Advertisement

Politics: ಸಂಸದರ ವಿದೇಶಿ ಆತಿಥ್ಯಕ್ಕೆ ಪೂರ್ವಾನುಮತಿ ಕಡ್ಡಾಯ

10:33 PM Nov 30, 2023 | Team Udayavani |

ನವದೆಹಲಿ: ಸಂಸತ್‌ ಸದಸ್ಯರು ವಿದೇಶಗಳಿಗೆ ಖಾಸಗಿ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ವಿದೇಶಿ ಆತಿಥ್ಯಗಳನ್ನು ಸ್ವೀಕರಿಸುವಾಗ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಗಮನಿಸಿರಬೇಕು ಹಾಗೂ ಕೇಂದ್ರ ಸರ್ಕಾರದಿಂದ ಪೂರ್ವಾನುಮತಿ ಪಡೆದಿರಬೇಕೆಂದು ಗುರುವಾರ ರಾಜ್ಯಸಭೆ ಕಾರ್ಯಾಲಯ ಆದೇಶ ಹೊರಡಿಸಿದೆ.

Advertisement

ಅದರಂತೆ, ಕರ್ತವ್ಯಕ್ಕೆ ಅಡ್ಡಿಯಾಗುವ ಯಾವುದೇ ಉಡುಗೊರೆಗಳನ್ನು ಸ್ವೀಕರಿಸುವಂತಿಲ್ಲ. ಸಂಸದರಿಗೆ ವಿದೇಶಗಳಿಂದ ಬರುವ ಯಾವುದೇ ಆಹ್ವಾನಗಳಿದ್ದರೂ ಅವೆಲ್ಲವೂ ಭಾರತದ ವಿದೇಶಾಂಗ ಇಲಾಖೆಯ ಗಮನಕ್ಕೆ ಬರಲೇಬೇಕು. ವಿದೇಶಕ್ಕೆ ಭೇಟಿ ನೀಡುವಾಗ, ಪ್ರಯಾಣಕ್ಕೂ 2 ವಾರ ಮುಂಚೆಯೇ ಗೃಹ ಸಚಿವಾಲಯಕ್ಕೆ ಅರ್ಜಿ ತಲುಪಬೇಕು. ಆತಿಥ್ಯ ಸ್ವೀಕರಿಸುವ ಮೊದಲೇ ಆ ಸಂಸ್ಥೆಯ ಬಗ್ಗೆ ಮಾಹಿತಿ ನೀಡಿ ಸಂಸದರು ರುಜುವಾತು ಪಡಿಸಬೇಕು. ಸಂಸತ್ತಿಗೆ ಅಪಖ್ಯಾತಿ ತರುವ, ವಿಶ್ವಾಸರ್ಹಾತೆ ಮೇಲೆ ಪರಿಣಾಮ ಬೀರುವ ಯಾವುದೇ ಕೆಲಸಗಳನ್ನೂ ಮಾಡಬಾರದು ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next