Advertisement
ಸರಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ ವಿದ್ಯಾರ್ಥಿಗಳನ್ನು ಶೈಕ್ಷಣಿಕ ಚಟುವಟಿಕೆ (ಪಠ್ಯ/ ಪಠ್ಯೇತರ) ಹೊರತುಪಡಿಸಿ ಸಂಘ-ಸಂಸ್ಥೆಗಳ ಕಾರ್ಯಕ್ರಮ ಅಥವಾ ಇನ್ಯಾವುದೋ ಖಾಸಗಿ ಸಮಾರಂಭ, ರಾಜಕೀಯ ಪಕ್ಷಗಳ ಸಭೆ, ಸಮಾವೇಶ ಸಹಿತ ಯಾವುದೇ ಕಾರ್ಯಕ್ರಮಕ್ಕೂ ಶಾಲಾ ದಿನಗಳಲ್ಲಿ ಕಳಿಸುವಂತಿಲ್ಲ ಎಂಬ ಸ್ಪಷ್ಟ ನಿರ್ದೇಶನವಿದೆ.
Related Articles
ಶಾಲಾವರಣವನ್ನು ಶಾಲಾ ಮಕ್ಕಳ ದೈನಂದಿನ ಪಾಠ, ಪ್ರವಚನ, ಪಠ್ಯೇತರ ಚಟುವಟಿಕೆಗಳು, ಕ್ರೀಡೆ, ಆಟೋಟ, ಶಾರೀರಿಕ ಶಿಕ್ಷಣ, ವ್ಯಾಯಾಮ ಮೊದಲಾದ ಚುಟವಟಿಕೆಗಳಿಗೆ ಮಾತ್ರ ಬಳಸಬೇಕು. ಶಾಲಾ ಮೈದಾನ ಅಥವಾ ಕೊಠಡಿಗಳನ್ನು ಶಿಕ್ಷಣಕ್ಕೆ ಹೊರತಾದ ಚಟುವಟಿಕೆಗಳಿಗೆ ಸರಕಾರ ಅಥವಾ ಇಲಾಖೆಯ ಅನುಮತಿ ಇಲ್ಲದೇ ಬಳಸುವಂತಿಲ್ಲ ಹಾಗೂ ಶಾಲಾ ಹಂತದಲ್ಲಿ ಇದಕ್ಕೆ ಅನುಮತಿ ನೀಡ ಬಾರದು. ಸರಕಾರದ ನಿಯಮ ಮೀರಿ ಅನುಮತಿ ನೀಡಿದಲ್ಲಿ ಸಂಬಂಧಪಟ್ಟ ಶಾಲೆಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ.
Advertisement
ಪೊಲೀಸರಿಗೆ ಮಾಹಿತಿ ನೀಡಿಶಾಲೆಗೆ ಸಂಬಂಧವಿರದ ಯಾವುದೇ ವ್ಯಕ್ತಿಗಳು ಶಾಲಾವರಣದಲ್ಲಿ ಅನಗತ್ಯವಾಗಿ ಸುತ್ತಾಡುತ್ತಿರುವುದು ಕಂಡುಬಂದಲ್ಲಿ ಅಥವಾ ಯಾವುದೇ ವ್ಯಕ್ತಿಗಳಿಂದ ಶಾಲೆಯ ಸುರಕ್ಷೆಗೆ ಭಂಗ ತರುವ ಘಟನೆ ನಡೆದರೆ, ಶೈಕ್ಷಣಿಕ ಚಟುವಟಿಕೆಗೆ ಅಡ್ಡಿ ಪಡಿಸಿರುವುದು ಕಂಡು ಬಂದಲ್ಲಿ ತತ್‌ಕ್ಷಣವೇ ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳು/ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಶಾಲಾ ಮುಖ್ಯಸ್ಥರು, ಉಸ್ತುವಾರಿ ಅಧಿಕಾರಿ, ಸಿಬಂದಿಗೆ ಇಲಾಖೆಯಿಂದ ನಿರ್ದೇಶಿಸಲಾಗಿದೆ.