Advertisement

Mangaluru ಉನ್ನತ ಶಿಕ್ಷಣದಲ್ಲಿ ಕೌಶಲಾಭಿವೃದ್ಧಿಗೆ ಆದ್ಯತೆ : ಸಚಿವ ಡಾ| ಎಂ.ಸಿ. ಸುಧಾಕರ್‌

11:09 PM Dec 16, 2023 | Team Udayavani |

ಮಂಗಳೂರು: ವೈದ್ಯಕೀಯ ಕ್ಷೇತ್ರದಲ್ಲಿ ಕೌಶಲಾಭಿವೃದ್ಧಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಅದೇ ಮಾದರಿಯಲ್ಲಿ ಕಾಲೇಜು ಶಿಕ್ಷಣ ಇಲಾಖೆ, ತಾಂತ್ರಿಕ ಶಿಕ್ಷಣ ಇಲಾಖೆಯಲ್ಲೂ ಹೆಚ್ಚಿನ ಕೌಶಲವನ್ನು ವಿದ್ಯಾರ್ಥಿಗಳಿಂದ ಕೈಗಾರಿಕೆಗಳು ಬಯಸುತ್ತವೆ.

Advertisement

ಉನ್ನತ ಶಿಕ್ಷಣ ಇಲಾಖೆ, ಕೌಶಲಾಭಿವೃದ್ಧಿ ಇಲಾಖೆ, ಭಾರೀ ಕೈಗಾರಿಕಾ ಇಲಾಖೆ ಮತ್ತು ಐಟಿಬಿಟಿ, ಸಣ್ಣ ಕೈಗಾರಿಕೆ ಇಲಾಖೆಗಳ ಸಚಿವರೊಂದಿಗೆ ಈ ನಿಟ್ಟಿನಲ್ಲಿ ಕಳೆದ ಆರು ತಿಂಗಳಿಂದ ಚರ್ಚೆಗಳನ್ನು ನಡೆಸಲಾಗಿದೆ.

ಕೌಶಲಾಭಿವೃದ್ದಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಉದ್ದೇಶದಿಂದ ಮುಂದಿನ ದಿನಗಳಲ್ಲಿ ಕೆಲವೊಂದು ಬದಲಾವಣೆಗಳನ್ನು ತರಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ| ಎಂ.ಸಿ. ಸುಧಾಕರ್‌ ಹೇಳಿದರು.

ಮಂಗಳೂರಿನಲ್ಲಿ ಸುದ್ದಿಗಾರ ರೊಂದಿಗೆ ಅವರು ಮಾತನಾಡಿ, ಪಿಯುಸಿ ಅನುತ್ತೀರ್ಣರಾದವರು, ಐಟಿಐ, ಡಿಪ್ಲೊಮಾ ಓದಿರುವವರು, ಎಂಜಿನಿಯರಿಂಗ್‌ ಪದವಿ ಪಡೆದು ಉದ್ಯೋಗ ಇಲ್ಲದವರಿಗೆ ಕೈಗಾರಿಕೆ ಜತೆ ಒಪ್ಪಂದ ಮಾಡಿಕೊಂಡು ಕೌಶಲಾಭಿವೃದ್ಧಿ ಕೇಂದ್ರಗಳನ್ನು ಎಲ್ಲ ಭಾಗದಲ್ಲೂ ತೆರೆಯಬೇಕು ಎನ್ನುವ ಉದ್ದೇಶವಿದೆ. ಸದ್ಯದಲ್ಲೆ ಈ ಕುರಿತಂತೆ ಮತ್ತೆ ಕೈಗಾರಿಕೆಗಳ ಜತೆ ಸಭೆ ಮಾಡಲಾಗುವುದು. ಕಿರು ಅವಧಿಯ ತರಬೇತಿಗಳನ್ನು ಆಯೋಜಿಸಿ, ನೇರವಾಗಿ ಕೈಗಾರಿಕೆಗಳಲ್ಲಿ ಉದ್ಯೋಗ ಸಿಗುವಂತಹ ಅವಕಾಶ ದೊರೆಯಲಿದೆ ಎಂದರು.

ಎಸ್‌ಇಪಿ ಹಂತ
ಹಂತವಾಗಿ ಅನುಷ್ಠಾನ
ರಾಜ್ಯ ಶಿಕ್ಷಣ ನೀತಿ (ಎಸ್‌ಇಪಿ) ಜಾರಿಗೆ ಸಂಬಂಧಿಸಿದಂತೆ ಸಮಿತಿ ರಚಿಸಲಾಗಿದ್ದು, ಹಲವಾರು ಜಿಲ್ಲೆಗಳಿಗೆ ಸಮಿತಿ ಭೇಟಿ ನೀಡಿ ವಿವಿಧ ಶಿಕ್ಷಣ ಸಂಸ್ಥೆಗಳು, ಶೈಕ್ಷಣಿಕ ಪ್ರಮುಖರು, ಶಿಕ್ಷಕರು, ಪ್ರಾಧ್ಯಾಪಕರು, ಸಾರ್ವಜನಿಕರ ಜತೆಗೆ ಸಭೆ ನಡೆಸುತ್ತಿದ್ದಾರೆ. ಎಲ್ಲರನ್ನೂ ಒಳಗೊಂಡಂತೆ ಸಮಗ್ರ ಶಿಕ್ಷಣ ನೀತಿಯನ್ನು ಜಾರಿಗೊಳಿಸಲಾಗುವುದು. ಈ ನಿಟ್ಟಿನಲ್ಲಿ ಸಮಿತಿಗೆ ವರದಿ ನೀಡಲು ಫೆ.28ರ ವರೆಗೆ ಕಾಲಾವಕಾಶ ನೀಡಲಾಗಿದೆ. ಬಳಿಕ ವಿಧಾನ ಸಭೆ, ವಿಧಾನ ಪರಿಷತ್‌ನಲ್ಲಿ ಚರ್ಚೆ ನಡೆಸಲಾಗುವುದು. ಏಕಾಏಕಿ ಜಾರಿಗೊಳಿಸಲಾಗುವುದಿಲ್ಲ. ನಮ್ಮಲ್ಲಿರುವ ಮೂಲ ಸೌಕರ್ಯಗಳಿಗೆ ಅನುಗುಣವಾಗಿ ಹಂತ ಹಂತವಾಗಿ ಅನುಷ್ಠಾನಗೊಳಿಸಲಾಗುವುದು ಎಂದರು.

Advertisement

ಎನ್‌ಇಪಿಯಿಂದ ಸಮಸ್ಯೆ
ಎನ್‌ಇಪಿಯಲ್ಲಿರುವ ವಿಚಾರ ಗಳನ್ನು ರಾಜ್ಯದಲ್ಲಿ ಎಷ್ಟರ ಮಟ್ಟಿಗೆ ಅನುಷ್ಠಾನ ಮಾಡಲು ಸಾಧ್ಯವಿದೆ. ಅವಲೋಕಿಸದೆ ಏಕಾಏಕಿ ಜಾರಿಗೆ ತಂದಿರುವುದರಿಂದ ಈಗ ಹಲವು ರೀತಿಯಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಎನ್‌ಇಪಿ ನಮಗೆ ಸೂಕ್ತ ಅಲ್ಲ ಎನ್ನುವುದನ್ನು ವಿಧಾನ ಪರಿಷತ್‌ನಲ್ಲಿ ವಿವರವಾಗಿ ತಿಳಿಸಿದ್ದೇನೆ. ಎನ್‌ಇಪಿ ಖಾಸಗಿ ವಿವಿಗಳಿಗೆ ಸೂಕ್ತ ವಿನಃ ಸರಕಾರಿ ವ್ಯವಸ್ಥೆಯಲ್ಲಿ ಅನುಷ್ಠಾನ ಸಾಧ್ಯವಿಲ್ಲ. ಇದರಿಂದ ಬಡ ಮಕ್ಕಳಿಗೆ ತೊಂದರೆಯಾಗುವುದೇ ಹೆಚ್ಚು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next