Advertisement

ರಣಜಿ ಟ್ರೋಫಿಯಲ್ಲಿ ಪೃಥ್ವಿ ಶಾ ದಾಖಲೆ: 379 ರನ್ ಹೊಡೆದ ಮುಂಬೈ ಬ್ಯಾಟರ್

03:49 PM Jan 11, 2023 | Team Udayavani |

ಗುವಾಹಟಿ: ಮುಂಬೈ ತಂಡದ ಆಟಗಾರ ಪೃಥ್ವಿ ಶಾ ರಣಜಿ ಟ್ರೋಫಿಯಲ್ಲಿ ಸಾರ್ವಕಾಲಿಕ ಎರಡನೇ ಅತಿ ಹೆಚ್ಚು ಸ್ಕೋರ್ ಮಾಡಿದ ದಾಖಲೆ ಬರೆದಿದ್ದಾರೆ. ಅಸ್ಸಾಂ ವಿರುದ್ಧದ ರಣಜಿ ಪಂದ್ಯದಲ್ಲಿ ಪೃಥ್ವಿ ಶಾ 379 ರನ್ ಗಳಿಸಿ ಮೆರೆದಾಡಿದರು.

Advertisement

ಮೊದಲ ದಿನದಾಟದ ಅಂತ್ಯಕ್ಕೆ 240 ರನ್‌ ಗಳಿಸಿದ್ದ ಶಾ, ಇಂದು ಆಟ ಮುಂದುವರಿಸಿದರು. ಇಂದು ಕೇವಲ 99 ಎಸೆತಗಳಲ್ಲಿ ಅವರು 139 ರನ್ ಗಳಿಸಿದರು. ಒಟ್ಟಾರೆ ಪೃಥ್ವಿ ಶಾ ಅವರು 383 ಎಸೆತಗಳಲ್ಲಿ 379 ರನ್ ಗಳಿಸಿ ಔಟಾದರು. ಅವರ ಈ ಇನ್ನಿಂಗ್ಸ್ ನಲ್ಲಿ ನಾಲ್ಕು ಸಿಕ್ಸರ್ ಮತ್ತು 49 ಬೌಂಡರಿಗಳು ಬಂದಿದ್ದವು.

ಇದು ರಣಜಿ ಟ್ರೋಫಿ ಇತಿಹಾಸದಲ್ಲಿ ಆಟಗಾರನೊಬ್ಬ ಗಳಿಸಿದ ಎರಡನೇ ಅತೀ ಹೆಚ್ಚಿನ ಮೊತ್ತವಾಗಿದೆ. 1948ರಲ್ಲಿ ಮಹಾರಾಷ್ಟ್ರದ ಭಾವುಸಾಹೇಬ್ ನಿಂಬಾಳ್ಕರ್ ಅವರು ಅಜೇಯ 443 ರನ್ ಗಳಿಸಿರುವುದು ದಾಖಲೆಯಾಗಿದೆ.

ಇದನ್ನೂ ಓದಿ:ಪ್ಯಾರಿಸ್ ನಿಲ್ದಾಣದಲ್ಲಿ ಹಲವರಿಗೆ ಇರಿದ ದುಷ್ಕರ್ಮಿ ಪೊಲೀಸರ ಗುಂಡಿಗೆ ಬಲಿ

ಬುಧವಾರ, ಶಾ ರಣಜಿ ಇನ್ನಿಂಗ್ಸ್‌ನಲ್ಲಿ 350 ರನ್ ದಾಟಿದ ಒಂಬತ್ತನೇ ಬ್ಯಾಟರ್ ಆದರು. ಸ್ವಪ್ನಿಲ್ ಗುಗಾಲೆ (351*), ಚೇತೇಶ್ವರ ಪೂಜಾರ (352), ವಿವಿಎಸ್ ಲಕ್ಷ್ಮಣ್ (353), ಸಮಿತ್ ಗೋಹೆಲ್ (359*), ವಿಜಯ್ ಮರ್ಚಂಟ್ (359*), ಎಂವಿ ಶ್ರೀಧರ್ (366) ಮತ್ತು ಸಂಜಯ್ ಮಂಜ್ರೇಕರ್ (377) ಅವರನ್ನು ಹಿಂದಿಕ್ಕಿದರು. ಊಟದ ವಿರಾಮದ ಮೊದಲು ಕೊನೆಯ ಓವರ್‌ ನಲ್ಲಿ ಲೆಗ್‌ ಸ್ಪಿನ್ನರ್ ರಿಯಾನ್ ಪರಾಗ್‌ಗೆ ಎಲ್ಬಿಡಬ್ಲ್ಯೂ ಗೆ ಬಲಿಯಾದರು.

Advertisement

ಮುಂಬೈ ತಂಡ 4 ವಿಕೆಟ್ ನಷ್ಟಕ್ಕೆ 687 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next