Advertisement
ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ದರ ಏರಿಸಿದ ಹಿನ್ನೆಲೆಯಲ್ಲಿ ಖಾಸಗಿ ಬಸ್ ಮಾಲೀಕರು ಸಹ ಬಸ್‌ಗಳ ಸಂಚಾರಕ್ಕೆ ಬಳಸುವ ತೈಲ, ಆಯಿಲ್, ಗ್ರೀಸ್ ಜೊತೆಗೆ ಸರ್ಕಾರಕ್ಕೆ ಕಟ್ಟುವ ತೆರಿಗೆ, ಪ್ರಯಾಣಿಕರ ಸುರಕ್ಷತೆಗೆ ಪಾವತಿಸುವ ವಿಮೆ ಮೊತ್ತ ಹೆಚ್ಚಾಗಿದೆ ಎಂದು ಹೇಳಿ ಪ್ರಯಾಣ ದರವನ್ನು ಶೇ.5 ರಿಂದ 10 ರಷ್ಟು ಏರಿಸುವ ಮೂಲಕ ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕಿದೆ.
Related Articles
Advertisement
ಕೆಲವು ಬಸ್‌ಗಳಲ್ಲಿ ದರ ಏರಿಕೆ ಇಲ್ಲ: ಕೆಲವು ಗ್ರಾಮೀಣ ಪ್ರದೇಶಗಳಿಗೆ ನಿತ್ಯ ಸಂಚರಿಸುವ ಖಾಸಗಿ ಬಸ್‌ಗಳ ಮಾಲೀಕರು ಇನ್ನೂ ಪ್ರಯಾಣ ದರ ಏರಿಕೆ ಮಾಡದೇ ಮೊದಲಿನಂತೆ ಟಿಕೆಟ್ ದರ ಮುಂದುವರಿಸಿದ್ದಾರೆ. ಟಿಕೆಟ್ ದರ ಏರಿಸಿದರೆ ಪ್ರಯಾಣಿಕರು ಲಗೇಟ್ ಆಟೋಗಳಲ್ಲಿ ಸಂಚರಿಸುತ್ತಾರೆಂಬ ಆತಂಕದಿಂದ ಕೆಲವು ತಾಲೂಕು ಕೇಂದ್ರಗಳಿಂದ ಗ್ರಾಮೀಣ ಭಾಗಕ್ಕೆ ತೆರಳುವ ಖಾಸಗಿ ಬಸ್‌ಗಳು ಟಿಕೆಟ್ ದರ ಏರಿಕೆಗೆ ಹಿಂದೆಮುಂದೆ ನೋಡುತ್ತಿವೆ.ಚಿಕ್ಕಬಳ್ಳಾಪುರದಿಂದ ಗುಡಿಬಂಡೆಗೆ ಸಂಚರಿಸುವ ಖಾಸಗಿ ಬಸ್‌ನಲ್ಲಿ ಪ್ರಯಾಣ ದರ ಯಥಾಸ್ಥಿತಿ ಇದೆ. ಬೆಂಗಳೂರು ಸೇರಿದಂತೆ ದೂರದ ಕಡೆ ತೆರಳುವ ಖಾಸಗಿ ಬಸ್‌ಗಳು ಮಾತ್ರ ದರ ಏರಿಕೆ ಮಾಡಿವೆ. ನಾವು ಇನ್ನೂ ಏರಿಕೆ ಮಾಡಿಲ್ಲ. ನಮ್ಮ ಮಾಲೀಕರು ದರ ಏರಿಕೆ ಬಗ್ಗೆ ನಮಗೆ ಇನ್ನೂ ಯಾವುದೇ ಸೂಚನೆ ಕೊಟ್ಟಿಲ್ಲ ಎಂದು ಎಸ್‌ಎಲ್‌ವಿ ಖಾಸಗಿ ಬಸ್ ನಿರ್ವಾಹಕ ಹನುಮಂತು ಉದಯವಾಣಿಗೆ ತಿಳಿಸಿದರು. ದರ ಏರಿಕೆಗೆ ಖಾಸಗಿ ಬಸ್ ಮಾಲೀಕರ ಸಮರ್ಥನೆ ಏನು?: ಈಗಾಗಲೇ ರಾಜ್ಯ ರಸ್ತೆ ಸಾರಿಗೆ ನಿಗಮ ಬಸ್ ಪ್ರಯಾಣ ದರವನ್ನು ಶೇ.12 ರಷ್ಟು ಏರಿಕೆ ಮಾಡಿದೆ. ಹಲವು ಬಾರಿ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ ಮಾಡಿದರೂ ನಾವು ಪ್ರಯಾಣ ದರ ಏರಿಕೆ ಮಾಡಿಲ್ಲ. ಸದ್ಯ ಪೆಟ್ರೋಲ್ ಡೀಸೆಲ್ ಬೆಲೆ ಹೆಚ್ಚಳ ಜೊತೆಗೆ ವಾರ್ಷಿಕವಾಗಿ ಪಾವತಿಸುವ ತೆರಿಗೆ, ವಿಮೆ ಹೆಚ್ಚಳವಾಗಿದೆ. ಅದೇ ರೀತಿ ಬಸ್ ನಿರ್ವಹಣೆಗೆ ಬಳಸುವ ಟೈರ್, ಆಯಿಲ್, ಗ್ರೀಸ್, ವಾಹನಗಳ ಬಿಡಿ ಭಾಗಗಳ ದರ ಹೆಚ್ಚಾಗಿದೆ. ಆದ್ದರಿಂದ ಪ್ರಯಾಣ ದರ ಏರಿಕೆ ಅನಿವಾರ್ಯ ಎಂದು ಚಿಂತಾಮಣಿ ಖಾಸಗಿ ಬಸ್ ಮಾಲೀಕರ ಸಂಘ ಪ್ರಯಾಣ ದರ ಏರಿಕೆಯನ್ನು ಸಮರ್ಥಿಸಿಕೊಂಡಿದೆ. ಆರ್‌ಟಿಒ ಅಧಿಕಾರಿ ಹೇಳಿದ್ದೇನು?: ಕೆಎಸ್‌ಆರ್‌ಟಿಸಿ ಪ್ರಯಾಣ ದರ ಏರಿಕೆ ಬೆನ್ನಲ್ಲೇ ಜಿಲ್ಲೆಯಲ್ಲಿ ಖಾಸಗಿ ಬಸ್ ಪ್ರಯಾಣ ದರ ಏರಿಕೆ ಕುರಿತು ಜಿಲ್ಲಾ ಪ್ರಾದೇಶಿಕ ಸಾರಿಗೆ ಇಲಾಖೆ ವಾಹನಗಳ ನಿರೀಕ್ಷಕ ಕಮಲ್ ಬಾಬು ಪ್ರತಿಕ್ರಿಯೆ ನೀಡಿ, ಸಹಜವಾಗಿ ಕೆಎಸ್‌ಆರ್‌ಟಿಸಿ ಬಸ್ ಪ್ರಯಾಣ ದರ ಏರಿಕೆಯಾದಾಗ ಖಾಸಗಿ ಬಸ್‌ಗಳು ದರ ಏರಿಕೆ ಮಾಡುವುದು ಸಾಮಾನ್ಯ. ಅಲ್ಪ ಪ್ರಮಾಣದಲ್ಲಿ ಏರಿಕೆ ಮಾಡಲಾಗಿದೆ. ಜಿಲ್ಲೆಯಲ್ಲಿ 200 ಕ್ಕೂ ಹೆಚ್ಚು ಖಾಸಗಿ ಬಸ್‌ಗಳು ನಿತ್ಯ ಸಂಚರಿಸುತ್ತವೆ. ಆ ಪೈಕಿ ಚಿಂತಾಮಣಿ ತಾಲೂಕಿನಲ್ಲಿ ಹೆಚ್ಚಿನ ಖಾಸಗಿ ಬಸ್ ಸಂಚಾರ ಇದೆ ಎಂದರು. ಪ್ರಯಾಣ ದರ ಏರಿಸಲು ಯಾರ ಅನುಮತಿ ಬೇಕಿಲ್ಲ. ಆದರೆ ಕೆಎಸ್‌ಆರ್‌ಟಿಸಿ ಬಸ್ ಪ್ರಯಾಣ ದರ ಏರಿಸಿದಾಗ ಸಹಜವಾಗಿ ಖಾಸಗಿ ಬಸ್‌ಗಳು ದರ ಹೆಚ್ಚಿಸುತ್ತವೆ. ಸರ್ಕಾರದಷ್ಟು ದರ ಏರಿಕೆ ಮಾಡಲ್ಲ ಎಂದರು. ಜಿಲ್ಲೆಯಲ್ಲಿ ನಿತ್ಯ 200 ಕ್ಕೂ ಹೆಚ್ಚು ಖಾಸಗಿ ಬಸ್ ಸಂಚಾರ: ಜಿಲ್ಲೆಯಲ್ಲಿ ಪ್ರತಿ ನಿತ್ಯ ಬರೋಬ್ಬರಿ 570 ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ಗಳು ಸಂಚರಿಸಿದರೆ, ಖಾಸಗಿ ವಲಯದ ಬಸ್‌ಗಳ ಸಂಖ್ಯೆ 200 ರ ಗಡಿ ದಾಟಿದೆ. ಆ ಪೈಕಿ ಜಿಲ್ಲೆಯ ವಾಣಿಜ್ಯ ನಗರಿ ಚಿಂತಾಮಣಿ ತಾಲೂಕು ಒಂದರಲ್ಲಿಯೇ 100 ಕ್ಕೂ ಹೆಚ್ಚು ಖಾಸಗಿ ಬಸ್‌ಗಳು ನಿತ್ಯ ಸಂಚರಿಸಿದರೆ, ಉಳಿದಂತೆ ಇಡೀ ಜಿಲ್ಲೆಯಲ್ಲಿ 200 ರ ಮೇಲೆ ಸಂಚರಿಸುತ್ತವೆ. ಗ್ರಾಮೀಣ ಭಾಗದಲ್ಲಿ ಕಡಿಮೆ ಪ್ರಮಾಣದಲ್ಲಿ ಖಾಸಗಿ ಬಸ್ ಸಂಚಾರ ಇದ್ದು, ಬೆಂಗಳೂರು, ತಿರುಪತಿ ಹೀಗೆ ಜಿಲ್ಲಾ ಕೇಂದ್ರದಿಂದ ತಾಲೂಕು ಕೇಂದ್ರಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಖಾಸಗಿ ಬಸ್ ಸಂಚಾರ ಇದೆ. ಕೆಎಸ್‌ಆರ್‌ಟಿಸಿ ಬಸ್ ಪ್ರಯಾಣ ದರ ಏರಿಕೆ ಆಗುತ್ತಿದ್ದಂತೆ ಖಾಸಗಿ ಬಸ್‌ಗಳು ಕೆಲವು ಮಾರ್ಗಗಳಲ್ಲಿ 5 ರಿಂದ 10 ರೂ. ವರೆಗೂ ದರ ಏರಿಕೆ ಮಾಡಿವೆ. ಕೆಎಸ್‌ಆರ್‌ಟಿಸಿ ಬಸ್‌ಗಿಂತ ಕಡಿಮೆ ದರ ಇರುವುದರಿಂದ ಖಾಸಗಿ ಬಸ್‌ನಲ್ಲೇ ಸಂಚರಿಸುತ್ತೇನೆ.
-ಆನಂದರೆಡ್ಡಿ, ಪ್ರಯಾಣಿಕ, ಚಿಕ್ಕಬಳ್ಳಾಪುರ * ಕಾಗತಿ ನಾಗರಾಜಪ್ಪ