Advertisement

ನೂತನ ಜವಳಿ ನೀತಿಯಲ್ಲಿ ಕೈಮಗ್ಗ ನೇಕಾರಿಕೆಗೆ ಆದ್ಯತೆ: ಶಿವಾನಂದ ಪಾಟೀಲ್‌

12:16 AM Dec 16, 2023 | Team Udayavani |

ಬೆಳಗಾವಿ: ನೂತನ ಜವಳಿ ನೀತಿ -2024ರಲ್ಲಿ ರಾಜ್ಯದ ಕೈಮಗ್ಗ ನೇಕಾರರಿಗೆ ಆದ್ಯತೆ ನೀಡಲಾಗುವುದು ಎಂದು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಸಚಿವ ಶಿವಾನಂದ ಪಾಟೀಲ್‌ ಹೇಳಿದರು.

Advertisement

ವಿಧಾನಸಭೆ ಪ್ರಶ್ನೋತ್ತರ ಕಲಾಪದಲ್ಲಿ ಶಾಸಕ ಸಿ.ಬಿ.ಸುರೇಶ ಬಾಬು ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಗುಜರಾತ್‌ ಹಾಗೂ ತಮಿಳುನಾಡು ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಕೈಮಗ್ಗ ನೇಕಾರರಿಗೆ ಹೆಚ್ಚಿನ ಸೌಲಭ್ಯ ಇಲ್ಲ. ಆ ರಾಜ್ಯಗಳ ಕೈ ಮಗ್ಗ ನೇಕಾರರ ಉತ್ಪನ್ನಗಳಿಗೆ ರಾಜ್ಯದ ಕೈಮಗ್ಗ ನೇಕಾರರು ಪೈಪೋಟಿ ನೀಡದ ಸ್ಥಿತಿಯಲ್ಲಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡೇ 2024ರಲ್ಲಿ ರಚನೆಯಾಗುವ ನೂತನ ಜವಳಿ ನೀತಿಯಲ್ಲಿ ಕೈಮಗ್ಗ ಉತ್ತೇಜನಕ್ಕೆ ಹೆಚ್ಚಿನ ಒತ್ತು ನೀಡಲಾಗು ವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next