Advertisement

71 ವರ್ಷದ ಪ್ರಿನ್ಸ್ ಚಾರ್ಲ್ಸ್ ಗೂ ಕೋವಿಡ್ 19 ವೈರಸ್ ಪಾಸಿಟಿವ್

11:08 AM Mar 27, 2020 | Hari Prasad |

ಲಂಡನ್: ವಿಶ್ವವ್ಯಾಪಿಯಾಗಿರುವ ಕೋವಿಡ್ 19 ವೈರಸ್ ಮಹಾಮಾರಿ ಇದೀಗ ಲಂಡನ್ ಅರಮನೆಗೂ ಕಾಲಿಟ್ಟಿದೆ. ಪ್ರಿನ್ಸ್ ಚಾರ್ಲ್ಸ್ ಅವರಲ್ಲಿ ಈ ವೈರಸ್ ಸೋಂಕಿನ ಪಾಸಿಟಿವ್ ಲಕ್ಷಣಗಳು ದೃಢಪಟ್ಟಿವೆ ಎಂದು ಅರಮನೆಯ ಮೂಲಗಳು ಇಂದು ತಿಳಿಸಿವೆ.

Advertisement

ಸ್ಕಾಟ್ ಲ್ಯಾಂಡ್ ನಲ್ಲಿ ಸೋಂಕು ಪತ್ತೆ ಪರೀಕ್ಷೆಗೆ ಒಳಗಾಗಿದ್ದ ಪ್ರಿನ್ಸ್ ಚಾರ್ಲ್ಸ್ ಅವರ ಪರೀಕ್ಷಾ ವರದಿಗಳು ಪಾಸಿಟಿವ್ ಬಂದಿದೆ ಎಂದು ತಿಳಿದುಬಂದಿದೆ. ಇನ್ನು ಪ್ರಿನ್ಸ್ ಅವರ ಜೊತೆಯಲ್ಲಿಯೇ ಪರೀಕ್ಷೆಗೊಳಗಾಗಿದ್ದ ಅವರ ಪತ್ನಿ ಕಾರ್ನ್ ವಾಲ್ ಡ್ಯೂಕ್ ಕ್ಯಾಮಿಲ್ಲ ಅವರಲ್ಲಿ ವೈರಸ್ ಸೋಂಕಿನ ಲಕ್ಷಣ ನೆಗೆಟಿವ್ ಬಂದಿದೆ.

ಇದೀಗ ಪ್ರಿನ್ಸ್ ಚಾರ್ಲ್ಸ್ ಅವರು ಐಸೊಲೇಷನ್ ಗೆ ಒಳಗಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಪ್ರಿನ್ಸ್ ಅವರ ದೇಹದಲ್ಲಿ ಕೋವಿಡ್ 19 ವೈರಸ್ ನಅಲ್ಪ ಪ್ರಮಾಣದ ಲಕ್ಷಣಗಳು ಕಾಣಿಸಿಕೊಂಡಿರುವುದು ಹೊರತುಪಡಿಸಿದರೆ ಉಳಿದಂತೆ ಅವರ ಆರೋಗ್ಯ ಸ್ಥಿರವಾಗಿದೆ ಹಾಗೂ ಕಳೆದ ವಾರ ಪೂರ್ತಿ ಅವರು ಮನೆಯಲ್ಲಿದ್ದು ತಮ್ಮ ದೈನಂದಿನ ಕೆಲಸ ಕಾರ್ಯಗಳಲ್ಲಿ ನಿರತರಾಗಿದ್ದರು ಎಂಬ ಮಾಹಿತಿ ಇದೀಗ ಲಭ್ಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next