Advertisement

ಖಾಸಗಿತನ ಮೂಲಭೂತ ಹಕ್ಕಲ್ಲ: ಕೇಂದ್ರದ ವಾದ

06:40 AM Jul 28, 2017 | Team Udayavani |

ಹೊಸದಿಲ್ಲಿ: ಖಾಸಗಿತನಕ್ಕೆ ಮೂಲಭೂತ ಹಕ್ಕಿನ ಸ್ಥಾನಮಾನ ನೀಡುವುದು ಅಸಾಧ್ಯ ಎಂದು ಕೇಂದ್ರ ಸರಕಾರ ಸುಪ್ರೀಂಕೋರ್ಟ್‌ಗೆ ಹೇಳಿದೆ. ಖಾಸಗಿ ಹಕ್ಕಿನ ಕುರಿತಂತೆ ಸುಪ್ರೀಂಕೋರ್ಟ್‌ನ ಒಂಬತ್ತು ನ್ಯಾಯಮೂರ್ತಿಗಳ ಸಂವಿಧಾನ ಪೀಠದ ಮುಂದೆ ಅಟಾರ್ನಿ ಜನರಲ್‌ ಕೆ.ಕೆ. ವೇಣುಗೋಪಾಲ್‌ ಅವರು ಈ ಅರಿಕೆ ಮಾಡಿಕೊಂಡಿದ್ದಾರೆ. 

Advertisement

ಖಾಸಗಿ ಎಂಬುದು ವಿಶಾಲಾರ್ಥದಲ್ಲಿದ್ದು, ಇದಕ್ಕೆ ಮೂಲಭೂತ ಹಕ್ಕು ಸ್ಥಾನ ನೀಡುವುದು ಸಾಧ್ಯವಿಲ್ಲ ಎಂದರು. ಮುಖ್ಯ ನ್ಯಾ| ಜೆ.ಎಸ್‌. ಖೇಹರ್‌ ಅವರ ನೇತೃತ್ವದ ಪೀಠದ ಮುಂದೆ ವಾದ ಮಂಡಿಸಿದ ಅವರು, ಖಾಸಗಿತನ ಮೂಲಭೂತ ಹಕ್ಕು ಎಂದು ಭಾವಿಸಿಕೊಂಡರೂ, ಇದಕ್ಕೆ ಆ ಸ್ಥಾನ ನೀಡಲು ಆಗುವುದಿಲ್ಲ. ಇದಕ್ಕೆ ಬೇರೆ ಬೇರೆ ರೀತಿಯ ಅರ್ಥಗಳಿವೆ. ಪ್ರತಿಯೊಂದು ವಿಚಾರವನ್ನೂ ಮೂಲಭೂತ ಹಕ್ಕನ್ನಾಗಿ ಪರಿಗಣಿಸಲು ಆಗಲ್ಲ ಎಂದರು. ಅಲ್ಲದೆ ಮಾಹಿತಿಯುಕ್ತ ಖಾಸಗಿಯನ್ನು ಹೇಗೆ ಖಾಸಗಿ ಹಕ್ಕಿನೊಳಗೆ ಸೇರಿಸಲಾಗುತ್ತದೆ ಎಂದು ಪ್ರಶ್ನಿಸಿದ ಅವರು, ಹೀಗಾಗಿಯೇ ಮೂಲಭೂತ ಹಕ್ಕಿನ ಸ್ಥಾನ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next