Advertisement

ಯೋಜನೆಗಳಿಗೆ ಪ್ರಮೋದ್‌ ಮಧ್ವರಾಜ್‌ ಅವರಿಂದ ತಡೆ

08:59 PM Apr 15, 2019 | Team Udayavani |

ಉಡುಪಿ: ಮೀನುಗಾರಿಕಾ ಸಚಿವರಾಗಿದ್ದ ಪ್ರಮೋದ್‌ ಮಧ್ವರಾಜ್‌ ಅವರು ಯಾವುದೇ ಯೋಜನೆಗಳನ್ನು ಜಾರಿಗೆ ತಂದಿಲ್ಲ. ಇದ್ದ ಯೋಜನೆಗಳಿಗೆ ತಡೆ ನೀಡಿ ಮೀನುಗಾರರಿಗೆ ಸಮಸ್ಯೆ ಉಂಟುಮಾಡಿದ್ದಾರೆ ಎಂದು ಶಾಸಕ ರಘುಪತಿ ಭಟ್‌ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

Advertisement

ಸಚಿವರಾಗಿ ಪ್ರಮೋದ್‌ ಮಧ್ವರಾಜ್‌ ಸಂಪೂರ್ಣ ವೈಫ‌ಲ್ಯ ಕಂಡಿದ್ದಾರೆ. ಆದರೆ ಚುನಾವಣೆ ಪ್ರಚಾರಕ್ಕಾಗಿ ಉತ್ತಮ ಕಾರ್ಯ ಮಾಡಿದ್ದೇನೆ ಎನ್ನುವ ಮೂಲಕ ಸುಳ್ಳು ಹೇಳಿಕೆ ನೀಡುತ್ತಿದ್ದಾರೆ. ಪ್ರಮೋದ್‌ ಮಧ್ವರಾಜ್‌ ಅವರು ರಾಜ್ಯದ ಮೀನುಗಾರಿಕೆ ಸಚಿವರಾಗುವ ಮೊದಲು ಕರಾವಳಿಯ ಮೀನುಗಾರರಿಗೆ ಕರರಹಿತ ಡೀಸೆಲ್‌ ಅನ್ನು ನೇರವಾಗಿ ಬಂಕ್‌ಗಳಲ್ಲಿ ವಿತರಿಸಲಾಗುತ್ತಿತ್ತು. ಆದರೆ ಅವರು ಸಚಿವರಾದ ಅನಂತರ ಮೀನುಗಾರರನ್ನು ಸಂಶಯಾಸ್ಪದವಾಗಿ ನೋಡಿ ಬಂಕ್‌ಗಳಲ್ಲಿ ದೊರಕುತ್ತಿದ್ದ ಕರರಹಿತ ಡೀಸೆಲ್‌ ತಡೆಹಿಡಿದು ಇದಕ್ಕೆ ಸಂಬಂಧಿಸಿದ ತೆರಿಗೆಯನ್ನು ಮೀನುಗಾರರ ಖಾತೆಗೆ ಪಾವತಿ ಸಲು ಆದೇಶಿಸಿದರು. ಬೋಟ್‌ ಖಾತೆಗೆ ಜಮೆ ಆಗಬೇಕಿದ್ದ ತೆರಿಗೆ ಸಬ್ಸಿಡಿ ಹಣವನ್ನು ಖಾತೆಗೂ ಜಮೆಗೊಳಿಸದೆ ಮೀನುಗಾರರು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿಸುವಂತೆ ಮಾಡಿದ್ದಾರೆ ಎಂದರು.

ಹೆಚ್ಚುವರಿ ಡೀಸೆಲ್‌ ನೀಡಿಲ್ಲ
ದಿನನಿತ್ಯ ಮೀನುಗಾರಿಕೆ ಬೋಟ್‌ ಒಂದಕ್ಕೆ ಪ್ರತಿನಿತ್ಯ 300 ಲೀ.ನಿಂದ 500 ಲೀ. ಡೀಸೆಲ್‌ ವಿತರಿಸಬೇಕೆಂದು ಆದೇಶವಾಗಿದ್ದರೂ ಪ್ರಮೋದ್‌ ಅವರು ಇದನ್ನು ಸಂಪೂರ್ಣ ನಿರ್ಲಕ್ಷಿಸಿ ಒಂದು ಲೀ. ಕೂಡ ಹೆಚ್ಚುವರಿ ಡೀಸೆಲ್‌ ನೀಡಿಲ್ಲ ಎಂದರು.

ಮೀನುಗಾರರು ಸಂಕಷ್ಟಕ್ಕೆ
ಮತ್ಸಾéಶ್ರಯ ಯೋಜನೆಯಡಿಯಲ್ಲಿ ಮೀನುಗಾರರ ಮನೆ ನಿರ್ಮಾಣಕ್ಕೆ ಪ್ರತಿ ವರ್ಷ 400 ಮನೆಗಳನ್ನು ಒದಗಿಸ ಲಾಗುತ್ತಿತ್ತು. ಆದರೆ ಈ ಯೋಜನೆಯನ್ನು ಮೀನುಗಾರಿಕೆ ಇಲಾಖೆಯಿಂದ ರಾಜೀವ್‌ ಗಾಂಧಿ ವಸತಿ ನಿಗಮಕ್ಕೆ ನೀಡುವ ಮೂಲಕ ಮೀನುಗಾರರು ಸಂಕಷ್ಟಕ್ಕೆ ಸಿಲುಕುವಂತೆ ಮಾಡಲಾಗಿದೆ. ಇದಕ್ಕೆ ಪ್ರಮೋದ್‌ ಮಧ್ವರಾಜ್‌ ನೇರ ಕಾರಣ ಎಂದವರು ಆರೋಪಿಸಿದರು.

ಖಾಸಗಿಯವರಿಗೆ ಗುತ್ತಿಗೆ
ಮೀನುಗಾರರ ಸಂಘದ ನೇತೃತ್ವದಲ್ಲಿ ಟೆಗ್ಮಾ ಶಿಪ್‌ ಯಾರ್ಡ್‌ನ ವಿರುದ್ಧ ಹೋರಾಟ ಮಾಡಿ ಅದರಿಂದ ಸ್ಲಿಪ್‌ ವೇಯನ್ನು ಸುಮಾರು 1.25 ಕೋ.ರೂ. ನಿರ್ವಹಣೆ ಮಾಡಲು ನಿರ್ಧಾರವಾಗಿತ್ತಾದರೂ ಅದನ್ನು ಮೀನುಗಾರಿಕೆ ಸಂಘಕ್ಕೆ ನೀಡಲಿಲ್ಲ. ಖಾಸಗಿಯವರಿಗೆ ಗುತ್ತಿಗೆ ನೀಡಲು ಹುನ್ನಾರ ಮಾಡಿದ ಪರಿಣಾಮ ಇಂದಿಗೂ ಅದು ಮೀನುಗಾರರ ಸಂಘದ ನಿರ್ವಹಣೆಗೆ ಸಿಗದಿರಲು ಕಾರಣವಾಗಿದೆ ಎಂದವರು ಆರೋಪಿಸಿದರು.

Advertisement

ಮೀನುಗಾರ ಮಹಿಳೆಯರಿಗೆ ತೊಂದರೆ
ಮಲ್ಪೆಯಲ್ಲಿ ಮಹಿಳಾ ಒಣ ಮೀನುಗಾರ ಮಹಿಳೆಯರು ಹಲವಾರು ವರ್ಷಗಳಿಂದ ಮೀನು ಒಣಗಿಸುತ್ತಿದ್ದರು. ಆದರೆ ಆ ಸ್ಥಳವನ್ನು ಅವರಿಂದ ಕಿತ್ತುಕೊಳ್ಳುವ ಹುನ್ನಾರ ಮಾಡಿ ಅಲ್ಲಿ ಬಸ್‌ ಸಂಕೀರ್ಣ ನಿರ್ಮಾಣ ಮಾಡಲು ತೀರ್ಮಾನಿಸಿದ್ದರು. ಇದರಿಂದ ಮೀನುಗಾರ ಮಹಿಳೆಯರು ಸಾಕಷ್ಟು ತೊಂದರೆ ಅನುಭವಿಸಿದರು. ಆದರೆ ವಿಧಾನಸಭೆ ಚುನಾವಣೆಯಲ್ಲಿ ಅವರು ಸೋಲನುಭವಿಸಿದ ಕಾರಣ ಇದು ಸಾಕಾರಗೊಳ್ಳಲಿಲ್ಲ ಎಂದರು.

ಬಿಜೆಪಿ ಸರಕಾರವು ಮೀನುಗಾರ ಮಹಿಳೆಯರಿಗೆ ಶೇ.3ರ ಬಡ್ಡಿ ದರದಲ್ಲಿ ತಲಾ 50 ಸಾವಿರ ರೂ.ನಂತೆ 10 ಜನರ ಗುಂಪಿಗೆ 5 ಲಕ್ಷ ರೂ. ಸಾಲ ನೀಡುವ ಯೋಜನೆಯನ್ನು ಜಾರಿಗೆ ತಂದಿತ್ತು. ಆದರೆ ಪ್ರಮೋದ್‌ ಮಧ್ವರಾಜ್‌ ಸಚಿವ ರಾದ ಅನಂತರ ಇದನ್ನು ಸಂಪೂರ್ಣ ಸ್ಥಗಿತಗೊಳಿಸಿ ಮೀನುಗಾರ ಮಹಿಳೆಯರು ಸಮಸ್ಯೆ ಎದುರಿಸುವಂತೆ ಮಾಡಿದರು. ನಾಡದೋಣಿ ಮೀನುಗಾರರಿಗೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯಿಂದ ಸರಬರಾಜಾಗುತ್ತಿದ್ದ ಸೀಮೆಎಣ್ಣೆಯಲ್ಲಿ ವ್ಯತ್ಯಯವಾಗಲೂ ಪ್ರಮೋದ್‌ ಮಧ್ವರಾಜ್‌ ಅವರು ನೇರ ಕಾರಣ ಎಂದು ಆರೋಪಿಸಿದರು.

ಮೀನುಗಾರರ ಕುಟುಂಬವನ್ನು ಭೇಟಿ ಮಾಡಿಲ್ಲ
ಇತ್ತೀಚೆಗೆ ಸಂಭವಿಸಿದ ದುರ್ಘ‌ಟನೆ ಯಲ್ಲಿ ಸುವರ್ಣ ತ್ರಿಭುಜ ಬೋಟಿನ 7ಜನ ಮೀನುಗಾರರು ನಾಪತ್ತೆಯಾದ ಕುಟುಂಬದವರನ್ನು ಮುಖ್ಯಮಂತ್ರಿ ಕುಮಾರಸ್ವಾಮಿಯವರು ಜಿಲ್ಲೆಗೆ ಆಗಮಿಸಿದ ಸಂದರ್ಭದಲ್ಲಿ ಭೇಟಿ ಮಾಡಿಲ್ಲ. ಸಂತ್ರಸ್ತ ಕುಟುಂಬದವರನ್ನು ಭೇಟಿ ಮಾಡದೆ ಅಲ್ಲಿಂದ ಕೇವಲ 1 ಕಿ.ಮೀ. ಅಂತರದಲ್ಲಿರುವ ಪ್ರಮೋದ್‌ ಮಧ್ವರಾಜ್‌ ಅವರ ಮನೆಗೆ ಭೇಟಿ ನೀಡಿ ಭೋಜನ ಸ್ವೀಕರಿಸಿದ್ದಾರೆ. ಸಂತ್ರಸ್ತ ಕುಟುಂಬದವರನ್ನು ಭೇಟಿ ಮಾಡಿಸು ವಂತಹ ಕೆಲಸವನ್ನೂ ಪ್ರಮೋದ್‌ ಮಧ್ವರಾಜ್‌ ಮಾಡಿಲ್ಲ. ಆದರೆ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಸಂತ್ರಸ್ತ ಮೀನುಗಾರರ ಕುಟುಂಬ ವನ್ನು ಭೇಟಿಯಾಗಿ ಸಾಂತ್ವನ ನೀಡಿದ್ದರು. ಮೀನುಗಾರರ ಪತ್ತೆಗೆ ಕೇಂದ್ರ ಸರಕಾರ ಕೈಗೊಂಡ ರಕ್ಷಣಾ ಕಾರ್ಯದ ಬಗ್ಗೆ ಅವರಿಗೆ ತಿಳಿಸುವಂತಹ ಕೆಲಸವನ್ನೂ ಮಾಡಿದ್ದಾರೆ. ಮುಂದೆ ಕೂಡ ನೌಕೆ, ಸೇನಾಧಿಕಾರಿಗಳೊಂದಿಗೆ ಚರ್ಚಿಸಿ ಶ್ರಮ ವಹಿಸುವುದಾಗಿ ತಿಳಿಸಿದರು.

ವಿಧಾನ ಪರಿಷತ್‌ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ 24ಕ್ಕೂ ಹೆಚ್ಚು ಸ್ಥಾನಗಳಲ್ಲಿ ಜಯಗಳಿಸಲಿದೆ. ಈ ಬಗ್ಗೆ ಗುಪ್ತಚರ ಇಲಾಖೆ ಯೂ ಮಾಹಿತಿ ನೀಡಿದೆ ಎಂದರು. ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕಾರ್ಯ ಕರ್ತರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ ಎಂದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಶ್‌ಪಾಲ್‌ ಸುವರ್ಣ, ಉಪಾಧ್ಯಕ್ಷ ಪ್ರವೀಣ್‌ ಕುಮಾರ್‌ ಶೆಟ್ಟಿ ಕಪ್ಪೆಟ್ಟು, ತಾ.ಪಂ.ಸದಸ್ಯ ಶರತ್‌ ಕುಮಾರ್‌, ನಗರ ಬಿಜೆಪಿ ಅಧ್ಯಕ್ಷ ಪ್ರಭಾಕರ ಪೂಜಾರಿ, ಮಲ್ಪೆ ಶಕ್ತಿ ಕೇಂದ್ರದ ಸದಸ್ಯ ತಾರಾನಾಥ ಕುಂದರ್‌, ಮುಖಂಡರಾದ ಪ್ರದೀಪ್‌ ಶೆಟ್ಟಿ, ಮಹೇಶ್‌ ಠಾಕೂರ್‌, ಜಗದೀಶ್‌ ಆಚಾರ್ಯ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next