Advertisement

ಖಾಸಗಿ ವೈದ್ಯರ ಪ್ರತಿಭಟನೆ; ರೋಗಿಗಳ ಪರದಾಟ

05:29 PM Jul 29, 2018 | Team Udayavani |

ದಾವಣಗೆರೆ: ಕೇಂದ್ರ ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿರುವ ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ)ಮಸೂದೆ ವಿರೋಧಿಸಿ ಭಾರತೀಯ ವೈದ್ಯಕೀಯ ಸಂಘಟನೆ ಶನಿವಾರ ಕರೆ ನೀಡಿದ್ದ ಖಾಸಗಿ ಆಸ್ಪತ್ರೆ, ಕ್ಲಿನಿಕ್‌, ನರ್ಸಿಂಗ್‌ ಹೋಂಗಳ ಹೊರ ರೋಗಿಗಳ ಬಂದ್‌ ಹಿನ್ನೆಲೆಯಲ್ಲಿ ರೋಗಿಗಳು ಸಾಕಷ್ಟು ಪರದಾಡುವಂತಾಯಿತು.

Advertisement

ಮೆಡಿಕಲ್‌ ಹಬ್‌… ದಾವಣಗೆರೆಯಲ್ಲಿ 60 ನರ್ಸಿಂಗ್‌ ಹೋಂ, 85 ಖಾಸಗಿ ಆಸ್ಪತ್ರೆಯಲ್ಲಿ ಹೊರ ರೋಗಿಗಳ ವಿಭಾಗ ಸಂಪೂರ್ಣವಾಗಿ ಸ್ಥಗಿತಗೊಳಿಸಿದ್ದರಿಂದ ಅನೇಕರು ತೊಂದರೆ ಅನುಭವಿಸಿದರು. 

ಖಾಸಗಿ ಆಸ್ಪತ್ರೆ, ಕ್ಲಿನಿಕ್‌, ನರ್ಸಿಂಗ್‌ ಹೋಂಗಳ ಬಂದ್‌ ಬಗ್ಗೆ ಮಾಹಿತಿ ಇಲ್ಲದೆ ಬಂದವರು ಆಸ್ಪತ್ರೆ, ಕ್ಲಿನಿಕ್‌, ನರ್ಸಿಂಗ್‌ ಹೋಂಗಳ ಸಿಬ್ಬಂದಿ ವಿಚಾರಿಸಿ, ಬೇಸರದಿಂದ ಹಿಂತಿರುಗುವುದು ಸಾಮಾನ್ಯವಾಗಿತ್ತು.

ಕೆಲವಾರು ಖಾಸಗಿ ಆಸ್ಪತ್ರೆ, ಕ್ಲಿನಿಕ್‌, ನರ್ಸಿಂಗ್‌ ಹೋಂ ಹೊರತುಪಡಿಸಿ ಬೇರೆ ಕಡೆ ಬಂದ್‌ ಬಗ್ಗೆ ಯಾವುದೇ ಮಾಹಿತಿ
ಇರಲಿಲ್ಲ. ಸಂಪೂರ್ಣ, ಅರ್ಧ ಬಾಗಿಲು ಹಾಕಿದ್ದರಿಂದ ಖಾಸಗಿ ಆಸ್ಪತ್ರೆ, ಕ್ಲಿನಿಕ್‌, ನರ್ಸಿಂಗ್‌ ಹೋಂಗಳಿಗೆ ಬಂದವರು
ಏನೂ ಗೊತ್ತಾಗದೆ ಪರಿತಪಿಸಿದರು. ಬಾಣಂತಿ, ಗರ್ಭಿಣಿಯರು,

ಇತರೆ ಆರೋಗ್ಯ ಸಮಸ್ಯೆಯಿಂದ ನರಳುತ್ತಿದ್ದವರು ಸಂಜೆ 6 ಗಂಟೆಯವರೆಗೆ ಡಾಕ್ಟರ್‌ ಸಿಗುವುದಿಲ್ಲ ಎಂಬ ವಿಷಯ
ತಿಳಿದು, ವಾಪಸ್ಸಾದರು. ಆದರೆ, ದೂರದ ಊರುಗಳಿಂದ ಬಂದವರು ಅತ್ತ ಡಾಕ್ಟರ್‌ ಕಾಣದೆ, ಇನ್ನೊಂದು ಕಡೆ ತಮ್ಮ
ಊರಿಗಳಿಗೂ ಹೋಗಲಾಗದ ಸಂದಿಗ್ಧತೆ ಅನುಭವಿಸಿದರು.
 
ಖಾಸಗಿ ಆಸ್ಪತ್ರೆ, ಕ್ಲಿನಿಕ್‌, ನರ್ಸಿಂಗ್‌ ಹೋಂಗಳ ಬಂದ್‌ ಕಾರಣಕ್ಕೆ ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ ಸಾಮಾನ್ಯ
ದಿನಕ್ಕಿಂತಲೂ ಹೆಚ್ಚಿನ ಜನಸಂದಣಿ ಕಂಡು ಬಂದಿತು. ಎಲ್ಲಾ ವೈದ್ಯರು ಕರ್ತವ್ಯಕ್ಕೆ ಹಾಜರಾಗಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ
ಒಳ ಮತ್ತು ಹೊರ ರೋಗಿಗಳು ಇದ್ದ ಕಾರಣಕ್ಕೆ ಜನರು ಕಾಯುವಂತಾಯಿತು. 

Advertisement

ಅತಿ ಹೆಚ್ಚಿನ ಖಾಸಗಿ ಆಸ್ಪತ್ರೆ, ಕ್ಲಿನಿಕ್‌, ನರ್ಸಿಂಗ್‌ ಹೋಂಗಳು ಇರುವ ಪಿ.ಜೆ. ಬಡಾವಣೆ, ಎಂಸಿಸಿ ಎ, ಎಂಸಿಸಿ ಬಿ ಬ್ಲಾಕ್‌ ಇತರೆಡೆ ಜನರು ಕಾಯುತ್ತಿರುವುದು ಕಂಡು ಬಂದಿತು. ಬಾಪೂಜಿ, ಎಸ್‌.ಎಸ್‌. ಆಸ್ಪತ್ರೆಯಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳು ಕರ್ತವ್ಯಕ್ಕೆ ಹಾಜರಾಗಿದ್ದರು.
 
ಕೇಂದ್ರ ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿರುವ ರಾಷ್ಟ್ರೀಯ ವೈದ್ಯಕೀಯ ಆಯೋಗ(ಎನ್‌ಎಂಸಿ) ಮಸೂದೆ
ವಿರೋಧಿಸಿ ಭಾರತೀಯ ವೈದ್ಯಕೀಯ ಸಂಘಟನೆ ಪದಾಧಿಕಾರಿಗಳು ಜಿಲ್ಲಾಡಳಿತದ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಸುದ್ದಿಗೋಷ್ಠಿ ನಡೆಸಿ, ರಾಷ್ಟ್ರೀಯ  ವೈದ್ಯಕೀಯ ಆಯೋಗ(ಎನ್‌ಎಂಸಿ) ರಚನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next