Advertisement

ಕೃಷಿಗೆ ಆದ್ಯತೆ ನೀಡಿ: ಮಹಮ್ಮದ್‌ ಮೋನು

12:47 PM Sep 19, 2017 | Team Udayavani |

ಅಂಬ್ಲಿಮೊಗರು:  ಕೃಷಿ ಸಂಸ್ಕೃತಿಯು ಅವನತ್ತಿಯತ್ತ ಸಾಗುತ್ತಿದ್ದು, ನಮ್ಮ ಆಚಾರ- ವಿಚಾರಗಳನ್ನು ಉಳಿಸುವುದರೊಂದಿಗೆ ಕೃಷಿಗೆ ಆದ್ಯತೆ ನೀಡುವ ಕಾರ್ಯ ಆಗಬೇಕು. ಈ ನಿಟ್ಟಿನಲ್ಲಿ  ಕೃಷಿ ಸಂಸ್ಕೃತಿಯನ್ನು ಬಿಂಬಿಸುವ ಕ್ರೀಡಾಕೂಟಗಳು ಯುವ ಜನರಲ್ಲಿ ಕೃಷಿಗೆ ಆಸಕ್ತಿ ಮೂಡಿಸುವ ಕಾರ್ಯ ಮಾಡಬೇಕು ಎಂದು ತಾ.ಪಂ.ಅಧ್ಯಕ್ಷ ಮಹಮ್ಮದ್‌ ಮೋನು ಅಭಿಪ್ರಾಯಪಟ್ಟರು.

Advertisement

ಅಂಬ್ಲಿಮೊಗರು ಜನಸೇವಾ ಯುವಕ ಮಂಡಲ ಹಾಗೂ ಜಿಲ್ಲಾ ಪಂಚಾಯತ್‌ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜಂಟಿ ಆಶ್ರಯದಲ್ಲಿ ಅಂಬ್ಲಿಮೊಗರು ದೋಟೆಮಾರು ಗದ್ದೆ ಯಲ್ಲಿ ನಡೆದ `ಬಲೇ ಕೆಸರ್‌ಡ್‌ ಗೊಬ್ಬುಗ’ ಕ್ರೀಡಾಕೂಟದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ತುಳುನಾಡು ಅತಿಥಿ ಗೌರವ ವೈಶಿಷ್ಟ್ಯ ಹೊಂದಿದೆ. ಎಲ್ಲ ಧರ್ಮದ ಜನರು ಒಂದಾಗಿ ಬಾಳುವ ಈ ಪ್ರದೇಶದಲ್ಲಿ ಯುವಜನರು ಸಂಘಟನೆಗಳ ಮೂಲಕ ಸಾಮಾಜಿಕ ಸೇವೆಯೊಂದಿಗೆ ಎಲ್ಲರನ್ನು ಒಗ್ಗೂಡಿಸಿ ವಿಶೇಷ ಕ್ರೀಡೆ ಆಯೋಜಿಸುವ ಕಾರ್ಯ ಶ್ಲಾಘನೀಯವಾಗಿದೆ ಎಂದರು.

ಜಿ.ಪಂ.ಸದಸ್ಯೆ ಧನಲಕ್ಷ್ಮೀ ಗಟ್ಟಿ ಅಧ್ಯಕ್ಷತೆ ವಹಿಸಿದ್ದರು. ದೇರಳಕಟ್ಟೆ ವಿದ್ಯಾರತ್ನ ಶಿಕ್ಷಣ ಸಂಸ್ಥೆಯ ನಿರ್ದೇಶಕ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು, ಅಂಬ್ಲಿಮೊಗರು ಪಡ್ಯಾರಮನೆ ಕಲ್ಲುರ್ಟಿ ಪಂಜುರ್ಲಿ ದೈವಸ್ಥಾನದ ಅಧ್ಯಕ್ಷ ದಿನೇಶ್‌ ಶೆಟ್ಟಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ನಿರ್ದೇಶಕ ಪ್ರದೀಪ್‌ ಡಿ’ಸೋಜಾ, ಉದ್ಯಮಿ ಸತೀಶ್‌ ಮುಂಚೂರು, ರಾಣಿಪುರ ಚರ್ಚ್‌ ಪಾಲನಾ ಮಂಡಳಿ ಸದಸ್ಯ ನವೀನ್‌ ಡಿ’ಸೋಜಾ, ಬಂಟರ ಸಂಘದ ಅಧ್ಯಕ್ಷ ಜಿತೇಂದ್ರ ಶೆಟ್ಟಿ ತಲಪಾಡಿಗುತ್ತು, ದಕ್ಷಿಣ ಭಾರತ ರೈಲ್ವೇ ಸಲಹಾ ಸಮಿತಿ ಸದಸ್ಯ ಚಂದ್ರಹಾಸ ಅಡ್ಯಂತಾಯ, ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಚಂದ್ರಶೇಖರ್‌ ಉಚ್ಚಿಲ್‌, ಕೆಥೋಲಿಕ್‌ ಸಭಾ ವಲಯಾಧ್ಯಕ್ಷ ಅರುಣ್‌ ಮೊಂತೆರೋ, ಅಂಬ್ಲಿಮೊಗರು ಗ್ರಾ.ಪಂ. ಅಧ್ಯಕ್ಷ ಮೊಹಮ್ಮದ್‌ ರಫೀಕ್‌, ಚಿತ್ರನಟ ಅರವಿಂದ ಬೋಳಾರ್‌, ಕೋಟ್ರಗುತ್ತು ಲಕ್ಷ್ಮೀ ನರಸಿಂಹ ದೇವಸ್ಥಾನದ ಆಡಳಿತ ಮೊಕ್ತೇಸರ ಪದ್ಮನಾಭ ರೈ, ಗ್ರಾ.ಪಂ. ಸದಸ್ಯ ದಯಾನಂದ ಶೆಟ್ಟಿ, ಯುವಕ ಮಂಡಲದ ಗೌರವ ಸಲಹೆಗಾರರಾದ ಸಂಜೀವ ಶೆಟ್ಟಿ, ಎ.ವಿಜಯ, ಹರೇಕಳ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಮುಖ್ಯ ಶಿಕ್ಷಕ ರವೀಂದ್ರ ರೈ, ಜಯಪ್ರಕಾಶ್‌ ಶೆಟ್ಟಿ ಮುನ್ನೂರು ಉಪಸ್ಥಿತರಿದ್ದರು.

ಯುವಕ ಮಂಡಲದ ಮಾಜಿ ಅಧ್ಯಕ್ಷ ಸುರೇಶ್‌ ಶೆಟ್ಟಿ ಪಡ್ಡಾಯಿಮನೆ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಅನಿಲ್‌ ಶೆಟ್ಟಿ ವಂದಿಸಿದರು. ಸದಸ್ಯರಾದ ಶ್ಯಾಮ್‌ ಸುಂದರ್‌, ಹರೀಶ್‌ ಅಂಬ್ಲಿಮೊಗರು ಹಾಗೂ ಲಕ್ಷ್ಮೀ ನಾರಾಯಣ ಹರೇಕಳ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next