Advertisement

ಆರೋಗ್ಯ, ಶಿಕ್ಷಣ ಕ್ಷೇತ್ರಕ್ಕೆ ಆದ್ಯತೆ: ಶಾಸಕ

04:48 AM Jun 11, 2020 | Lakshmi GovindaRaj |

ಗುಂಡ್ಲುಪೇಟೆ: ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರ ಹಗಲಿರುಳು ಶ್ರಮಿಸುತ್ತಿದೆ ಎಂದು ಶಾಸಕ ನಿರಂಜನಕುಮಾರ್‌ ಹೇಳಿದರು. ತಾಲೂಕಿನ ಬೆಳಚಲವಾಡಿ ಗ್ರಾಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಮೊದಲನೇ  ವರ್ಷವನ್ನು ಯಶಸ್ವಿ ಯಾಗಿ ಪೂರೈಸಿ ಎರಡನೇ ವರ್ಷಕ್ಕೆ ಹತ್ತು ಹಲವು ಜನ ಪ್ರಿಯ ಯೋಜನೆಗಳನ್ನು ನೀಡುತ್ತಿರುವ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಕರಪತ್ರ ವಿತರಿಸಿ ಮಾತನಾಡಿದರು.

Advertisement

ಅಭಿವೃದ್ಧಿ ಕಾರ್ಯ: ಪ್ರಧಾನಿ ಮೋದಿಯವರು ಈಗಾಗಲೇ ಹತ್ತು ಹಲವು ಕ್ಷೇತ್ರದಲ್ಲಿ ತನ್ನದೇ ಆದ ಯಶಸ್ಸು ಕಂಡಿದ್ದು, ಶಿಕ್ಷಣ ಹಾಗೂ ಆರೋಗ್ಯ ವಿಚಾರದಲ್ಲಿ ಅತ್ಯಂತ ಹೆಚ್ಚಿನ ಶ್ರಮ ವಹಿಸುತ್ತಿದ್ದಾರೆ. ಒಂದು ವರ್ಷ ದಲ್ಲಿ   ಡಿರುವ ಅಭಿವೃದ್ಧಿ ಕಾರ್ಯ ಹಾಗೂ ಯೋಜ ನೆಗಳನ್ನು ಜನತೆಗೆ ತಿಳಿಸಲು ಮನೆ ಮನೆಗೂ ಕರಪತ್ರ ದೊಂದಿಗೆ ಮಾಹಿತಿ ನೀಡುತ್ತಿರುವುದಾಗಿ ತಿಳಿಸಿದರು.

ಅಭಿನಂದನೆ: ಕರ್ನಾಟಕದಿಂದ ರಾಜ್ಯಸಭೆಗೆ ಬಿಜೆಪಿ ಯಿಂದ ಆಯ್ಕೆಯಾದ ಈರಣ್ಣ  ಕಡಾಡಿ ಮತ್ತು ಅಶೋಕ್‌ ಗಸ್ತಿ ಅವರಿಗೆ ಶಾಸಕ ನಿರಂಜನಕುಮಾರ್‌ ಅಭಿನಂದನೆ ತಿಳಿಸಿದರು. ನಮ್ಮ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತರಿಗೂ ಸಮಾನ ಅವಕಾಶವಿದೆ ಎಂಬುದಕ್ಕೆ ಇವರ ಆಯ್ಕೆ ನಿದರ್ಶನವಾಗಿದೆ. ಅಶೋಕಗಸ್ತಿ ಅವರನ್ನು ಆಯ್ಕೆ ಮಾಡುವುದರೊಂದಿಗೆ ಸಣ್ಣ ಸಮುದಾಯಗಳ ಪರವಾಗಿದ್ದೇವೆ. ಎಲ್ಲಾ ವರ್ಗದ ಜನತೆಯ ಆಶೋತ್ತರಗಳಿಗೆ ಸ್ಪಂದಿಸುತ್ತೇವೆ ಎಂಬುದನ್ನು ತಿಳಿಯಬಹುದು ಎಂದರು.

ಈ ಸಂದರ್ಭದಲ್ಲಿ ಮಂಡಲಾಧ್ಯಕ್ಷ ದೊಡ್ಡಹುಂಡಿ ಜಗದೀಶ್‌, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಹಂಗಳಪ್ರಣಯ್‌, ಮುಖಂಡರಾದ ಗೋವಿಂದ ರಾಜನ್‌, ನಾರಾಯಣ ಸ್ವಾಮಿ, ರಾಜಶೇಖರಪ್ಪ, ಮಂಜುನಾಥ್‌, ಬಸವಣ್ಣ,  ಮಲ್ಲಿಕಾರ್ಜುನ್‌ ಮುಖಂಡರು ಮತ್ತು ಕಾರ್ಯಕರ್ತರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next