Advertisement

ವಾಟ್ಸ್‌ಆ್ಯಪ್‌ನಿಂದ ಖಾಸಗಿತನ ಉಲ್ಲಂಘನೆ: ತನಿಖೆಗೆ ಆದೇಶ

09:20 PM May 10, 2023 | Team Udayavani |

ನವದೆಹಲಿ: ಸ್ಮಾರ್ಟ್‌ಫೋನ್‌ ಬಳಸದಿದ್ದ ಸಂದರ್ಭದಲ್ಲಿಯೂ ವಾಟ್ಸ್‌ಆ್ಯಪ್‌ ಅದರ ಮೈಕ್ರೊಫೋನ್‌ ಸೌಲಭ್ಯವನ್ನು ಬಳಸುತ್ತದೆ ಎಂಬ ಆರೋಪದ ಬಗ್ಗೆ ಕೇಂದ್ರ ಸರ್ಕಾರ ತನಿಖೆ ನಡೆಸಲಿದೆ ಎಂದು ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ತಿಳಿಸಿದ್ದಾರೆ.

Advertisement

“ನಾನು ನಿದ್ರಿಸುತ್ತಿದ್ದ ಸಂದರ್ಭದಲ್ಲಿ ಕೂಡ ವಾಟ್ಸ್‌ಆ್ಯಪ್‌ ನನ್ನ ಮೈಕ್ರೊಫೋನ್‌ ಅನ್ನು ಬಳಕೆ ಮಾಡುತ್ತಿದೆ,’ ಎಂದು ಎಂಜಿನಿಯರಿಂಗ್‌ ವಿಭಾಗದ ನಿರ್ದೇಶಕರಾದ ಫೋದ್‌ ದಾಬಿರಿ ಎಂಬವರು ಆರೋಪಿಸಿದ್ದರು. ಈ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ರಾಜೀವ್‌ ಚಂದ್ರಶೇಖರ್‌, “ಇದು ನಿಜವಾಗಿದ್ದರೆ ಈ ಉಲ್ಲಂಘನೆಯನ್ನು ಒಪ್ಪಿಕೊಳ್ಳಲು ಆಗದು. ನೂತನ ಡಿಜಿಟಲ್‌ ಖಾಸಗಿ ಮಾಹಿತಿ ರಕ್ಷಣಾ ಕಾಯಿದೆಯಡಿ ಇದು ಖಾಸಗಿತನದ ಉಲ್ಲಂಘನೆಯಾಗಿದೆ. ಈ ಕುರಿತು ತನಿಖೆ ನಡೆಸಲಾಗುವುದು,’ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next