Advertisement

2ನೇ ಎಲಿಜಬೆತ್‌ ಮೊಮ್ಮಗಳ ರಹಸ್ಯ ವಿವಾಹ

10:05 AM Jul 18, 2020 | mahesh |

ಲಂಡನ್‌: ಇಂಗ್ಲೆಂಡ್‌ನ‌ ರಾಣಿ 2ನೇ ಎಲಿಜಬೆತ್‌ನ ಮೊಮ್ಮಗಳು, ರಾಜಕುಮಾರಿ ಬಿಯಾಟ್ರಿಸ್‌ ಶುಕ್ರವಾರ ವಿಂಡ್ಸರ್‌ನಲ್ಲಿ ನಡೆದ ರಹಸ್ಯ ಸಮಾರಂಭದಲ್ಲಿ ವಿವಾಹವಾಗಿದ್ದಾರೆ ಎಂದು ಬ್ರಿಟಿಷ್‌ ಮಾಧ್ಯಮಗಳು ವರದಿ ಮಾಡಿವೆ. ಪ್ರಿಯಕರ, ರಿಯಲ್‌ ಎಸ್ಟೇಟ್‌ ಉದ್ಯಮಿ ಎಡೊರ್ಡೊ ಮ್ಯಾಪೆಲ್ಲಿ ಮಾಝಿ ಅವರನ್ನು ಬಿಯಾಟ್ರಿಸ್‌ ಕೈಹಿಡಿದಿದ್ದಾರೆ. ರಾಜ ಮನೆತನದ ಹಿರಿಯರು ಸೇರಿದಂತೆ 20 ಗಣ್ಯ ವ್ಯಕ್ತಿಗಳ ಸಮ್ಮುಖದಲ್ಲಿ ಈ ಸರಳ ವಿವಾಹ ಏರ್ಪಟ್ಟಿದೆ. ಮೇ ತಿಂಗಳಿನಲ್ಲಿ 150 ಅತಿಥಿಗಳ ಸಮ್ಮುಖದಲ್ಲಿ ಲಂಡನ್‌ನ ಸೇಂಟ್‌ ಜೇಮ್ಸ್‌ ಪ್ಯಾಲೇಸ್‌ನ ಚಾಪೆಲ್‌ ರಾಯಲ್‌ನಲ್ಲಿ ಬಿಯಾಟ್ರಿಸ್‌ ಅದ್ಧೂರಿ ವಿವಾಹಕ್ಕೆ ಸಾಕ್ಷಿಯಾಗಬೇಕಿತ್ತು. ಆದರೆ, ಲಾಕ್‌ಡೌನ್‌ ಕಾರಣದಿಂದಾಗಿ ಮದುವೆ ಮುಂದೂಡಲ್ಪಟ್ಟಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next