಿ ಒಪನ್‌ ಮಾಡಿ ಜನರಿಗೆ ಚಿಕಿತ್ಸೆ ಕೊಡುವ ಕೆಲಸ ಮಾಡಬೇಕು ಎಂದು ಸೂಚನೆ ನೀಡಿದರು. ಇದಕ್ಕೆ ಐಎಂಎ ಸಂಘವು ಸಹ ಸಮ್ಮತಿ ಸೂಚಿಸಿತು.

ಖಾಸಗಿ ವೈದ್ಯರ-ಆಸ್ಪತ್ರೆಗಳ ಸಹಕಾರ ಕೋರಿದ ಸಚಿವರು: ಜಿಲ್ಲೆಯಲ್ಲಿರುವ ಎಲ್ಲ ಖಾಸಗಿ ವೈದ್ಯರುಗಳು ಹಾಗೂ ಆಸ್ಪತ್ರೆಗಳು ಕೋವಿಡ್‌-19 ವಿರುದ್ಧ ಸರ್ಕಾರ ನಡೆಸುತ್ತಿರುವ ಈ ಸವಾಲಿನ ಹೋರಾಟಕ್ಕೆ ಕೈಜೋಡಿಸಬೇಕು ಎಂದು ಮನವಿ ಮಾಡಿದ ಸಚಿವರು ಕೋವಿಡ್‌-19 ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಯೊಂದು ಮೀಸಲಿರಿಸುವ ಮತ್ತು ಖಾಸಗಿ ವೈದ್ಯರು ಈ ಹೋರಾಟದಲ್ಲಿ ಸಹಕರಿಸುವಂತೆ ಕೋರಿದರು. ಇದಕ್ಕೆ ಐಎಂಎ ಜಿಲ್ಲಾಧ್ಯಕ್ಷ ಡಾ| ಅರುಣ ಹಾಗೂ ಡಾ| ಬಿ.ಕೆ.ಎಸ್‌.ಸುಂದರ್‌ ಅವರು ಈ ಹೋರಾಟದಲ್ಲಿ ನಮ್ಮ ಸಹಕಾರ ಸದಾ ಇರುತ್ತದೆ ಎಂದು ಸಮ್ಮತಿ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿರುವ ಎಲ್ಲ ಆಸ್ಪತ್ರೆಗಳಲ್ಲಿ ವೆಂಟಿಲೆಟರ್‌, ಎಂಆರ್‌ಐ ಸ್ಕ್ಯಾನಿಂಗ್‌, ಸಿಟಿ ಸ್ಕ್ಯಾನ್‌,ಅಲ್ಟ್ರಾಸೌಂಡ್‌ ಸೇರಿದಂತೆ ಇನ್ನಿತರ ವೈದ್ಯಕೀಯ ಪರಿಕರಗಳು ಕೆಟ್ಟುನಿಂತಿದ್ದರೇ ಜಿಲ್ಲಾಡಳಿತದ ಬಳಿ ಅಗತ್ಯ ಅನುದಾನ ಲಭ್ಯವಿದ್ದು ಕೂಡಲೇ ಅವುಗಳನ್ನು ದುರಸ್ತಿಪಡಿಸಬೇಕು ಎಂದು ಸೂಚಿಸಿದರು.

Advertisement

ಜಿಂದಾಲ್‌ನಲ್ಲಿ ಶೇ. 50ರಷ್ಟು ಕಾರ್ಮಿಕರು ಕಡಿತ: ಜಿಲ್ಲೆಯ ತೋರಣಗಲ್ಲಿನಲ್ಲಿರುವ ಜಿಂದಾಲ್‌ ಕೈಗಾರಿಕೆಯಲ್ಲಿ ಒಟ್ಟು 35,396 ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದು, ಈಚೆಗೆ ಸಭೆ ಕರೆದು ಸೂಚನೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ 16850 ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದು, ಶೇ. 50ರಷ್ಟು ಕಾರ್ಮಿಕರನ್ನು ಕಡಿತಗೊಳಿಸಲಾಗಿದೆ. ಕೇಂದ್ರ ಸರ್ಕಾರದ ನಿರ್ದೇಶನ ಮೇರೆಗೆ ಕೆಲವೊಂದು ಕೈಗಾರಿಕೆಗಳನ್ನು ನಿಲ್ಲಿಸಲಾಗದು ಎಂದು ಡಿಸಿ ಎಸ್‌.ಎಸ್‌.ನಕುಲ್‌ ಸ್ಪಷ್ಟಪಡಿಸಿದರು.

ಬಳ್ಳಾರಿ ಜಿಲ್ಲೆಯಲ್ಲಿ ಕೋವಿಡ್‌ -19ಗೆ ಸಂಬಂಧಿ ಸಿದಂತೆ ಇದುವರೆಗೆ ಜಿಲ್ಲಾಡಳಿತದಿಂದ ಕೈಗೊಳ್ಳಲಾದ ಕ್ರಮಗಳು, ಇದುವರೆಗೆ ಎಷ್ಟು ಜನರಿಗೆ ಮಾಡಲಾಗಿರುವ ತಪಾಸಣೆ, ಇದುವರೆಗೆ ಪಾಸಿಟಿವ್‌ ಪ್ರಕರಣ ಬರದಿರುವುದು. 28 ರ್ಯಾಪಿಡ್‌ ರೆಸ್ಪಾನ್ಸ್‌ ತಂಡಗಳ ರಚನೆ, 17 ವಿವಿಧ ಸಮಿತಿಗಳ ಕಾರ್ಯನಿರ್ವಹಣೆ ಸೇರಿದಂತೆ ಕೈಗೊಳ್ಳಲಾಗಿರುವ ಅಗತ್ಯ ಕ್ರಮಗಳನ್ನು ಸಭೆಗೆ ವಿವರಿಸಿದರು. ಸಭೆಗೆ ಆಗಮಿಸಿದ್ದ ಅಧಿಕಾರಿಗಳು ಒಬ್ಬೊಬ್ಬರ ಮಧ್ಯೆ ಎರಡು ಖುರ್ಚಿಗಳ ಅಂತದಲ್ಲಿ ಕುಳಿತುಕೊಳ್ಳುವುದರ ಮೂಲಕ ಸಾಮಾಜಿಕ ಅಂತರ ಪಾಲಿಸಿದ್ದು ವಿಶೇಷವಾಗಿತ್ತು.

ಈ ಸಂದರ್ಭದಲ್ಲಿ ಶಾಸಕ ಜಿ. ಸೋಮಶೇಖರರೆಡ್ಡಿ, ಕೆ.ಸಿ. ಕೊಂಡಯ್ಯ, ಅಲ್ಲಂವೀರಭದ್ರಪ್ಪ, ನಾಗೇಂದ್ರ, ಸೋಮಲಿಂಗಪ್ಪ, ಎಸ್ಪಿ ಸಿ.ಕೆ. ಬಾಬಾ ಸೇರಿದಂತೆ ಜಿಲ್ಲಾಮಟ್ಟದ ಅಧಿ ಕಾರಿಗಳು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next