Advertisement

ಉಜಿರೆ –ಬೆಳಾಲು ರಸ್ತೆ ದುರಸ್ತಿಗೆ ಪ್ರಧಾನಿ ಕಚೇರಿ ಸೂಚನೆ !

02:50 AM Jul 19, 2017 | Team Udayavani |

ಬೆಳ್ತಂಗಡಿ: ಉಜಿರೆಯಿಂದ ಬೆಳಾಲಿಗೆ ಹೋಗುವ ರಸ್ತೆಯ ದುಃಸ್ಥಿತಿ ಕುರಿತು “ಉದಯವಾಣಿ’ ಕೆಲ ದಿನಗಳ ಹಿಂದೆ ವರದಿ ಮಾಡಿತ್ತು. ಸಾರ್ವಜನಿಕರ ಸಮಸ್ಯೆಗೆ ಅಧಿಕಾರಿಗಳು ಸ್ಪಂದಿಸಿರಲೇ ಇಲ್ಲ. ಈಗ ಸ್ಥಳೀಯ ಎಂಜಿನಿಯರ್‌ ಜಗದೀಶ್‌ ಪ್ರಸಾದ್‌ ಅವರು ಪ್ರಧಾನಿ ಕಚೇರಿಗೆ ನೀಡಿದ ದೂರಿನಂತೆ ಸ್ಪಂದಿಸಲು ರಾಜ್ಯ ಸರಕಾರಕ್ಕೆ ಸೂಚನೆ ಬಂದಿದೆ. 

Advertisement

ಜು. 17ರಂದು ಬೆಳಗ್ಗೆ ಅವರು ಪ್ರಧಾನಿ ಕಚೇರಿಗೆ ದೂರು ನೀಡಿದ್ದು ಸಂಜೆಯ ವೇಳೆಗೆ ದೂರನ್ನು ರಾಜ್ಯ ಸರಕಾರದ ಲೋಕೋಪಯೋಗಿ ಇಲಾಖೆಗೆ ಕಳುಹಿಸಿ ಮುಂದಿನ ಕ್ರಮ ಕೈಗೊಂಡ ವರದಿ ಕಳುಹಿಸುವ ಸೂಚನೆಯ ಮಾರುತ್ತರ ಬಂದಾಗಿದೆ. ಆದರೆ ಜು.18ರಂದು ರಾಜ್ಯ ಸರಕಾರದ ಅಧಿಕಾರಿಗಳನ್ನು ಸಂಪರ್ಕಿಸಿ ಅವರಿಂದ ಮರುಸ್ಪಂದನ ಪಡೆಯುವಲ್ಲಿ ಅವರು ಹೈರಾಣಾಗಿದ್ದಾರೆ. ಒಬ್ಬರು ಇನ್ನೊಬ್ಬರ ಹೆಗಲಿಗೆ ಜವಾಬ್ದಾರಿ ದಾಟಿಸುತ್ತಾ ಕಾಲಹರಣ ಮಾಡಿದರೇ ವಿನಾ ರಸ್ತೆಯ ದುಃಸ್ಥಿತಿಗೆ ಏನು ಕ್ರಮ ಕೈಗೊಳ್ಳುತ್ತಾರೆ ಎಂದು ತಿಳಿಯುವಲ್ಲಿ ಅಸಮರ್ಥರಾಗಬೇಕಾಯಿತು. 

ಸಾವಿರಾರು ಬಳಕೆದಾರರು 
ಶೆ„ಕ್ಷಣಿಕ ಕೇಂದ್ರ, ವ್ಯಾಪಾರೀ ಕೇಂದ್ರವೆಂದು ಹೆಸರುವಾಸಿಯಾಗಿರುವ ಉಜಿರೆ ಪೇಟೆಯ ಸನಿಹವೇ ಬೆಳಾಲು ಎಂಬಲ್ಲಿಗೆ ಹಾದು ಹೋಗುವ ರಸ್ತೆಯಿದು. ಉಜಿರೆಯಿಂದ ಬೆಳಾಲು ರಸ್ತೆಯಲ್ಲಿ ನಿತ್ಯ ಪ್ರಯಾಣಿಸುವ ಸಾವಿರಾರು ವಿದ್ಯಾರ್ಥಿಗಳು, ಸಾರ್ವಜನಿಕರು, ವಾಹನಗಳ ಚಾಲಕರು – ಮಾಲಕರು ಜಪಿಸುವಂತಾಗಿದೆ. ವಾಹನಗಳು ಸಂಚರಿಸುವುದೇ ಕಷ್ಟದಲ್ಲಿ. ಅದರ ಜತೆ ಪಾದಚಾರಿಗಳು ನಡೆದಾಡಲು ಇನ್ನೂ  ಕಷ್ಟ ಎನ್ನುತ್ತಾರೆ ಸ್ಥಳೀಯರು 
ಜನವಸತಿ ಪ್ರದೇಶಗಳು ಇಲ್ಲಿನ ಉಂಡ್ಯಾಪು ನಗರ, ಶಿವಾಜಿ ನಗರ, ಮಯೂರ ನಗರ, ಕುವೆಂಪು ನಗರ, ಓಡಲ, ಮಾಚಾರು, ಬೆಳಾಲು ಮೊದಲಾದ ಕಡೆಗಳಿಗೆ ಹೋಗುವವರಿಗೆ ಕಷ್ಟಕರವಾಗಿದೆ. ಸ್ವಂತ ದ್ವಿಚಕ್ರ ವಾಹನ ಇದ್ದವರಿಗೆ ವಾಹನ ಇದ್ದರೂ ಉಪಯೋಗಕ್ಕೆ ಬಾರದಂತಿದೆ. ರಸ್ತೆಯಲ್ಲಿ ದ್ವಿಚಕ್ರ ಓಡಿಸುವಂತಿಲ್ಲ. ಮಕ್ಕಳನ್ನು ದ್ವಿಚಕ್ರದಲ್ಲಿ ಕುಳ್ಳಿರಿಸಿ ಶಾಲೆಗೆ ಬಿಡುವಂತಿಲ್ಲ. ಉಜಿರೆಯಿಂದ ಬೆಳಾಲು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸಂಪರ್ಕ ರಸ್ತೆ ಬೆಳಾಲು ಕ್ರಾಸ್‌ನಿಂದ ಸುಮಾರು ಮೂರು ಕಿ.ಮೀ. ದೂರ ತೀರಾ ಹದಗೆಟ್ಟಿದೆ.  ಅದರಲ್ಲೂ ಒಂದು ಕಿ.ಮೀ. ರಸ್ತೆಯಂತೂ ನಡೆದಾಡಲು ಸಾಧ್ಯವಿಲ್ಲ. 

ಉಜಿರೆಯ ರಾಜ್ಯ ಹೆದ್ದಾರಿಗೆ ತಾಗಿಕೊಂಡಿರುವ ಬೆಳಾಲು ರಸ್ತೆ ಪೇಟೆಯಿಂದಲೇ ಹೊಂಡ-ಗುಂಡಿಗಳಿಂದ ಕೂಡಿದೆ. ಈ ರಸ್ತೆಯ ಮೂಲಕ ದಿನಕ್ಕೆ ನೂರಾರು ರಿûಾ, ಜೀಪುಗಳು ಸರ್ಕಸ್‌ ಮಾಡಿಕೊಂಡೇ ಸಂಚರಿಸುತ್ತವೆ. ಸರಕಾರಿ ಬಸ್ಸುಗಳೂ ಹಾದು ಹೋಗುತ್ತವೆ. ರಸ್ತೆಯ ಬಗ್ಗೆ ಮಳೆಗಾಲದ ಮುಂಚಿತವಾಗಿ ಮಾಧ್ಯಮಗಳ ಮೂಲಕ ಸಾಕಷ್ಟು ಬಾರಿ ಸಂಬಂಧಪಟ್ಟವರ ಗಮನಸೆಳೆದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.  ಕೇಂದ್ರ ಸರಕಾರದ ಸಿಆರ್‌ಎಫ್‌ ಅನುದಾನದಲ್ಲಿ ಈ ರಸ್ತೆ ಆಗುತ್ತದೆ. ಟೆಂಡರ್‌ ಕರೆಯಲಾಗಿದೆ ಎಂದೂ ಹೇಳಲಾಗುತ್ತಿದ್ದರೂ ಯಾರಿಗೂ ಸರಿಯಾದ ಮಾಹಿತಿ ಇಲ್ಲವಾಗಿದೆ.  ರಿûಾ ಚಾಲಕರು ಒಮ್ಮೆ ಶ್ರಮದಾನ ಮಾಡಿ ತಾತ್ಕಾಲಿಕವಾಗಿ ಭೀಮಗಾತ್ರದ ಹೊಂಡಗಳನ್ನು ಮುಚ್ಚಿ ಸಂಚಾರ ಯೋಗ್ಯ ರಸ್ತೆಯಾಗಿ ಮಾಡಿದರು. ಹೊಂಡಗಳಿಂದಲೇ  ತುಂಬಿರುವ ರಸ್ತೆಯ ಬಗ್ಗೆ ಸಾರ್ವಜನಿಕರು ದಿನಾಲೂ ಶಾಪ ಹಾಕಿಯೇ ತೆರಳುವಂತಾಗಿದೆ.

ಅಧಿಕಾರಿ ಸ್ಪಂದನೆ ಸಾಲದು 
ಹದಗೆಟ್ಟ ರಸ್ತೆಯ ಬಗ್ಗೆ ಯಾರಿಗೂ ಗಮನವಿಲ್ಲ. ಸಾರ್ವಜನಿಕರು ನೀಡಿದ  ಮನವಿಗೆ ಸ್ಪಂದನೆ ಸಿಗುತ್ತಿದ್ದರೆ ಸಂಬಂಧಪಟ್ಟ ಇಲಾಖೆ ಮಳೆಗಾಲದ ಮುಂಚೆಯೇ ಹೊಂಡ ಬಿದ್ದ ಕಡೆ ಸರಿಯಾದ ದುರಸ್ತಿ ಮಾಡಿದ್ದರೆ ಇಷ್ಟು ಹದಗೆಡು
ತ್ತಿರಲಿಲ್ಲ. ಶಾಲಾ ಮಕ್ಕಳಿಗಂತೂ ನಡೆದಾಡಲು ತುಂಬಾ ಸಮಸ್ಯೆಯಾಗಿದೆ. ನಾಗರಿಕರು ಸಹನೆಯಿಂದ ಕಾಯುತ್ತಿದ್ದಾರೆ. ಪ್ರಧಾನಿ ಕಚೇರಿಗೆ ದೂರು ನೀಡಿದ ದಿನವೇ ಸ್ಪಂದನೆ ಬಂದಿದೆ. ಆದರೆ ರಾಜ್ಯದಲ್ಲಿ ಮಾತ್ರ ಅಧಿಕಾರಿಗಳ ಸ್ಪಂದನೆ  ಸಾಲದು.
– ಜಗದೀಶ್‌ ಪ್ರಸಾದ್‌, (ಎಂಜಿನಿಯರ್‌) ಸ್ಥಳೀಯ ನಿವಾಸಿ, ಉಜಿರೆ

Advertisement

ಶಾಸಕರ ಗಮನಕ್ಕೆ ತರಲಾಗಿದೆ
ಉಜಿರೆ-ಬೆಳಾಲು ರಸ್ತೆಯ ಮೂರು ಕಿ.ಮೀ. ಹದಗೆಟ್ಟಿರುವ ಬಗ್ಗೆ ನನ್ನ ಗಮನಕ್ಕೆ ಬಂದ ತತ್‌ಕ್ಷಣ ಶಾಸಕರ ಗಮನಕ್ಕೆ ತಂದಿದ್ದೇನೆ. ಈ ರಸ್ತೆಯ ದುರಸ್ತಿ ಮಾಡುವಂತೆ ವಿನಂತಿಸಿದ್ದೇನೆ. ಜಿಲ್ಲಾ ಪಂಚಾಯತ್‌ ಸಾಮಾನ್ಯ ಸಭೆಯಲ್ಲೂ ಈ ರಸ್ತೆಯ ಬಗ್ಗೆ ಗಮನ ಸೆಳೆಯುತ್ತೇನೆ. ನನ್ನ ಕಡೆಯಿಂದ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. 
-ನಮಿತಾ, ಸದಸ್ಯರು, ಉಜಿರೆ ಜಿಲ್ಲಾ ಪಂಚಾಯತ್‌ ಕ್ಷೇತ್ರ

ತತ್‌ಕ್ಷಣ ರಿಪೇರಿಗೆ ಒತ್ತಾಯ 
ಉಜಿರೆ-ಬೆಳಾಲು ರಸ್ತೆಯನ್ನು ಉಜಿರೆಯಿಂದ ಕುಪ್ಪೆಟ್ಟಿ ರಸ್ತೆಯಾಗಿ ಮೇಲ್ದರ್ಜೆಗೆ ಏರಿಸಲಾಗಿದ್ದ  ಕೇಂದ್ರ ಸರಕಾರದ ಸಿಆರ್‌ಎಫ್‌ ಅನುದಾನದಲ್ಲಿ 9 ಕೋ.ರೂ. ಮಂಜೂರಾಗಿದೆ. ಅದಕ್ಕೆ ಟೆಂಡರನ್ನು ಮೂರು ಬಾರಿ ಕರೆಯಲಾಗಿದ್ದರೂ ಅದು ರದ್ದುಗೊಂಡಿದೆ. ನೆರಿಯ- ಪುದುವೆಟ್ಟು ರಸ್ತೆಗೆ 9 ಕೋ.ರೂ., ಮುಂಡಾಜೆ-ಧರ್ಮಸ್ಥಳ ರಸ್ತೆಗೆ 7 ಕೋ.ರೂ. ಹಾಗೂ ಈ ರಸ್ತೆಗೆ 9 ಕೋ.ರೂ. ಸಿಆರ್‌ಎಫ್‌ನಲ್ಲಿ ಆಗಿದೆ. ಟೆಂಡರ್‌ ಆದಷ್ಟು ಬೇಗ ಆದರೆ ರಸ್ತೆ ಸರಿಯಾಗುತ್ತದೆ. ಸದ್ಯಕ್ಕೆ ರಿಪೇರಿ ಮಾಡುವಂತೆ ತಾಲೂಕು ಪಂಚಾಯತ್‌ನ ಸಾಮಾನ್ಯ ಸಭೆಯಲ್ಲಿ ಒತ್ತಾಯಿಸುತ್ತೇನೆ. 
-ಶಶಿಧರ್‌ ಎಂ., ಸದಸ್ಯರು, ಉಜಿರೆ ತಾ. ಪಂ.  ಕ್ಷೇತ್ರ

– ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next