Advertisement

ಗ್ರಾಮಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿ

04:27 PM Apr 28, 2020 | mahesh |

ಮಧುಗಿರಿ: ಕ್ಷೇತ್ರದಲ್ಲಿ ಕೋವಿಡ್ ಯದ್ಧದ ಹೋರಾಟದಲ್ಲಿ ಪಿಡಿಒಗಳ ಪಾತ್ರ ಮಹತ್ವದ್ದಾಗಿದ್ದು, ಎಲ್ಲರೂ ಒಟ್ಟಾಗಿ ಹೋರಾಡೋಣ ಎಂದು ಶಾಸಕ ಎಂ.ವಿ.ವೀರ ಭದ್ರಯ್ಯ ಪಿಡಿಒಗಳಿಗೆ ಆತ್ಮವಿಶ್ವಾಸ ತುಂಬಿದರು. ಪಟ್ಟಣದ ತಾಪಂನಲ್ಲಿ ನಡೆದ ಪಿಡಿಒಗಳ ಸಭೆಯಲ್ಲಿ ಮಾತನಾಡಿ, ಗ್ರಾಮಗಳಲ್ಲಿ ಸ್ವಚ್ಛತೆಗೆ ಹಾಗೂ ಕುಡಿವ ನೀರಿಗೆ ಆದ್ಯತೆ ನೀಡಿ. 14ನೇ ಹಣಕಾಸು ಅನುದಾನ ಸಂಪೂರ್ಣ ಕೋವಿಡ್ ವಿರುದ್ಧ ಬಳಕೆಯಾಗಲಿ.

Advertisement

ನೂತನ ಬೋರ್‌ವೆಲ್‌ ಬದಲು ದಾಖಲೆ ಪಡೆದು ಖಾಸಗಿಯಾಗಿ ನೀರು ಪಡೆಯಿರಿ. ಈಗಾಗಲೇ ಮಾಸ್ಕ್, ಸ್ಯಾನಿ ಟೈಸರ್‌ ನೀಡಿದ್ದು, ಸಾಮಾಜಿಕ ಅಂತರ ಕಾಪಾಡಿ. 14 ಗ್ರಾಮಗಳಲ್ಲಿ ಕುಡಿವ ನೀರಿಗೆ ಸಮಸ್ಯೆಯಿದ್ದು, ಕಾರ್ಡ್‌ ಇಲ್ಲದಿದ್ದರೂ ಪಡಿತರ ವಿತರಣೆಗೆ ಕ್ರಮವಹಿಸಿ ಎಂದರು. ನೀರಿನ ಸಮಸ್ಯೆಗೆ ಹಣದ ಕೊರತೆಯಿಲ್ಲ. ಕೆಲವು ಕಡೆ ನಿರಂತರ ಜ್ಯೋತಿ ವಿದ್ಯುತ್‌ಗೆ ಬೇಡಿಕೆಯಿದ್ದು, ಸರಿಪಡಿಸಲು ಬೆಸ್ಕಾಂಗೆ ಸೂಚಿಸಿದರು. ಸರ್ಕಾರ ಟ್ಯಾಂಕರ್‌ ನೀರಿಗೆ 625 ರೂ. ನಿಗದಿ ಮಾಡಿದ್ದು, ಯಾರೂ ಮುಂದೆ ಬರುತ್ತಿಲ್ಲ ಎಂದಾಗ ಉಳಿದ ಹೆಚ್ಚುವರಿ 150 ರೂ. ನನ್ನ ಕಿಸೆಯಿಂದಲೇ ನೀಡುತ್ತೇನೆ ದಾಖಲೆಯಿಟ್ಟು ನೀರು ಒದಗಿಸಿ ಎಂದು ತಿಳಿಸಿದರು.

ಮೇ ತಿಂಗಳಲ್ಲಿ ಹೇಮಾವತಿ ಜಲಾಶಯದಿಂದ ತಾಲೂಕಿಗೆ ಮತ್ತೂಂದು ಸುತ್ತಿನಲ್ಲಿ ನೀರು ಹರಿಯಲಿದೆ. ನೀರಿನ ಅನುದಾನ 25 ಲಕ್ಷವಿದ್ದು, ಬೇಗ ಬಿಡುಗಡೆ ಮಾಡಲು ತಹಶೀಲ್ದಾರ್‌ಗೆ ಸೂಚಿಸಿದರು. 35 ಆರ್‌ಒ ಪ್ಲಾಂಟ್‌ಗಳು ದುಸ್ಥಿತಿಯಲ್ಲಿದ್ದು, ಹಣ ಪಡೆದ ಗುತ್ತಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ ಗ್ರಾಪಂ ವಶಕ್ಕೆ ಪಡೆಯುವಂತೆ ಸೂಚಿಸಿದರು. ಪುರವರ ಹೋಬಳಿ ಕ್ಷೇತ್ರಕ್ಕೆ ಸೇರಿಲ್ಲವಾದರೂ 4 ಕೊಳವೆಬಾವಿ ನೀಡಿದ್ದು, ರಸ್ತೆ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದೆ ಎಂದು ಹೇಳಿದರು.

ತಹಶೀಲ್ದಾರ್‌ ಡಾ.ವಿಶ್ವನಾಥ್‌, ಇಒ ದೊಡ್ಡಸಿದ್ದಯ್ಯ, ಸದಸ್ಯ ನಾಗಭೂಷಣ್‌, ಮುಖ್ಯಾಧಿಕಾರಿ ಅಮರ ನಾರಾಯಣ್‌, ಆಹಾರ ಶಿರಸ್ತೇದಾರ್‌ ಗಣೇಶ್‌, ಬೆಸ್ಕಾಂ ಇಇ ಹರೀಶ್‌, ಎಇಇ ಕೃಷ್ಣಮೂರ್ತಿ ಹಾಗೂ 33 ಗ್ರಾಪಂಗಳ ಪಿಡಿಒಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next