Advertisement

ರಾಜ್ಯದಲ್ಲಿ ಮೈತ್ರಿ ಇಲ್ಲ: ಪೃಥ್ವೀರಾಜ್‌ ಚೌಹಾಣ್‌

07:20 AM Apr 29, 2018 | Team Udayavani |

ಬೆಂಗಳೂರು: ಕಾಂಗ್ರೆಸ್‌ ಪಕ್ಷವು ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಗೆ ಸಮಾನ ಮನಸ್ಕ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲಿದೆ. ಆದರೆ ಕರ್ನಾಟಕ ವಿಧಾನಸಭೆ  ಚುನಾವಣೆಯಲ್ಲಿ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಪೃಥ್ವೀರಾಜ್‌ ಚೌಹಾಣ್‌ ಹೇಳಿದರು.

Advertisement

ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಜೆಡಿಎಸ್‌, ಬಿಜೆಪಿ ಒಳಒಪ್ಪಂದ ಮಾಡಿಕೊಂಡಿವೆ. ಕಾಂಗ್ರೆಸ್‌ ಯಾರ ಜತೆಯೂ  ಹೊಂದಾಣಿಕೆ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.

ಬಿಜೆಪಿ ಜೈಲಿಗೆ ಹೋಗಿ ಬಂದಿರುವ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಿದೆ.  ರಾಜ್ಯದ ಜನತೆ ಅವರನ್ನು ಬೆಂಬಲಿಸುವುದಿಲ್ಲ. ಸಿದ್ದರಾಮಯ್ಯ ಪ್ರಭಾವೀ ನಾಯಕರಾಗಿದ್ದಾರೆ. ಬಿಜೆಪಿಗೆ ರಾಜ್ಯದಲ್ಲಿ ಅಂತಹ ಯಾವುದೇ ಪ್ರಭಾವೀ ನಾಯಕರು ಇಲ್ಲದ ಕಾರಣ ಮೋದಿ, ಅಮಿತ್‌ ಶಾ, ಆದಿತ್ಯನಾಥ್‌ರಂತಹ ದಿಲ್ಲಿ ನಾಯಕರನ್ನು ಕರೆದುಕೊಂಡು ಬರುತ್ತಿದ್ದಾರೆ ಎಂದು ಟೀಕಿಸಿದರು.

ಸಚಿವ ಗೋಯಲ್‌ ಅವರಿಂದ ಅಕ್ರಮ: ಕೇಂದ್ರ ಸಚಿವ ಪಿಯೂಷ್‌ ಗೋಯಲ್‌  ಹಣಕಾಸು ಅವ್ಯವಹಾರದ   ಆರೋಪ ಎದುರಿಸುತ್ತಿದ್ದಾರೆ. ಪಿಯೂಷ್‌ ಗೋಯಲ್‌ ಸಚಿವರಾಗುವ ಮೊದಲು ಫ್ಲಾಸ್‌ನೆಟ್‌ ಇನ್‌ಫೋ ಸಲ್ಯೂಷನ್ಸ್‌ ಕಂಪೆನಿಯಲ್ಲಿ ನಿರ್ದೇಶಕರಾಗಿದ್ದರು. ಅವರ ಪತ್ನಿ ಸೀಮಾ ಕೂಡ ನಿರ್ದೇಶಕರಾಗಿದ್ದರು. ಆದರೆ ಸಚಿವ ಸ್ಥಾನ ಪಡೆಯುವ ಮೊದಲು ಆ ಕಂಪೆನಿಗೆ ರಾಜೀನಾಮೆ ನೀಡಿ ಆ ಕಂಪೆನಿ ಷೇರುಗಳನ್ನು ಪಿರಾಮಲ್‌ ಎಸ್ಟೇಟ್‌ ಪ್ರೈವೇಟ್‌ ಲಿಮಿಟೆಡ್‌ ಕಂಪೆನಿಗೆ 1 ಸಾವಿರ ಪಟ್ಟು ಹೆಚ್ಚಿನ ಮೌಲ್ಯಕ್ಕೆ ಮಾರಾಟ ಮಾಡಿದ್ದಾರೆ. ಇದರಲ್ಲಿ ಸ್ವಹಿತಾಸಕ್ತಿ ಅಡಗಿದೆ . ಪ್ರಧಾನಿ ನರೇಂದ್ರ ಮೋದಿ ತತ್‌ಕ್ಷಣ ಅವರನ್ನು ಸಂಪುಟದಿಂದ ಕೈ ಬಿಟ್ಟು,  ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.