Advertisement

ಅಂಧರ ಗಾಯನಕ್ಕೆ ತಲೆದೂಗಿದ ಜೈಲು ಹಕ್ಕಿಗಳು

12:18 PM Nov 05, 2018 | |

ಮೈಸೂರು: ಯಾವುದೋ ಕೆಟ್ಟದಾಗ ಸಂದರ್ಭ, ಸನ್ನಿವೇಶದ ಒತ್ತಡಕ್ಕೆ ಸಿಲುಕಿ ತಪ್ಪು ಮಾಡಿ ಸೆರೆವಾಸ ಅನುಭವಿಸುತ್ತಿರುವ ಜೈಲು ಹಕ್ಕಿಗಳಿಗೆ ಮಮತೆ ಮಡಿಲು ಗೆಳೆಯರ ಬಳಗದ ದೃಷ್ಟಿ ವಿಶೇಷ ಚೇತನರು ತಮ್ಮ ಗಾಯನದ ಮೂಲಕ ಸಂಗೀತದ ರಸದೌತಣ ಉಣಬಡಿಸಿದರು. 

Advertisement

ನಗರದ ಕೇಂದ್ರ ಕರಾಗೃಹದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಬಳಗದ ದೃಷ್ಟಿ ವಿಶೇಷ ಚೇತನರು ತಮ್ಮ ಹಾಡಿನ ಮೂಲಕ ಮನರಂಜನೆ ನೀಡಿದರು. ಕಾರ್ಯಕ್ರಮದ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ದೃಷ್ಟಿ ವಿಶೇಷ ಚೇತನರು ಪಾಲ್ಗೊಂಡಿದ್ದರು. ಮೊದಲಿಗೆ ಮಂಡ್ಯದ ಮಜರ್‌ ಅಲಿ ಖಾನ್‌ ಅವರು ಪ್ರಾರ್ಥನಾ ಗೀತೆಯನ್ನು ಹಾಡುವ ಮೂಲಕ ಸಂಗೀತ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಬಳಿಕ ಜಯಣ್ಣ ಅವರು ಬಿಎಂಶ್ರೀ ಅವರ “ಕರುಣಾಳಾ ಬಾ ಬೆಳಕೆ…’ ಗೀತೆ ಹಾಡಿದರೆ. ಶಿವಮೊಗ್ಗದ ಶಾಜಿಯಾ ಅಜುಂ ಅವರು ರಾಜ್ಯೋತ್ಸವ ಗೀತೆ ಹಾಗೂ “ಲೋಕದ ಕಣ್ಣಲ್ಲಿ ರಾಧೆಯು ಒಂದು ಹೆಣ್ಣು..’ ಗೀತೆಯನ್ನು ಪ್ರಸ್ತುತಪಡಿಸಿದರು. ಅಲ್ಲದೆ ಮಜಲರ್‌ ಅಲಿ ಖಾನ್‌ ಅವರು ಕೃಷ್ಣ ರುಕ್ಮಣಿ ಚಲನಚಿತ್ರ ಗೀತೆ ಹಾಡಿದರು. ಮಂಜುನಾಥ್‌ ಕಾರಾಗೃಹ ಸೆರೆ ಮನೆಯಲ್ಲ, ಸಿರಿ ಮನೆ .. ಎಂಬ ಹಾಡು ಹೇಳಿದರು.

ಯೋಗೇಶ್‌ ಅವರು ಜಿಎಸ್‌ಎಸ್‌ ಅವರ “ಕಾಣದ ಕಡಲಿಗೆ ಅಂಬಲಿಸಿದ ಮನ…’ ಗೀತೆ ಹಾಡುವ ಮೂಲಕ ಭಾವ ತುಂಬಿದರು. ಕಾರ್ಯಕ್ರಮದಲ್ಲಿ ತಬಲದಲ್ಲಿ ಮೋಹನ್‌ ಕುಮಾರ್‌, ಕೀ ಬೋರ್ಡ್‌ನಲ್ಲಿ ಯೋಗೇಶ್‌, ಜಯಣ್ಣ ಸಹಕರಿಸಿದರು. ಕಾರ್ಯಕ್ರಮದ ಅಂತ್ಯದಲ್ಲಿ ಕೈದಿ ಮಹಾದೇವ ನಾಯ್ಕ “ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು..’ ಹಾಡು ಹಾಡಿ ಎಲ್ಲರ ಮೆಚ್ಚಿಗೆ ಪಡೆದರು. 

ಮಮತೆ ಮಡಿಲು ಗೆಳೆಯರ ಬಳಗದ ಸಂಸ್ಥಾಪಕ ಕೆ.ಪ್ರಸಾದ್‌ ಮಾತನಾಡಿ, ಈ ರೀತಿಯ ಕಾರ್ಯಕ್ರಮಗಳು ನಮಗೆ ಬೇಕಿದೆ ಎಂದು ಕೈದಿಗಳು ಪ್ರತಿಕ್ರಿಯಿಸಿದ್ದಾರೆ. ಈ ಕಾರ್ಯಕ್ರಮವನ್ನು ರಾಜ್ಯದ ಎಲ್ಲಾ ಜಿಲ್ಲೆಯ ಕೇಂದ್ರ ಕಾರಾಗೃಹಕ್ಕೆ ಕೊಂಡಯ್ಯುತ್ತೇವೆ ಎಂದರು. ಕಾರಾಗೃಹ ಪಾಲಕರಾದ ಅಶೋಕ, ರಘುಪತಿ, ಶ್ರೀನಿವಾಸ್‌, ಉಪನ್ಯಾಸಕಿ ನಂದಿನಿ, ಮಮತೆ ಮಡಿಲು ಸಂಸ್ಥೆಯ ಟಿ.ಎಂ. ಕೆಂಪೇಗೌಡ, ನಿರ್ದೇಶಕಿ ಮೀನಾಕ್ಷಮ್ಮ ಸೇರಿದಂತೆ ಇನ್ನಿತರರು ಹಾಜರಿದ್ದರು. 

Advertisement

ಬದುಕು ರೂಪಿಸಿಕೊಳ್ಳಿ: ಯಾವುದೋ ಕೆಟ್ಟ ಸಂದರ್ಭದಲ್ಲಿ ತಪ್ಪು ಮಾಡಿ ಜೈಲು ಸೇರಿರುವ ಕೈದಿಗಳ ಮುಂದಿನ ಬದುಕನ್ನು ಚೆನ್ನಾಗಿ ರೂಪಿಸಿಕೊಳ್ಳಬೇಕು. ಸೇವೆ ಮಾಡಲು ಯಾವುದೇ ಅಧಿಕಾರದ ಅಗತ್ಯವಿಲ್ಲ. ಸೇವೆ ಮಾಡಬೇಕೆಂಬ ಮನಸ್ಸು ಇರಬೇಕು. ಹೃದಯ ಇರಬೇಕು.

ಹೀಗಾಗಿ ನಿಮ್ಮ ಒಳಗಣ್ಣು ತೆರೆಯಿರಿ ಬದಲಾಗಿ. ನಿಮ್ಮ ಬದಲಾವಣೆಗಾಗಿ ಸಮಾಜ ಕಾಯುತ್ತಿದೆ. ನೀವು ಬದಲಾದರೆ ನಿಮ್ಮ ಕುಟುಂಬಕ್ಕೆ ಒಳ್ಳೆಯದಾಗುತ್ತದೆ. ಈ ಮೂಲಕ ಸಮಾಜಕ್ಕೆ ಮತ್ತು ದೇಶಕ್ಕೆ ಒಳ್ಳೆಯ ಕೆಲಸ ಮಾಡಿ ಎಂದು ಕಾರ್ಯಕ್ರಮ ಉದ್ಘಾಟಿಸಿದ ಮೈಸೂರು ಕೇಂದ್ರ ಕಾರಗೃಹದ ಅಧೀಕ್ಷಕ ಆನಂದ ರೆಡ್ಡಿ ಸಲಹೆ ನೀಡಿದರು. 

Advertisement

Udayavani is now on Telegram. Click here to join our channel and stay updated with the latest news.

Next