Advertisement
ಸುಮಾರು 95 ವರ್ಷಗಳ ಇತಿಹಾಸ ಹೊಂದಿರುವ ಬ್ರಿಟಿಷರ ಕಾಲದ ಹಿಂಡಲಗಾ ಜೈಲು ಈಗ ಕಲಾಕೌಶಲದತ್ತ ಮುಖ ಮಾಡಿದೆ. ಕಸದಿಂದಲೇ ರಸ ಮಾಡುತ್ತ ತಮ್ಮ ಪ್ರತಿಭೆ ಮೂಲಕ ಇಲ್ಲಿಯ ಜೈಲು ಬಂಧಿಗಳ ವಿನೂತನ ಶೈಲಿಯ ಬದುಕು ಇತರರಿಗೆ ಮಾದರಿಯಾಗಿದೆ. ಬ್ರಿಟಿಷರ ಕಾಲದಿಂದಲೂ ಇಲ್ಲಿಯ ಕೈದಿಗಳು ಒಂದಲ್ಲ ಒಂದು ಕೆಲಸ ಮಾಡುತ್ತ ತಮ್ಮನ್ನು ತಾವು ರೂಪಿಸಿಕೊಂಡು ಮನಪರಿವರ್ತನೆಯತ್ತ ಹೆಜ್ಜೆ ಹಾಕುತ್ತಿದ್ದಾರೆ. ಕೈದಿಗಳು ಒಂದೆಡೆ ಕಟ್ಟಿಗೆ ಪೀಠೊಪಕರಣ ತಯಾರಿಸಿದರೆ, ಇನ್ನೊಂದೆಡೆ ವಿವಿಧ ತರಹದ ಬಟ್ಟೆಗಳನ್ನು ಹೊಲೆಯುವುದರಲ್ಲಿ ಮಗ್ನರಾಗಿದ್ದಾರೆ.
Related Articles
Advertisement
ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ವಿದ್ಯಾರ್ಥಿಗಳ ಹಾಸ್ಟೆಲ್‌ಗೆ ಅಗತ್ಯ ಇರುವ 70 ಮಂಚಗಳನ್ನು ತಯಾರಿಸಲಾಗಿದೆ. ಸದ್ಯ 35 ಬೆಡ್ ನೀಡಲಾಗಿದ್ದು, ಇನ್ನೂ 35 ಬೆಡ್‌ಗಳ ತಯಾರಿಕೆ ಕಾರ್ಯದಲ್ಲಿ ಕೈದಿಗಳು ನಡೆಸಿದ್ದಾರೆ. ಇದಕ್ಕೂ ಮುನ್ನ ಸರಕಾರಿ ವಲಯದ ಬಹುತೇಕ ಕಚೇರಿಗಳಿಗೆ ಇಲ್ಲಿಂದಲೇ ಪೀಠೊಪಕರಣ ಪೂರೈಸಲಾಗುತ್ತಿದ್ದು, ಕೋರ್ಟ್, ಶಾಲಾ-ಕಾಲೇಜುಗಳಿಗೆ ಅಗತ್ಯ ಇರುವ ವಸ್ತುಗಳನ್ನೂ ಸರಬರಾಜು ಮಾಡಲಾಗಿದೆ.
ಸಮವಸ್ತ್ರಗಳ ತಯಾರಿಕೆಗೂ ಸೈ: ಸುಮಾರು 40 ಹೊಲಿಗೆ ಯಂತ್ರಗಳನ್ನು ಇಟ್ಟುಕೊಂಡು ನೂರಾರು ಬಟ್ಟೆಗಳು, ಸಮವಸ್ತ್ರಗಳನ್ನು ತಯಾರಿಸುವ ಇಲ್ಲಿನ ಕೈದಿಗಳು ವೃತ್ತಿಪರರಂತೆ ಕೆಲಸ ಮಾಡುತ್ತಿದ್ದಾರೆ. 17 ಜನ ಕೈದಿಗಳು ಹೊಲಿಗೆ ಯಂತ್ರದ ಮೇಲೆ ಕೆಲಸ ನಿರ್ವಹಿಸುತ್ತಿದ್ದು, ಇದರಲ್ಲಿ ಮೂವರು ವೃತ್ತಿಪರರಾಗಿದ್ದಾರೆ. ವಿವಿಧೆಡೆ ಅಗತ್ಯ ಇರುವ ಬಟ್ಟೆಗಳನ್ನು ಹೊಲೆದು ಕೊಡುವುದೇ ಇವರ ಕಾಯಕ.
ಬೆಳಗ್ಗೆ 7 ಗಂಟೆಯಿಂದ ಆರಂಭವಾಗುವ ಇವರ ಕಾಯಕ ಸಂಜೆ 6:30ರ ವರೆಗೂ ನಡೆಯುತ್ತದೆ. ಸದ್ಯ ಗೃಹ ಇಲಾಖೆ ಸಿಬ್ಬಂದಿಗೆ ಬೇಕಾಗುವ 1358 ಸಮವಸ್ತ್ರಗಳ ಬೇಡಿಕೆ ಬಂದಿದ್ದು, ಈಗ 250 ಸಮವಸ್ತ್ರಗಳನ್ನು ತಯಾರಿಸಿದ್ದಾರೆ. ಜತೆಗೆ ವಿವಿಧ ಶಾಲೆಗಳ ಸಮವಸ್ತ್ರಗಳನ್ನೂ ಕೈದಿಗಳೇ ಹೊಲೆಯುತ್ತಾರೆ. ಜೊತೆಗೆ ತಮ್ಮ ಕೈದಿಗಳ ಬಿಳಿ ಬಣ್ಣದ ಸಮವಸ್ತ್ರಗಳು, ಜೈಲಿನ ಅಧಿಕಾರಿಗಳು, ಸಿಬ್ಬಂದಿಗಳ ಸಮವಸ್ತ್ರಗಳೂ ಇವರೇ ಹೊಲೆಯುತ್ತಾರೆ.
ಈಗ ಜೈಲಿನ ಮುಖ್ಯ ಅಧೀಕ್ಷಕ ಟಿ.ಪಿ. ಶೇಷ ಅವರ ವಿಶೇಷ ಪ್ರಯತ್ನದಿಂದ ಗುಡಿ ಕೈಗಾರಿಕೆಗೆ ಉತ್ತೇಜನ ನೀಡಲಾಗುತ್ತಿದೆ. ಹೀಗಾಗಿ ಕೈದಿಗಳೂ ಸ್ವ ಆಸಕ್ತಿಯಿಂದ ಈ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಅರಣ್ಯ ಇಲಾಖೆಯಿಂದ ಸಿಗುವ ಕಟ್ಟಿಗೆಗಳಿಂದಲೇ ವಿವಿಧ ನಮೂನೆಯ ಪೀಠೊಪಕರಣಗಳನ್ನು ನಿರ್ಮಿಸಲಾಗುತ್ತಿದೆ. ಮಾರುಕಟ್ಟೆಯಲ್ಲಿ ಲಭ್ಯವಾಗುವ ವಸ್ತುಗಳಿಗಿಂತಲೂ ನಮ್ಮ ಜೈಲು ಬಂಧಿಗಳು ತಯಾರಿಸುವ ವಸ್ತುಗಳು ಗುಣಮಟ್ಟದ್ದಾಗಿವೆ. ಯಾವುದನ್ನೂ ಕಳಪೆ ಮಟ್ಟದಲ್ಲಿ ತಯಾರಿಸುವುದಿಲ್ಲ ಎನ್ನುತ್ತಾರೆ ಜೈಲು ಅಧೀಕ್ಷಕ ಟಿ.ಪಿ. ಶೇಷ.
ಜೈಲಿನ ಬಟ್ಟೆ ಬೇರೆ ಜಿಲ್ಲೆಗೂ ಪೂರೈಕೆಹಿಂಡಲಗಾ ಜೈಲಿನಲ್ಲಿ ಕೈದಿಗಳು ಹೊಲೆಯುವ ಮವಸ್ತ್ರಗಳು ಬೇರೆ ಬೇರೆ ಜಿಲ್ಲೆಗಳಿಗೂ ಕಳುಹಿಸಲಾಗುತ್ತದೆ. ಬೆಳಗಾವಿಯಂತೆ ಬೇರೆ ಜಿಲ್ಲೆಗಳಲ್ಲಿರುವ ಜೈಲಿನಲ್ಲಿ ಕೈದಿಗಳು ಹೊಲೆಗೆ ಕೆಲಸ ಮಾಡುವುದಿಲ್ಲ. ಧಾರವಾಡ, ವಿಜಯಪುರ, ಬಾಗಲಕೋಟೆಗೂ ಸಮವಸ್ತ್ರಗಳನ್ನು ಕಳುಹಿಸಲಾಗುತ್ತಿದೆ. ಬೆಂಗಳೂರು, ಮೈಸೂರು, ಬಳ್ಳಾರಿ ಹಾಗೂ ಬೆಳಗಾವಿ ಜೈಲುಗಳಲ್ಲಿ ಮಾತ್ರ ಬಟ್ಟೆ ಹೊಲೆಯಾಗುತ್ತಿದೆ. ಗುಡಿ ಕೈಗಾರಿಕೆಗೆ ಉತ್ತೇಜನ ನೀಡುವ ಉದ್ದೇಶದಿಂದ ಹಿಂಡಲಗಾ ಜೈಲಿನ ಬಂಧಿಗಳು ವಿನೂತನ ಬದುಕಿನತ್ತ ಹೆಜ್ಜೆ ಹಾಕುತ್ತಿದ್ದಾರೆ. ತಮ್ಮ ಕಲಾ ಕೌಶಲದಿಂದ ಕಟ್ಟಿಗೆಯಲ್ಲಿ ವಿವಿಧ ನಮೂನೆಯ ಪೀಠೊಪಕರಣಗಳನ್ನು ತಯಾರಿಸುವ ಮೂಲಕ ತಮ್ಮ ಜೀವನ ರೂಪಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಬಟ್ಟೆ,
ಸಮವಸ್ತ್ರ ಹೊಲೆಯುವುದರಲ್ಲೂ ಮಗ್ನರಾಗಿದ್ದಾರೆ. ಇದರಿಂದ ಜೈಲು ಬಂಧಿಗಳು ಮಾನಸಿಕವಾಗಿ ಸಿದ್ಧಗೊಳ್ಳುವುದರ ಜೊತೆಗೆ ಸನ್ನಡತೆಯ ಪಟ್ಟವೂ ಸಿಗುತ್ತದೆ. ಮುಂದೆ ಕಲಾಕೌಶಲ ಹಾಗೂ ಸ್ವಾವಲಂಬಿ ಬದುಕು ಗಿಸಬಹುದಾಗಿದೆ.
ಟಿ.ಪಿ. ಶೇಷ, ಮುಖ್ಯ ಅಧೀಕ್ಷಕರು, ಹಿಂಡಲಗಾ ಜೈಲು ಬೈರೋಬಾ ಕಾಂಬಳೆ