Advertisement

ರಾಜ್ಯ, ತಾಲೂಕು ಸಮಗ್ರ ಅಭಿವೃದ್ಧಿಗೆ ಆದ್ಯತೆ

03:16 PM Oct 12, 2020 | Suhan S |

ಕಿಕ್ಕೇರಿ: ಟೀಕೆಗಳು ತನಗೆ ಎಚ್ಚರಿಕೆ ಗಂಟೆಯಾಗಿದೆ. ರಾಜ್ಯ, ತಾಲೂಕು ಸಮಗ್ರ ಅಭಿವೃದ್ಧಿಗೆ ಚಿಂತನೆ ನಡೆಸಿ, ಆದ್ಯತೆ ನೀಡುವುದು ಮೊದಲ ಕರ್ತವ್ಯವಾಗಿದೆ ಎಂದು ಸಚಿವ ಕೆ.ಸಿ.ನಾರಾಯಣಗೌಡ ಹೇಳಿದರು.

Advertisement

ಹೋಬಳಿಯ ಮಾರ್ಗೋನಹಳ್ಳಿ ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ನಮಗೆ ಸಿಕ್ಕಿರುವ ಶಾಸಕ, ಸಚಿವ ಸ್ಥಾನವನ್ನು ಜನರಿಗೆ ಅರ್ಪಿಸುತ್ತೇನೆ. ಜನ ಸೇವಕನಾಗಿಸಿಕ್ಕ ಅವಕಾಶವನ್ನು ಬಳಸಿಕೊಳ್ಳುತ್ತೇವೆ.5.75 ಕೋಟಿ ರೂ. ಅನುದಾನದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಆರಂಭವಾಗುತ್ತಿದೆ. ಗೋವಿಂ ದನಹಳ್ಳಿ,ಊಗಿನಹಳ್ಳಿ ಗ್ರಾಮಗಳಲ್ಲಿ ಜನರುಸಂಚಾರಕ್ಕೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಈಗ ಸತ್ಕಾರ್ಯವನ್ನು ಮಾಡಲಾಗುತ್ತಿದೆ. ಜನತೆ ಸುಲಲಿತವಾಗಿ ಸಂಚಾರ ಮಾಡಲು ಅನುಕೂಲವಾಗಿದೆ ಎಂದರು.

ಉಪ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು: ಈ ಬಾರಿ ಎರಡು ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲವು ಸಾಧಿಸಲಿದೆ. ಅಭಿವೃದ್ಧಿ ಮಂತ್ರವನ್ನು ಜನತೆಯತ್ತ ಕೊಂಡೊಯ್ಯಲಾಗಿದೆ. ಜಾಣ ಮತದಾರ ಎಂದು ಮೋಸ ಮಾಡಲಾರ. ಇನ್ನು 25 ವರ್ಷ ಮೋದಿ ಆಳ್ವಿಕೆಯ ಬಿಜೆಪಿ ಸರ್ಕಾರ ನಡೆಯಲಿದೆ. ಜಿಲ್ಲೆಯಲ್ಲಿ ಬಿಜೆಪಿ ಗಟ್ಟಿಯಾಗಿ ತಳ ಊರಬೇಕು. ಬಿಜೆಪಿ ಮಯವಾಗಬೇಕು. ಇದಕ್ಕಾಗಿ ಎಂತಹ ತ್ಯಾಗಕ್ಕೂ ಸಿದ್ಧರಾಗಿದ್ದೇವೆ ಎಂದರು.

ಟೀಕಾಕಾರರಿಗೆ ಪ್ರಗತಿಯೇ ಉತ್ತರ: ಕೋವಿಡ್ ದಿಂದ ‌ ಅಭಿವೃದ್ಧಿ ಕುಂಠಿತವಾಗಿದೆ. ಇಂತಹ ಸಂಕ ‌ಷ್ಟದಲ್ಲೂ ಅನುದಾನವನ್ನು ತಂದು ಅಭಿವೃದ್ಧಿಗೆಶ್ರಮಿಸಿದ್ದೇವೆ. ಟೀಕಾಕಾರರಿಗೆ ಇದೇ ತನ್ನ ಉತ್ತರವಾಗಿದೆ. ಮುಂದಿನ ‌ ದಿನದಲ್ಲಿ ತಾಲೂಕನ್ನು ಇಡೀ ರಾಜ್ಯದ ಜನತೆ ನೋಡ್ಕೋ ‌ಬೇಕು ಎನ್ನುವಂತೆ ಮಾಡಲು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ತಿಳಿಸಲಾಗಿದೆ. ಕೋವಿಡ್  ನಿಯಂತ್ರಣಕ್ಕಾಗಿ ಗುಂಪು ಸೇರುವುದು, ಅನಾವಶ್ಯವಾಗಿ ಸಂಚಾರ ‌ ಮಾಡುವುದು ಬೇಡ. ನೀವೇ ಕೋವಿಡ್ ವಾರಿಯರ್ಸ್‌ ಎಂದು ಭಾವಿಸಿ ಎಂದು ಮನವಿ ಮಾಡಿದರು.

ಮುಡಾ ಅಧ್ಯಕ್ಷ ಕೆ.ಶ್ರೀನಿವಾಸ್‌, ಜಿಪಂ ಮಾಜಿ ಉಪಾಧ್ಯಕ್ಷ ಕೆ.ಎಸ್‌.ಪ್ರಭಾಕರ್‌, ಮಾಜಿ ಸದಸ್ಯ ಅಘಲಯ ಮಂಜುನಾಥ್‌, ತಾಪಂ ಉಪಾಧ್ಯಕ್ಷ ರವಿ, ಮನಮುಲ್‌ ನಿರ್ದೇಶಕ ಕೆ.ಜಿ. ತಮ್ಮಣ್ಣ, ಬಿಜೆಪಿ ತಾಲೂಕು ಅಧ್ಯಕ್ಷ ಪರಮೇಶ್‌, ರೈತ ಮೋರ್ಚಾತಾಲೂಕು ಅಧ್ಯಕ್ಷ ಶಿವರಾಮೇಗೌಡ, ಒಬಿಸಿ ತಾಲೂಕು ಅಧ್ಯಕ್ಷ ಸಾರಂಗಿ ನಾಗರಾಜು, ಪುರಸಭೆ ಮಾಜಿ ಸದಸ್ಯ ಕೆ.ಆರ್‌. ನೀಲಕಂಠ, ಎಲ್‌ಡಿ ಬ್ಯಾಂಕ್‌ ನಿರ್ದೇಶಕಕುಮಾರ್‌, ಆಪ್ತಸಹಾಯಕ ಪ್ರಭು, ದಯಾನಂದ ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next