ಮೈಸೂರು: ಜಿಲ್ಲೆಯಲ್ಲಿ 2020-21 ಸಾಲಿನಲ್ಲಿ ವಿವಿಧ ಕಾರ್ಯಕ್ರಮಗಳಿಗೆ 450.14 ಕೋಟಿ ರೂ. ಅನುದಾನದಲ್ಲಿ ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಹಣ ಮೀಸಲಿಡ ಲಾಗಿದೆ. ಜಿಲ್ಲಾ ಪಂಚಾಯಿತಿಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಅಧ್ಯಕ್ಷೆ ಪರಿಮಳಾ ಶ್ಯಾಂ ವಾರ್ಷಿಕ ಅನುದಾನದ ಕ್ರಿಯಾ ಯೋ ಜನೆ ಮಂಡಿಸಿದರು.
ಜಿಲ್ಲೆಗೆ ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ 14.23 ಕೋಟಿ ಅಂದರೆ ಶೇ. 3.26 ರಷ್ಟು ಹೆಚ್ಚುವರಿ ಮೊತ್ತ ನಿಗದಿಪಡಿಸಿದ್ದು, 2019-20ರ ಸಾಲಿನಲ್ಲಿ 435.91 ಕೋಟಿ ಅನುದಾನ ಮೀಸಲಿಡ ಲಾಗಿತ್ತು ಎಂದರು.
ನರೇಗಾ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಜಿಲ್ಲೆಯಲ್ಲಿ 2020-21ನೇ ಸಾಲಿನಲ್ಲಿ 30 ಲಕ್ಷ ಮಾನವ ದಿನಗಳನ್ನು ಸೃಜಿಸುವ ಗುರಿ ಇದೆ. ಗ್ರಾಮ ಪಂಚಾಯಿತಿಗಳಿಂದ ಕ್ರಿಯಾ ಯೋಜನೆ ತಯಾರಿಸಿ ಅನುಮೋದನೆ ನೀಡ ಲಾಗಿದೆ ಎಂದು ಹೇಳಿದರು.
ಕೋರಂ ಅಭಾವ: ಬಜೆಟ್ ಮಂಡನೆಗೆ ಕೋರಂ ಅಭಾವ ಉಂಟಾಯಿತು. 4 ಸದಸ್ಯರ ಅಭಾವ ಉಂಟಾದ ಹಿನ್ನೆಲೆಯಲ್ಲಿ ಸಭೆ ಆರಂಭ ತಡವಾಯಿತು. ಸಭೆಯಲ್ಲಿ ಜಿಪಂ ಉಪಾಧ್ಯಕ್ಷೆ ಗೌರಮ್ಮ, ಸಿಇಒ ಪ್ರಶಾಂತ್ ಕುಮಾರ್ ಮಿಶ್ರಾ, ಯೋಜನಾಧಿಕಾರಿ ಪದ್ಮಶೇಖರ್ ಪಾಂಡೆ ಇದ್ದರು.
ಶಿಕ್ಷಣ ಕ್ಷೇತ್ರಕ್ಕೆ: ಶಿಕ್ಷಣ ಇಲಾಖೆಗೆ ವೇತನ ಮತ್ತು ವೇತನಯೇತರ ವೆಚ್ಚಕ್ಕಾಗಿ 163.76 ಕೋಟಿ ಮೀಸ ಲಿಡಲಾಗಿದೆ. 2019-20ನೇ ಸಾಲಿನಲ್ಲಿ ಮೈಸೂರು ಜಿಲ್ಲೆಗೆ 5 ಕರ್ನಾಟಕ ಪಬ್ಲಿಕ್ ಶಾಲೆಗಳು ಮಂಜೂರಾ ಗಿದ್ದು, ಮೂಲಸೌಲಭ್ಯ ಒದಗಿಸಲು 25 ಲಕ್ಷ ರೂ. ಬಿಡುಗಡೆಯಾಗಿದೆ ಎಂದು ವಿವರಿಸಿದರು.
ಇನ್ನು ಜಿಲ್ಲೆಯ ವಿವಿಧ ಆರೋಗ್ಯ ಕೇಂದ್ರಗಳ ದುರಸ್ತಿಗೆ 1.35 ಕೋಟಿ ಮೊತ್ತ ತೆಗೆದಿರಿಸಲಾಗಿದೆ. ಇತರ ವೆಚ್ಚಕ್ಕಾಗಿ 76 ಲಕ್ಷ ಮೀಸಲಿಡಲಾಗಿದೆ ಎಂದು ಮಾಹಿತಿ ನೀಡಿದರು.