Advertisement
ಅವರು ಶನಿವಾರ ಮಂಗಳೂರಿನಲ್ಲಿ ಎಂಆರ್‌ಪಿಎಲ್ ಮತ್ತು ರಾಜ್ಯ ಸರಕಾರದ ಆರ್ಥಿಕ ನೆರವು ಸೇರಿ ಸುಮಾರು 51 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಸರಕಾರಿ ಲೇಡಿಗೋಶನ್ ಆಸ್ಪತ್ರೆಯ ಒಎನ್‌ಜಿಸಿ-ಎಂಆರ್‌ಪಿಎಲ್ ಆ್ಯನಿವರ್ಸರಿ ವಿಂಗ್ ನೂತನ ಕಟ್ಟಡವನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.
ಆಸ್ಪತ್ರೆಯ ನೂತನ ಪ್ರಯೋಗಾಲಯವನ್ನು ಡಾ| ವೀರಪ್ಪ ಮೊಯ್ಲಿ ಉದ್ಘಾಟಿಸಿದರು. ಆಸ್ಪತ್ರೆಯ ಉಸ್ತುವಾರಿಯನ್ನು ಒಎನ್‌ಜಿಸಿ-ಎಂಆರ್‌ಪಿಎಲ್ ವಹಿಸಿಕೊಳ್ಳಬೇಕೆಂದು ಸಲಹೆ ಮಾಡಿದರು. ಇದನ್ನು ಸ್ಪೆಷಾಲಿಟಿ ಆಸ್ಪತ್ರೆಯಾಗಿ ಅಭಿವೃದ್ಧಿ ಪಡಿಸಿದರೆ ರೋಗಿಗಳಿಗೆ ಉತ್ತಮ ಸೌಲಭ್ಯ ಒದಗಿಸಲು ಸಾಧ್ಯವಿದೆ ಎಂದರು.
Related Articles
Advertisement
ನರ್ಸಿಂಗ್ ಸೇವೆ: ಖಾದರ್ ತೀವ್ರ ನಿಗಾ ವಿಭಾಗವನ್ನು ಸಚಿವ ಯು.ಟಿ. ಖಾದರ್ ಉದ್ಘಾಟಿಸಿದರು. ಆಯುಷ್ಮಾನ್ ಯೋಜನೆಯನ್ನು ತಾಲೂಕು ಮಟ್ಟಕ್ಕೆ ವಿಸ್ತರಿಸ ಬೇಕು. ವೆನಾÉಕ್ ಸರಕಾರಿ ಆಸ್ಪತ್ರೆಯಲ್ಲಿ ನರ್ಸಿಂಗ್ ಶಿಕ್ಷಣ ಪೂರೈಸಿದವರು ಲೇಡಿಗೋಶನ್‌ನಲ್ಲಿ ಒಂದು ವರ್ಷ ಸೇವೆ ಸಲ್ಲಿಸುವ ವ್ಯವಸ್ಥೆ ಆಗಬೇಕು. ಹಳೆ ಕಟ್ಟಡದಲ್ಲಿ ರೋಗಿಗಳ ಸಂಬಂಧಿಕರಿಗೆ ವಾಸ್ತವ್ಯಕ್ಕೆ ವ್ಯವಸ್ಥೆ ಕಲ್ಪಿಸಬಹುದು ಎಂದು ಸಲಹೆ ನೀಡಿದರು. ಆಸ್ಪತ್ರೆಯ ಅಭಿವೃದ್ಧಿಗೆ ರಾಜ್ಯ ಸರಕಾರದಿಂದ ನೆರವು ಒದಗಿಸಲು ಪ್ರಯತ್ನಿಸಲಾಗುವುದು ಎಂದರು. ಅಧ್ಯಕ್ಷತೆ ವಹಿಸಿದ್ದ ಶಾಸಕ ವೇದವ್ಯಾಸ ಕಾಮತ್ ಮಾತನಾಡಿದರು. ಸಂಸದ ನಳಿನ್ ಕುಮಾರ್ ಕಟೀಲು, ಮಾಜಿ ಸಚಿವ ರಮಾನಾಥ ರೈ, ಮಾಜಿ ಶಾಸಕ ಯೋಗೀಶ್ ಭಟ್, ಕೆಎಂಸಿ ಆಸ್ಪತ್ರೆ ಡೀನ್ ಡಾ| ವೆಂಕಟ್ರಾಯ ಪ್ರಭು ಮಾತನಾಡಿದರು. ಮಾಜಿ ಸಚಿವ ಅಮರನಾಥ ಶೆಟ್ಟಿ, ದ.ಕ. ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಸ್ಥಳೀಯ ಕಾರ್ಪೊರೇಟರ್ ಪೂರ್ಣಿಮಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ| ರಾಮಕೃಷ್ಣ ರಾವ್ ಉಪಸ್ಥಿತರಿದ್ದರು. ಒಎನ್‌ಜಿಸಿ- ಎಂಆರ್‌ಪಿಎಲ್ ಜನರಲ್ ಮ್ಯಾನೇಜರ್ ಎಚ್.ಎಲ್. ಪ್ರಸಾದ್ ಸ್ವಾಗತಿಸಿದರು. ವ್ಯವಸ್ಥಾಪಕ ನಿರ್ದೇಶಕ ಎಂ. ವೆಂಕಟೇಶ್ ಪ್ರಸ್ತಾವನೆಗೈದರು. ಲೇಡಿಗೋಶನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ| ಸವಿತಾ ವಂದಿಸಿದರು. ಪಾರ್ಟಿ ಬೇರೆ ಆಗಿದ್ದರೂ ಹಾರ್ಟ್ ಒಂದೇ
ಡಿವಿಎಸ್ ಅವರು ತಮ್ಮ ಭಾಷಣದಲ್ಲಿ, ಮೊಲಿ ಹೋದಲ್ಲೆಲ್ಲ ನಾನೂ ಇದ್ದೇನೆ. ನಮ್ಮದು ಅವಿನಾಭಾವ ಸಂಬಂಧ. ಮೊಲಿ ಮುಖ್ಯಮಂತ್ರಿಯಾದರು, ಬಳಿಕ ನಾನೂ ಆದೆ. ಅವರು ಸಂಸದರಾದರು, ನಾನೂ ಆದೆ. ಅವರು ಕೇಂದ್ರ ಸಚಿವರಾದರು, ನಾನೂ ಆದೆ. ನಮ್ಮದು ಪಾರ್ಟಿ ಬೇರೆ ಬೇರೆ ಆಗಿದ್ದರೂ ಹಾರ್ಟ್ ಒಂದೇ. ಅಭಿವೃದ್ಧಿ ಕೆಲಸಗಳಲ್ಲಿ ನಮ್ಮದು ಒಂದೇ ದೃಷ್ಟಿಕೋನ ಎಂದರು. ಡಾ| ಮೊಲಿ ಅವರು ತಮ್ಮ ಭಾಷಣದಲ್ಲಿ, ಅಭಿವೃದ್ಧಿ ಕೆಲಸಗಳಲ್ಲಿ ಎಲ್ಲರೂ ಒಟ್ಟಾಗಬೇಕು; ರಾಜಕೀಯ ತರಬಾರದು ಎಂದರು. 260 ಬೆಡ್‌ಗಳ
ಸುಸಜ್ಜಿತ ಆಸ್ಪತ್ರೆ
ಸುಮಾರು 51 ಕೋಟಿ ರೂ. ವೆಚ್ಚದಲ್ಲಿ ತಲೆ ಎತ್ತಿದ ಲೇಡಿಗೋಶನ್ ಸರಕಾರಿ ಆಸ್ಪತ್ರೆಯ ಹೊಸ ಕಟ್ಟಡವು 260 ಬೆಡ್‌ಗಳಿಂದ ಸುಸಜ್ಜಿತವಾಗಿದೆ. ಒಟ್ಟು 7 ಅಂತಸ್ತು ಹೊಂದಿದ್ದು, ಕೆಳ ಅಂತಸ್ತಿನಲ್ಲಿ ವಾಹನ ನಿಲುಗಡೆ, ಪ್ರಥಮ ಅಂತಸ್ತಿನಲ್ಲಿ ಕಚೇರಿ, ಉಳಿದ 5 ಅಂತಸ್ತುಗಳಲ್ಲಿ ಹೊರರೋಗಿ, ಪ್ರಸೂತಿ ವಿಭಾಗ, 54 ಬೆಡ್‌ಗಳ ನವಜಾತ ಶಿಶುಗಳ ಆರೈಕೆ ಕೇಂದ್ರ, 5 ಐಸಿಯು ವಾರ್ಡ್, ಒಳರೋಗಿ ವಿಭಾಗ, ಸಾಮಾನ್ಯ ವಾರ್ಡ್, ಪ್ರಯೋಗಾಲಯ ಸಹಿತ ವಿಶೇಷ ಸವಲತ್ತು, ಸೌಲಭ್ಯಗಳಿವೆ. ಪ್ರತಿದಿನ 100ಕ್ಕೂ ಅಧಿಕ ಹೊರರೋಗಿ, 150ಕ್ಕೂ ಅಧಿಕ ಒಳರೋಗಿಗಳ ದಾಖಲಾತಿಗೆ ಅವಕಾಶ ಇದೆ. ಎಂಆರ್‌ಪಿಎಲ್ 31 ಕೋಟಿ ರೂ. ನೀಡಿದರೆ, ಉಳಿದ 20 ಕೋಟಿ ರೂ.ಗಳನ್ನು ರಾಜ್ಯ ಸರಕಾರ ನೀಡಿದೆ ಎಂದು ಎಂಆರ್‌ಪಿಎಲ್ ವ್ಯವಸ್ಥಾಪಕ ನಿರ್ದೇಶಕ ವೆಂಕಟೇಶ್ ವಿವರಿಸಿದರು. ಅನುದಾನದ ಬಗ್ಗೆ
ಭಾಷಣದಲ್ಲಿ ಪೈಪೋಟಿ!
ಕಟ್ಟಡಕ್ಕೆ ಅನುದಾನ ಒದಗಿಸಿದ ಬಗ್ಗೆ ಸಭೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಪೈಪೋಟಿಯಲ್ಲಿ ಮಾತನಾಡಿದರು. ಸದಾನಂದ ಗೌಡ ಅವರು ಅಂದಿನ ಶಾಸಕ ಯೋಗೀಶ್ ಭಟ್ ಅವರದು ಮೊದಲ ಪ್ರಯತ್ನ ಎಂದು ಶ್ಲಾಘಿಸಿದರೆ ನಳಿನ್, ವೇದವ್ಯಾಸ ಕಾಮತ್, ಯೋಗೀಶ್ ಭಟ್ ಪುನರುಚ್ಚರಿಸಿದರು. ಖಾದರ್, ಮೊಲಿ ಹಾಗೂ ರಮಾನಾಥ ರೈ ಇದು ತಮ್ಮ ಸರಕಾರದ ಪ್ರಯತ್ನ ಎಂದರು.