Advertisement

Gujarat; ರೇಪ್‌ ಪ್ರತಿರೋಧಿಸಿದ 6 ವರ್ಷದ ಬಾಲಕಿಯ ಕೊಂದ ಪ್ರಿನ್ಸಿಪಾಲ್‌!

12:22 AM Sep 25, 2024 | Team Udayavani |

ಅಹ್ಮದಾಬಾದ್‌: ಗುಜರಾತ್‌ನಲ್ಲಿ 6 ವರ್ಷದ ಬಾಲಕಿಯ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಶಾಲಾ ಪ್ರಾಂಶುಪಾಲರೇ ಅತ್ಯಾಚಾರಕ್ಕೆ ಪ್ರತಿರೋಧಿಸಿದ ಬಾಲಕಿಯನ್ನು ಉಸಿರುಗಟ್ಟಿಸಿಕೊಂದು, ದೇಹವನ್ನು ಶಾಲಾ ಆವರಣದೊಳಗೆ ಎಸೆದಿರುವುದು ಬೆಳಕಿಗೆ ಬಂದಿದೆ.

Advertisement

ಆರೋಪಿಯನ್ನು ಗೋವಿಂದ್‌ ನಟ್‌ (52) ಎಂದು ಗುರುತಿಸಲಾಗಿದೆ. ಬಾಲಕಿ ಕೊಲೆ ಕುರಿತು ಪ್ರಶ್ನಿಸಿದಾಗ, ಆಕೆಯನ್ನು ಎಂದಿನಂತೆ ಶಾಲೆಗೆ ಬಿಟ್ಟು ಇನ್ನೊಂದೆಡೆ ತೆರಳಿದ್ದಾಗಿ ತಿಳಿಸಿದ್ದರು.

ಅನುಮಾನಗೊಂಡ ಪೊಲೀಸರು ತೀವ್ರವಾಗಿ ವಿಚಾರಣೆಗೊಳಪಡಿಸಿದಾಗ ತಪ್ಪೊಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next