Advertisement

ಉದ್ಯಮಶೀಲತೆಗೆ ಆದ್ಯತೆ: ಯಶಸ್ವಿನಿ ನಾಗ್‌

04:00 AM Jul 18, 2017 | Team Udayavani |

ಮೂಡಬಿದಿರೆ: ಭಾರತ ಸರಕಾರದ ವಿಜ್ಞಾನ ಹಾಗೂ ತಂತ್ರ ಜ್ಞಾನ ಇಲಾಖೆ ನೆರವಿನೊಂದಿಗೆ ಭಾರತೀಯ ಉದ್ಯಮಶೀಲತೆ ಸಂಸ್ಥೆಯ ವತಿಯಿಂದ ಪ್ರಾಧ್ಯಾಪಕರಿಗಾಗಿ ಆಳ್ವಾಸ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ 12 ದಿನಗಳ ಕಾಲ ನಡೆಯಲಿರುವ ಉದ್ಯಮಶೀಲತಾ ವಿಕಸನ ರಾಷ್ಟ್ರಮಟ್ಟದ ಕಾರ್ಯಾಗಾರ ಸೋಮವಾರ ಪ್ರಾರಂಭವಾಯಿತು.

Advertisement

ಭಾರತೀಯ ಉದ್ಯಮಶೀಲತೆ ಸಂಸ್ಥೆಯ ಕಾರ್ಯಕ್ರಮ ನಿರ್ದೇಶಕ ಯಶಸ್ವಿನಿ ನಾಗ್‌ ಕಾರ್ಯಾಗಾರಕ್ಕೆ ಚಾಲನೆ ನೀಡಿ, “ಭಾರತ ಸರಕಾರವು ಸ್ಟಾರ್ಟ್‌ ಅಪ್‌ ಹಾಗೂ ಸ್ಟಾಂಡ್‌ಅಪ್‌ ಯೋಜನೆಗಳಿಗೆ ಬಳಸುವ ಅನುದಾನದಲ್ಲಿ ಹೆಚ್ಚಿನ ಭಾಗವನ್ನು ಉದ್ಯಮಶೀಲತೆ ಉತ್ತೇಜನಕ್ಕೆ ಬಳಸಿಕೊಳ್ಳಲಾಗುತ್ತಿದೆ. ವಿದ್ಯಾರ್ಥಿ ಗಳಲ್ಲಿ ಅನ್ವೇಷಣಾ ಗುಣವನ್ನು ಹೆಚ್ಚಿಸಲು ಶಿಕ್ಷಕರಲ್ಲೂ ಪರಿಪಕ್ವತೆ ಇರು ವುದು ಆವಶ್ಯಕ. ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಶಿಕ್ಷಕರಿಗೆ ತರಬೇತಿ ಅತ್ಯಂತ ಪರಿಣಾಮಕಾರಿ’ ಎಂದರು.

ಆಳ್ವಾಸ್‌ ಎಂಜಿನಿಯರಿಂಗ್‌ ಕಾಲೇ ಜಿನ ಪ್ರಾಂಶುಪಾಲ ಡಾ| ಪೀಟರ್‌ ಫೆರ್ನಾಂಡಿಸ್‌, ಯೋಜನಾ ವಿಭಾಗದ ಡೀನ್‌ ಡಾ| ದತ್ತಾತ್ರೇಯ, ಆಳ್ವಾಸ್‌ ಪದವಿ ಕಾಲೇಜಿನ ಪ್ರಾಂಶುಪಾಲ ಡಾ| ಕುರಿಯನ್‌ ಉಪಸ್ಥಿತರಿದ್ದರು.
ಉಪನ್ಯಾಸಕ ಸಚಿನ್‌ ನಿರೂಪಿಸಿ ದರು. ಹರ್ಷಿತಾ ವಂದಿಸಿದರು.

ಯೋಜನೆ, ಆಸಕ್ತಿ ಅಗತ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜಿಂಗ್‌ ಟ್ರಸ್ಟಿ ವಿವೇಕ್‌ ಆಳ್ವ ಮಾತನಾಡಿ, “ಜ್ಞಾನಸಂಪಾದನೆ¿ಲ್ಲಿ ವಿದ್ಯಾರ್ಥಿಗಳು ತಮಗೆ ತಾವೇ ಹಾಕಿಕೊಂಡಿರುವ ಕಟ್ಟುಪಾಡು ಗಳನ್ನು ತೆಗೆದು ಅವರಲ್ಲಿ ಅಗಾಧ ವಾದ ಜ್ಞಾನ ಪ್ರಸಾರವನ್ನು ಮಾಡು ವವರು ಉತ್ತಮ ಶಿಕ್ಷಕರಾಗಲು ಸಾಧ್ಯ. ಯಾವುದೇ ಉದ್ಯಮ ಪ್ರಾರಂಭಿಸುವಾಗ ಬೇಕಾಗಿರು ವುದು ಸರಿಯಾದ ಯೋಜನೆ, ನಿಜವಾದ ಆಸಕ್ತಿ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next