Advertisement

ನಗರದ 23 ವಾರ್ಡ್‌ಗಳ ಸಮಗ್ರ ಅಭಿವೃದ್ಧಿಗೆ ಆದ್ಯತೆ

05:09 PM Dec 18, 2022 | Team Udayavani |

ದೇವನಹಳ್ಳಿ: ಪಟ್ಟಣದ 23 ವಾರ್ಡುಗಳ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದೆ ಎಂದು ಶಾಸಕ ಎಲ್‌.ಎನ್‌. ನಾರಾಯಣಸ್ವಾಮಿ ತಿಳಿಸಿದರು.

Advertisement

ಪಟ್ಟಣದ ಪುರಸಭೆಯ ಮೂರನೇ ವಾರ್ಡ್‌ನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, 15ನೇ ಹಣಕಾಸು ಯೋಜನೆಯಲ್ಲಿ ಬೋರ್‌ವೆಲ್‌ನ ಪಂಪ್‌, ಮೋಟಾರ್‌ ಅಳವಡಿಕೆ, ಚರಂಡಿ ಕಾಮಗಾರಿ, ಕಾಂಕ್ರೀಟ್‌ ರಸ್ತೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯ ಮಾಡಲಾಗುತ್ತಿದೆ. 1 ಕೋಟಿ 76ಲಕ್ಷ ರೂ. ವೆಚ್ಚದ ಕಾಮಗಾರಿಗಳಿಗೆ ಪುರಸಭೆಯಲ್ಲಿ ಅನುಮೋದನೆ ಪಡೆದು ಕಾಮಗಾರಿಗಳನ್ನು ನಡೆಸುತ್ತಿದ್ದೇವೆ ಎಂದರು.

ಪಟ್ಟಣ ಪ್ರದೇಶಗಳಿಗೆ ತೆರಿಗೆ ಹಣ ಸಂದಾಯವಾಗುತ್ತದೆ. ಗ್ರಾಮೀಣ ಪ್ರದೇಶಗಳಿಗೆ ತೆರಿಗೆ ಹಣದ ಕೊರತೆ ಇದೆ. ಈಗಾಗಲೇ 10ಕೋಟಿ ರೂ. ವೆಚ್ಚದ ನಗರೋತ್ಥಾನ ಅನುದಾನ ಬಿಡುಗಡೆಯಾಗುತ್ತಿದ್ದು, ಟೆಂಡರ್‌ ಪ್ರಕ್ರಿಯೆಯಲ್ಲಿದೆ. ವಿಶೇಷ ಅನುದಾನ ದಲ್ಲಿ 3 ಕೋಟಿ ನೀಡಲಾಗಿದೆ. ವಿಜಯಪುರ ಪಟ್ಟಣಕ್ಕೂ 3 ಕೋಟಿ ವಿಶೇಷ ಅನುದಾನವನ್ನು ನೀಡಲಾಗಿದೆ ಎಂದರು.

ಶೀಘ್ರವಾಗಿ ಕಾಮಗಾರಿ ಪ್ರಾರಂಭಿಸಿ, ಗುಣ ಮಟ್ಟದ ರಸ್ತೆಗಳನ್ನು ಸಾರ್ವಜನಿಕ ಉಪಯೋಗಕ್ಕೆ ನೀಡಬೇಕು ಎಂದು ಈಗಾಗಲೇ ಗುತ್ತಿಗೆದಾರರಿಗೆ ತಿಳಿಸಲಾಗಿದೆ. ಪುರಸಭಾ ಸದಸ್ಯರು ಮತ್ತು ವಾರ್ಡ್‌ ನ ಸದಸ್ಯರು ನಿಂತು ಗುಣಮಟ್ಟದ ಕಾಮಗಾರಿಯನ್ನು ಮಾಡಿಸಬೇಕು. ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು. ಪಟ್ಟಣದಲ್ಲಿ ಸಾಕಷ್ಟು ರಸ್ತೆಗಳು ಗುಂಡಿ ಬಿದ್ದಿದ್ದವು. ಲಕ್ಷದೀಪೋತ್ಸವ ಸಂದರ್ಭದಲ್ಲಿ ರಸ್ತೆಗಳಿಗೆ ಪ್ಯಾಚ್‌ ವರ್ಕ್‌ ಮಾಡಲಾಗಿದೆ. ಎರಡು ಮೂರು ಬಾರಿ ಸದನದಲ್ಲಿ ಪಟ್ಟಣದ ಹೆದ್ದಾರಿಗಳಲ್ಲಿ ಗುಂಡಿ ಬಿದ್ದಿರುವ ಬಗ್ಗೆ ಚರ್ಚೆ ಮಾಡಿದ್ದೇನೆ. ಸರ್ಕಾರ ಸರಿಯಾದ ರೀತಿ ಸ್ಪಂದಿಸಿಲ್ಲ. ಬೆಳಗಾವಿಯ ವಿಧಾನಮಂಡಲದ ಅಧಿವೇಶನದಲ್ಲಿ ರಸ್ತೆಯ ಗುಂಡಿಗಳ ಸಂಬಂಧ ಪಟ್ಟಂತೆ ಸರ್ಕಾರದ ಗಮನಕ್ಕೆ ತಂದು ಚರ್ಚೆ ನಡೆಸುತ್ತೇನೆ ಎಂದರು.

ಗುಣಮಟ್ಟಕ್ಕೆ ಆದ್ಯತೆ ನೀಡಿ: ಪಟ್ಟಣದಲ್ಲಿ ನಡೆಯುವ ಎಲ್ಲಾ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು. ಗುತ್ತಿಗೆದಾರರು ಗುಣ ಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಕಾಂಕ್ರೀಟ್‌ ರಸ್ತೆ, ಡಾಂಬರು ರಸ್ತೆ, ಪೈಪ್‌ ಲೈನ್‌ ನಿರ್ಮಾಣ ಕಾಮಗಾರಿ, ಚರಂಡಿ ಇತರೆ ಎಲ್ಲಾ ಕೆಲಸಗಳು ಗುಣಮಟ್ಟದಿಂದ ಇರಬೇಕು. ಗುಣಮಟ್ಟದಲ್ಲಿ ಯಾವುದೇ ರಾಜಿ ಆಗುವುದಿಲ್ಲ ಎಂದರು.

Advertisement

ಪುರಸಭಾ ಅಧ್ಯಕ್ಷೆ ಗೋಪಮ್ಮ, ಉಪಾಧ್ಯಕ್ಷೆ ಗೀತಾ, ಸ್ಥಾಯಿಸಮಿತಿ ಅಧ್ಯಕ್ಷ ಎಸ್‌.ಸಿ. ಚಂದ್ರಪ್ಪ, ಪುರಸಭಾ ಮುಖ್ಯಾಧಿಕಾರಿ ದೊಡ್ಡಮಲವಯ್ಯ, ಪುರಸಭಾ ಸದಸ್ಯ ಎನ್‌.ರಘು, ಜಿ.ಎ.ರವೀಂದ್ರ, ಲೀಲಾವತಿ, ಕೋಡಿಮಂಚೇನಹಳ್ಳಿ ನಾಗೇಶ್‌, ಬಾಂಬೆ ನಾರಾಯಣಸ್ವಾಮಿ, ವೇಣುಗೋಪಾಲ್‌, ನಾಮಿನಿ ಪುರಸಭಾ ಸದಸ್ಯ ಗೋಪಾಲಕೃಷ್ಣ, ಮಂಜುಳಾ, ಪುನೀತ, ನಾಗೇಶ್‌, ಮಧುಸೂದನ್‌, ಮಾಜಿ ಪುರಸಭಾ ಸದಸ್ಯ ಬಿ.ದೇವರಾಜ್‌, ಎಂ. ಕುಮಾರ್‌, ಎಲೆ ಅಂಗಡಿ ಶಶಿಕುಮಾರ್‌, ಅಂಗಡಿ ಜಯರಾಮ್‌, ಟೌನ ಜೆಡಿಎಸ್‌ ಅಧ್ಯಕ್ಷ ಮುನಿ ನಂಜಪ್ಪ, ಆರ್‌.ಭರತ್‌ ಕುಮಾರ್‌, ಮುಖಂಡ ರೇಣುಕುಮಾರ್‌, ಶಿವಕುಮಾರ್‌ ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next