Advertisement
ಅತಿ ಕಡಿಮೆ ಅಲಂಕಾರಮನೆಗೆ ಹೆಚ್ಚು ಅಲಂಕಾರ ಮಾಡುವುದು ವಿಶೇಷ ಸಂದರ್ಭದಲ್ಲಿ ಮಾತ್ರ. ಆದರೆ ನಿತ್ಯ ಹೆಚ್ಚು ಅಲಂಕಾರ ಮಾಡಿದರೆ ಅಭಾಸವಾಗುತ್ತದೆ. ಅದಕ್ಕಾಗಿ ಅತಿ ಕಡಿಮೆ ಅಲಂಕಾರಕ್ಕೆ ಆದ್ಯತೆ ಕೊಡಿ. ಸಣ್ಣ ಕೋಣೆಗಳಾದರೆ ಅತಿ ಕಡಿಮೆ ವಸ್ತುಗಳನ್ನು ಇಡಿ.
ಒಂದಕ್ಕೊಂದು ಪೂರಕವಾದ ಒಳಾಂಗಣ ವಿನ್ಯಾಸ ಇರುವಂತೆ ನೋಡಿಕೊಳ್ಳುವುದು ಬಹುಮುಖ್ಯ. ಅದರಲ್ಲೂ ಪೀಠೊಪಕರಣಗಳು, ಮನೆಯೊಳಗೆ ಮಾಡುವ ವಿನ್ಯಾಸಗಳು ಒಂದಕ್ಕೊಂದು ಪೂರಕವಾಗಿದ್ದರೆ ಹೆಚ್ಚು ಸ್ಥಳ ಉಳಿತಾಯ ಸಾಧ್ಯವಿದೆ. ಜತೆಗೆ ಮನೆ ಹೆಚ್ಚು ಆಕರ್ಷಕವಾಗುವುದು. ಆಧುನಿಕ ತಂತ್ರಜ್ಞಾನಗಳು
ಮನೆಯೊಳಗೆ ಆಧುನಿಕ ತಂತ್ರಜ್ಞಾನಗಳ ಬಳಕೆಗೆ ಆದ್ಯತೆ ನೀಡಿ. ಟಿವಿ, ವಿದ್ಯುತ್, ಎಸಿ ಮೊದಲಾದವುಗಳು ರಿಮೋಟ್, ವಾಯ್ಸ ಕಂಟ್ರೋಲ್ ಮೂಲಕ ಕಾರ್ಯನಿರ್ವಹಿಸಲಿ. ಮನೆಯು ಆಧುನಿಕ ಜಗತ್ತಿನೊಂದಿಗೆ ಸಂಪರ್ಕ ಸಾಧಿಸುವಂತಿದ್ದರೆ ಮನೆ ಆಕರ್ಷಕವಾಗಿರುವುದರ ಜತೆಗೆ ಆಧುನಿಕವಾಗಿಯೂ ಇರುತ್ತದೆ.
Related Articles
ಗೋಡೆಗಳಲ್ಲಿ ತೂಗುಹಾಕುವ ಚಿತ್ರಗಳು ಮರು ಪ್ರಿಂಟ್ ಮಾಡುವ ಹಾಗೆ ಇರಬೇಕು. ಯುವ ಕಲಾವಿದರು ರಚಿಸಿದ ಚಿತ್ರಗಳು, ಡಿಜಿಟಲ್ ಆರ್ಟ್ ಫೋಟೋಗ್ರಫಿ, ಸಾಂಪ್ರದಾಯಿಕ, ಬುಡಕಟ್ಟು ಜನಾಂಗದ ಚಿತ್ರಗಳು ಹೆಚ್ಚು ಆಕರ್ಷಕವಾಗಿರುವುದರ ಜತೆಗೆ ಮನೆ ಗೊಂದು ಹೊಸ ಲುಕ್ ಕೊಡಬಲ್ಲದು.
Advertisement
ವಿದ್ಯುತ್ ದೀಪಗಳುಮನೆಯೊಳಗೆ ಹಾಗೂ ಹೊರಗಿನ ವಿದ್ಯುತ್ ಅಲಂಕಾರಗಳು ಮನೆಗೆ ವಿಶೇಷ ಲುಕ್ ಕೊಡುತ್ತದೆ. ನಮ್ಮ ಮನಸ್ಸಿನ ಭಾವನೆಗಳಿಗೆ ಅನುಗುಣವಾದ ವಿದ್ಯುತ್ ಮನೆಯೊಳಗಿದ್ದರೆ ಉತ್ತಮ. ಇದಕ್ಕಾಗಿ ಎರಡು ಅಥವಾ ಮೂರು ರೀತಿಯ ವಿದ್ಯುತ್ ಬಲ್ಬ್ಗಳನ್ನು ಬಳಸಬೇಕು. ಇದು ಮನೆಗೆ ಸ್ಟೈಲಿಶ್ ಲುಕ್ ಕೊಡುತ್ತದೆ. ವಿವಿಧ ಸಂದರ್ಭಗಳಲ್ಲಿ ಇದು ಹೆಚ್ಚು ಪ್ರಸ್ತುತ ಎಂದೆನಿಸುತ್ತದೆ. – ವಿದ್ಯಾ