Advertisement
ಬೈಂದೂರುನ ಮರವಂತೆ, ಗಂಗೊಳ್ಳಿ, ಕೊಡೇರಿ, ಉಪ್ಪುಂದ, ಅಳ್ವೆಗದ್ದೆಗಳಲ್ಲಿ ದೊಡ್ಡ ಬಂದರುಗಳಿವೆ. ಮೀನುಗಾರಿಕೆ ಈ ಭಾಗದ ಪ್ರಮುಖ ಉದ್ಯಮವಾಗಿದ್ದು, ಅವುಗಳ ಸಾಗಣೆ ರಸ್ತೆ ಸಾರಿಗೆಯಿಂದ ಮಾತ್ರ ಆಗುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಮತ್ಸéಕ್ಷಾಮ, ಡೀಸೆಲ್ ಬೆಲೆ ಏರಿಕೆ, ಮೀನು ಸಾಗಾಟ ದರ ಹೆಚ್ಚಳ ಇತ್ಯಾದಿ ಕಾರಣಗಳಿಂದ ಮೀನುಗಾರರು ಸಂಕಷ್ಟ ಅನುಭವಿಸುವಂತೆ ಆಗಿತ್ತು.
ರತ್ನಗಿರಿ, ಗೋವಾ, ಮುಂಬಯಿ, ಕೇರಳ ಮತ್ತು ಚೆನ್ನೈಗೆ ಮೀನನ್ನು ರಸ್ತೆ ಮೂಲಕವೇ ಸಾಗಿಸಬೇಕಾಗಿತ್ತು. ಇದು ವೆಚ್ಚದಾಯಕವಾಗಿತ್ತು. ಈಗ ರೈಲಿನಲ್ಲಿ ಸಾಗಿಸಿದರೆ ಒಂದು ಕೆ.ಜಿ ಗೆ ಕೇವಲ ಒಂದೂವರೆ ರೂಪಾಯಿ ಮಾತ್ರ ವೆಚ್ಚ ತಗಲುತ್ತದೆ.
Related Articles
ಪ್ರತಿ ದಿನ ಬೈಂದೂರು ನಿಲ್ದಾಣದ ಮೂಲಕ 100 ಟನ್ ಮೀನು ಸಾಗಾಟವಾಗುವ ನಿರೀಕ್ಷೆಯಿದೆ. ಇದಕ್ಕೆ ಮೀನುಗಾರರ ಸಂಘದ ಮೂಲಕ ಸರಕು ಏಜೆಂಟ್ ನೇಮಿಸಿ ಬಂದರುಗಳಿಂದ ನೇರ ರೈಲ್ವೇ ನಿಲ್ದಾಣ ತಲುಪುವ ವ್ಯವಸ್ಥೆ ಮಾಡಲಾಗಿದೆ. ಇದರಿಂದ ರಸ್ತೆ ಸಾಗಾಟಕ್ಕಿಂತ 5 ಪಟ್ಟು ಉಳಿತಾಯವಾಗಲಿದೆ ಎಂದು ಮೀನು ಗಾರರ ಮುಖಂಡ ನವೀನ್‌ಚಂದ್ರ ತಿಳಿಸಿದ್ದಾರೆ.
Advertisement
ಇಲಾಖೆಯಿಂದ ಸಹಕಾರ ಸರಕು ಮತ್ತು ಮೀನು ಸಾಗಣೆಗೆ ರೈಲ್ವೇ ಸೇವೆ ಬಳಸಿಕೊಳ್ಳುವುದು ಸಾಕಷ್ಟು ಅನುಕೂಲವಾಗಲಿದೆ. ಅತಿ ಕಡಿಮೆ ವೆಚ್ಚದಲ್ಲಿ ಸಾಗಾಟದೊಂದಿಗೆ ಸರಳ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಮೀನು ಸಾಗಾಟಕ್ಕೆ ಇಲಾಖೆಯಿಂದ ಪೂರ್ಣ ಸಹಕಾರ ನೀಡಲಾಗುತ್ತದೆ.
– ವಿನಯ ಕುಮಾರ್, ಕೊಂಕಣ ರೈಲ್ವೇ ಮಾರ್ಕೆಟಿಂಗ್ ವ್ಯವಸ್ಥಾಪಕ